More

  ಪತಂಜಲಿ ಮಹಿಳಾ ಮಹಾ ಸಮ್ಮೇಳನ: ಸಾಧ್ವಿ ಡಾ. ದೇವ ಪ್ರಿಯಾ ಜೀ ಹುಬ್ಬಳ್ಳಿಗೆ ಆಗಮನ

  ಹುಬ್ಬಳ್ಳಿ: ಹರಿದ್ವಾರದ ಪತಂಜಲಿ ಯೋಗ ಪೀಠ ಮುಖ್ಯ ಕೇಂದ್ರೀಯ ಪ್ರಭಾರಿಗಳಾದ ಪೂಜ್ಯ ಸಾಧ್ವಿ ಡಾ. ದೇವ ಪ್ರಿಯಾ ಜೀ ಅವರು ನ.26 (ಭಾನುವಾರ) ರಂದು ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಆ ನಂತರ ರಸ್ತೆ ಮಾರ್ಗವಾಗಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ಪ್ರಯಾಣ ಬೆಳೆಸಿ ಪತಂಜಲಿ ಮಹಿಳಾ ಮಹಾ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. 

  ಹರಿದ್ವಾರದ ಪತಂಜಲಿ ಯೋಗ ಪೀಠ ಮಾರ್ಗದರ್ಶನದಲ್ಲಿ ರಾಣೆಬೆನ್ನೂರಿನಲ್ಲಿ ಭಾನುವಾರದಂದು ಬೆಳಗ್ಗೆ 9 ಗಂಟೆಗೆ ಪತಂಜಲಿ ಮಹಿಳಾ ಮಹಾ ಸಮ್ಮೇಳನ ನಡೆಯಲಿದೆ. ಈ ಸಂದರ್ಭದಲ್ಲಿ ಕಳೆದ 15 – 20 ವರ್ಷಗಳಿಂದ ಸತತವಾಗಿ ಉಚಿತ ಯೋಗ ತರಬೇತಿ ನೀಡುತ್ತಿರುವ ಉತ್ತರ ಕರ್ನಾಟಕದ ಪತಂಜಲಿ ಮಹಿಳಾ ಯೋಗ ಶಿಕ್ಷಕರ ಒಂದು ದಿನದ ವಿಶೇಷ ಕಾರ್ಯಾಗಾರವನ್ನೂ ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಮಾರ್ಗದರ್ಶನ ಮಾಡಲು ಪೂಜ್ಯ ಸಾಧ್ವಿ ಡಾ. ದೇವ ಪ್ರಿಯಾ ಜೀ ಅವರು ಆಗಮಿಸುತ್ತಿದ್ದಾರೆ.

  ಬೆಳಗ್ಗೆ 9 ಗಂಟೆಗೆ ಕರ್ನಾಟಕದ ಪತಂಜಲಿ ಯೋಗ ಪೀಠ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆಯುತ್ತಿರುವ ” ಯೋಗ ಉತ್ಸವ ” ಸಮಾರಂಭವನ್ನು ಯೋಗ ದೀಪ ಬೆಳಗಿಸಿ ನಾಡ ಗೀತೆ ಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

  ಪೂಜ್ಯ ಸಾಧ್ವಿ ಡಾ. ದೇವ ಪ್ರಿಯಾ ಜೀ ಅವರು ಈ ಕಾರ್ಯಾಗಾರದಲ್ಲಿ, ” ನಿತ್ಯ ಜೀವನದಲ್ಲಿ ಯೋಗದ ಮಹತ್ವ, ರೋಗಾನುಸಾರ ಯೋಗ, ಭಾರತೀಯ ಚಿಕಿತ್ಸಾ ಪದ್ಧತಿಗಳ ಪರಿಚಯ, ಆದರ್ಶ ಜೀವನ ಪದ್ಧತಿ, ಆಹಾರ ಚಿಕಿತ್ಸೆ, ಜಲ ಚಿಕಿತ್ಸೆ, ಪ್ರಾಕೃತಿಕ ಚಿಕಿತ್ಸೆಗಳ ಮಾಹಿತಿ, ಆಯುರ್ವೇದ, ಸ್ವದೇಶೀ, ಗುರುಕುಲ ಪದ್ಧತಿ ಶಿಕ್ಷಣ, ರಾಷ್ಟ್ರ ಸೇವೆಯಲ್ಲಿ ಮಹಿಳೆಯರ ಪಾತ್ರ” ಮುಂತಾದ ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ.

  ಯೋಗ ಗುರು ಸ್ವಾಮೀ ರಾಮ ದೇವ ಜೀ ಮಹಾರಾಜ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ, ” ವೈಜ್ಞಾನಿಕವಾಗಿ ಪತಂಜಲಿ ರಿಸರ್ಚ್ ಫೌಂಡೇಶನ್ ನಲ್ಲಿ ಕೈಗೊಂಡ ಸಂಶೋಧನೆಗಳ ಮೂಲಕ ಯೋಗ, ಆಯುರ್ವೇದ, ಪ್ರಾಕೃತಿಕ ಚಿಕಿತ್ಸೆ ಮೂಲಕ ಸಾಮಾನ್ಯ ಖಾಯಿಲೆಗಳಿಂದ ಹಿಡಿದು ಗಂಭೀರ ಖಾಯಿಲೆಗಳನ್ನು ನಿವಾರಣೆ ಮಾಡಿರುವ ಸಾಕ್ಷ್ಯಾಧಾರಿತ ವಿಧಿ ವಿಧಾನಗಳ ಬಗ್ಗೆ ತಿಳಿಸಲಿದ್ದಾರೆ ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಿದ ಮಹಿಳಾ ಸಾಧಕರಿಗೆ ಆಶೀರ್ವಚನ ನೀಡಲಿದ್ದಾರೆ.

  ಈ ಮಹಾ ಸಮ್ಮೇಳನದಲ್ಲಿ ಹುಬ್ಬಳ್ಳಿ – ಧಾರವಾಡ ದಿಂದ 1500 ಕ್ಕೂ ಅಧಿಕ ಮತ್ತು ಉತ್ತರ ಕರ್ನಾಟಕದಿಂದ 5000 ಕ್ಕೂ ಅಧಿಕ ಮಹಿಳಾ ಯೋಗ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕದ ಪತಂಜಲಿ ಯೋಗ ಪೀಠದ ವರಿಷ್ಠ ರಾಜ್ಯ ಪ್ರಭಾರಿಗಳಾದ ಯೋಗ ಗುರು ಭವರಲಾಲ್ ಆರ್ಯ ಅವರು ತಿಳಿಸಿದ್ದಾರೆ. 

  ಮೊದಲ ಬಾರಿಗೆ 13 ಅಪರೂಪದ ಕಾಯಿಲೆಗಳಿಗೆ ‘ಮೇಡ್ ಇನ್ ಇಂಡಿಯಾ’ ಔಷಧಿಗಳು; ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts