More

    ಒಳ್ಳೆಯ ಸಂವಹನಕಾರರಾಗಬೇಕಾ? ಇಲ್ಲಿದೆ ನೋಡಿ ಟಿಪ್ಸ್‌…

    ಒಳ್ಳೆಯ ಸಂವಹನಕಾರರಾಗಬೇಕಾ? ಇಲ್ಲಿದೆ ನೋಡಿ ಟಿಪ್ಸ್‌...

    ಕೆಲವರು ಹೇಳಬೇಕೆಂದಿರೋದು ಒಂದು; ಆದರೆ ಹೇಳೋದು ಇನ್ನೊಂದೇ ಮತ್ತು ಕೇಳಿಸಿಕೊಂಡವರು ಅರ್ಥಮಾಡಿಕೊಳ್ಳೋದು ಮಗದೊಂದೇ. ಇದೆಲ್ಲಾ ಸಂವಹನದ ಕೊರತೆಯಿಂದ ಆದ ಎಡವಟ್ಟುಗಳು. ಸಂವಹನ ಎಂದರೆ ಸಮ್ಯಕ್ ವಹನ ಅರ್ಥಾತ್ ಒಬ್ಬರಿಂದ ಇನ್ನೊಬ್ಬರಿಗೆ ಇಲ್ಲವೇ, ಒಂದೆಡೆಯಿಂದ ಇನ್ನೊಂದೆಡೆಗೆ ಸುಸೂತ್ರವಾಗಿ, ಸಮರ್ಪಕವಾಗಿ ತಲುಪಿಸೋದು, ಸಾಗಿಸೋದು, ರವಾನಿಸೋದು ಎಂದರ್ಥ. ಈ ಚಲನಶೀಲ ಪ್ರಕ್ರಿಯೆಯೇ ‘ವಾಹಿನಿ ವಾಹನ’ ಮುಂತಾದ ಪದಗಳಿಗೆ ಜನ್ಮ ನೀಡಿದ್ದು.

    ಸಂವಹನವೆಂಬುದು ಈ ಶಬ್ದಗಳನ್ನೊಳಗೊಂಡ ಮಾತುಗಳ ಮುಖೇನ (ಶಾಬ್ಧಿಕ), ಇಲ್ಲವೇ ಶಬ್ದರಹಿತ ಸಂಜ್ಞೆಗಳ ಮೂಲಕ (ಅಶಾಬ್ದಿಕ) ಅಥವಾ ಮಾಧ್ಯಮಗಳ ಮೂಲಕ ನಡೆಯಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ, ಸಂವಹನವು ಮಾತುಕತೆಗಳ ಮೂಲಕವೇ ನಡೆಯುತ್ತದೆ.

    ಆಂಗ್ಲಭಾಷೆಯಲ್ಲಿ ಇದನ್ನೇ communication ಅಂತಾರೆ. ಲ್ಯಾಟಿನ್ ಭಾಷೆಯ ‘ಕಮ್ಯುನಿಸ್ಟ್’ ಎಂಬ ಪದದಿಂದ ಈ ಶಬ್ದ ಜನ್ಮ ತಳೆದಿದೆ. ಕಮ್ಯೂನಿಸ್ ಎಂದರೆ ಸಮಾನವಾಗಿಸೋದು, ವಿನಿಮಯ ಮಾಡಿಕೊಳ್ಳೋದೆಂದರ್ಥ. ಈ ಪ್ರಕ್ರಿಯೆಯ ಕೌಶಲವನ್ನು communication skill ಎಂದೂ ವೈಫಲ್ಯತೆಯನ್ನು communication gap ಅಂದರೆ ಸಂವಹನದ ಕೊರತೆ ಎಂದು ಕರೆಯಲಾಗುತ್ತದೆ.

    ಲ್ಯಾಟಿನ್ ಭಾಷೆಯ ‘ಕಮ್ಯುನಿಸ್ಟ್’ ಎಂಬ ಪದದಿಂದ ಈ ಶಬ್ದ ಜನ್ಮ ತಳೆದಿದೆ. ಕಮ್ಯೂನಿಸ್ಟ್‌ ಎಂದರೆ ಸಮಾನವಾಗಿಸೋದು, ವಿನಿಮಯ ಮಾಡಿಕೊಳ್ಳೋದೆಂದರ್ಥ. ಸಂವಹನದ ಕೊರತೆಯಿಂದಾಗಿ, ಎಷ್ಟೋ ಸಂಬಂಧ-ಸಂಪರ್ಕಗಳು, ವ್ಯಾಪಾರ-ವಹಿವಾಟುಗಳು, ಕೆಲಸ ಕಾರ್ಯಗಳು ಕೆಟ್ಟು ಹೋಗೋದನ್ನ ನಾವು ದಿನನಿತ್ಯ ನೋಡುತ್ತೇವೆ. ಮಕ್ಕಳ ಜೊತೆ ಸಮರ್ಪಕವಾದ ಸಂವಹನವನ್ನು ಸಾಧಿಸಲಾಗದೆ ಒಬ್ಬರಿನ್ನೊಬ್ಬರನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿ, ಪೋಷಕರು ಅವರಿಂದ ದೂರವಾಗುವುದುಂಟು.

    ಶಾಲಾ ಕಾಲೇಜುಗಳಲ್ಲಿ ನಿತ್ಯ ನಡೆಯುವ ಕಲಿಯುವಿಕೆ ಮತ್ತು ಕಲಿಸುವಿಕೆಯಲ್ಲಿ ಕೂಡಾ ಉತ್ತಮ ಸಂವಹನ ಅತಿ ಅವಶ್ಯ. ಅದೆಷ್ಟೋ ಉಪದೇಶಗಳು-ಉಪನ್ಯಾಸಗಳು, ಪಾಠ-ಪ್ರವಚನಗಳು, ಚರ್ಚೆಗಳು. ಮಾತುಕತೆಗಳು, ವ್ಯವಹಾರಗಳು ಸೋಲಲು ಮುಖ್ಯ ಕಾರಣ. ಅಭಿವ್ಯಕ್ತಿಯ ಕೊರತೆ ಅಥವಾ ಸಂವಹನದ ಬಿಕ್ಕಟ್ಟು. ಅಂತಾರಾಷ್ಟ್ರೀಯ ಸಂಬಂಧಗಳನ್ನು ಸ್ಥಾಪಿಸುವಲ್ಲಿ, ಬೆಸೆಯುವಲ್ಲಿ, ರಾಷ್ಟ್ರ ನಾಯಕರು ನಡೆಸುವ ಸಂವಹನ ಅತಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಮಾತುಗಳ ಮೂಲಕ ಅವರವರ ಭಾವ-ಭಾವನೆ, ಅನಿಸಿಕೆ-ಅಭಿಪ್ರಾಯ, ಅಪೇಕ್ಷೆ-ಆಕಾಂಕ್ಷೆಗಳನ್ನು, ಕನಸು-ಕಲ್ಪನೆಗಳನ್ನು, ವಿಷಯ ವಿಚಾರಗಳನ್ನು ಇತರರಿಗೆ ದಾಟಿಸುವ ಈ ಸಂವಹನ ಪ್ರಕ್ರಿಯೆ, ಜನಜೀವನದ ಅನಿವಾರ್ಯ –ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇದರಲ್ಲಿ ಸೋತವರು, ತಮ್ಮ ಉದ್ದೇಶವನ್ನು ಈಡೇರಿಸುವಲ್ಲಿ ಸೋತಂತೆ. ಒಟ್ಟಿನಲ್ಲಿ ಸಾಂಸಾರಿಕ-ಸಾಮಾಜಿಕ ಸಮಸ್ಯೆಗಳಿಂದ ಹಿಡಿದು, ರಾಷ್ಟ್ರೀಯ-ಅಂತರರಾಷ್ಟ್ರೀಯ ಅನೇಕ ಸಮಸ್ಯೆಗಳಿಗೆ ಅಸಮರ್ಪಕ ಹಾಗೂ ದೋಷಪೂರ್ಣ ಸಂವಹನವೇ ಕಾರಣ. ಆದುದರಿಂದ ಒಳ್ಳೆಯ ಸಂವಹನಕಾರರಾಗಬೇಕಾದುದು ಅತಿ ಅವಶ್ಯ.

    ಸಾಮಾನ್ಯವಾಗಿ ಸಂವಹನವೆಂದರೆ, ವ್ಯಕ್ತಿ-ವ್ಯಕ್ತಿಯ ನಡುವೆ ಇಲ್ಲವೇ ವ್ಯಕ್ತಿ-ವ್ಯಕ್ತಿಗಳ ನಡುವೆ ನಡೆಯುವ ಒಂದು ಮಾತುಕತೆ, ವಿಚಾರ ವಿನಿಮಯ. ಆದುದರಿಂದ ಸಂವಹನವೇರ್ಪಡಲು ಎರಡು ಕಡೆಯವರು ಇರಲೇ ಬೇಕು ಹಾಗೂ ಕ್ರಿಯಾಶೀಲರಾಗಿರಲೇ ಬೇಕು. ಅವರುಗಳೆಂದರೆ, ಹೇಳುವವರು ಮತ್ತು ಕೇಳುವವರು ಇವರಿಬ್ಬರ ಪ್ರಾಮಾಣಿಕ, ಪರಿಣಾಮಕಾರೀ, ಶಿಸ್ತುಬದ್ಧವಾದ ಭಾಗವಹಿಸುವಿಕೆಯೇ ಯಶಸ್ವೀ ಸಂವಹನಕ್ಕೆ ಕಾರಣವಾಗುತ್ತದೆ. ಉತ್ತಮ ಸಂವಹನದಲ್ಲಿ ಒಬ್ಬರು ಸೋಲಲೇಬೇಕೆಂದಿಲ್ಲ. ಹೇಳುವವರು ಮತ್ತು ಕೇಳುವವರಿಬ್ಬರೂ ಗೆಲ್ಲಬಹುದು. ಯಾವುದೇ ಒಂದು ಸಂವಹನ ಪ್ರಕ್ರಿಯೆ ಪ್ರಾರಂಭವಾಗೋದು ಸಂವಹನಕ್ಕೆ ಯೋಗ್ಯವಾದ ವಿಷಯ ಸಂಧರ್ಭಗಳು ಇದ್ದಾಗ ಮಾತ್ರ, ಸಂವಹನದ ಸಂದರ್ಭದಲ್ಲಿ ಯಾರೂ ಯಾರಿಗೆ ಏನನ್ನ ಯಾವ ಸಂದರ್ಭದಲ್ಲಿ ಹೇಗೆ ಹೇಳುತ್ತಿದ್ದಾರೆ ಅನ್ನೋದು ಮುಖ್ಯ.

    ಹೇಳುಗ-ಕೇಳುಗ, ಸಮಯ-ಸಂದರ್ಭ, ವಿಷಯ ಸಂದೇಶ ಇವುಗಳ ಮೇಲೆ ಸಮನ್ವಯ ಏರ್ಪಟ್ಟಾಗ ಮಾತ್ರ ಸಂವಹನ ಸುಗಮವಾಗುತ್ತದೆ. ಇಲ್ಲವಾದರೆ ಗೊಂದಲಮಯವಾಗುತ್ತದೆ. ಟಿ.ವಿಗಳಲ್ಲಿ ಪ್ರಸಾರವಾಗುವ ಅನೇಕ ಚರ್ಚೆಗಳು ಇದಕ್ಕೆ ಉದಾಹರಣೆ. ಮಾತುಗಳನ್ನಾಡಿದಾತ, ಯಾವ ಅರ್ಥ –ಉದ್ದೇಶದಿಂದ ತನ್ನ ಮಾತುಗಳನ್ನಾಡಿರುತ್ತಾನೋ, ಅದೆಲ್ಲವೂ ಕೇಳುಗರಿಗೆ ಮನದಟ್ಟಾಗಿ ರವಾನೆಯಾದರೆ ಅದನ್ನೇ ಒಳ್ಳೆಯ ಸಂವಹನವೆನ್ನಬಹುದು. ಹೀಗಾಗಲು ವಹಿಸಬೇಕಾದ ಮುಂಜಾಗರೂಕತೆಗಳೆಂದರೆ :

    * ಉದ್ರಿಕ್ತ ವಾತಾವರಣದಲ್ಲಿ ಹಾಗೂ ಉದ್ಗಿಗ್ನ ಮನೋಸ್ಥಿತಿಯಲ್ಲಿ ಸಂವಹನವನ್ನು ಕೈಗೆತ್ತಿಕೊಳ್ಳಬಾರದು. ಮನಸ್ಸು ತಿಳಿಯಾಗಿರಲಿ, ಶಾಂತವಾಗಿರಲಿ, ಹಾಗೂ ಪೂರ್ವಾಗ್ರಹ ಪೀಡಿತವಾಗದಿರಲಿ. ಉತ್ತಮ ಸಂವಹನಕಾರ ತನ್ನನ್ನು ಸರಿಯಾದ ರೀತಿಯಲ್ಲಿ ಸ್ಥಾಪಿಸಿಕೊಳ್ಳಬೇಕು.

    *It is not important is what you say equally important how you say” ಎಂಬ ಮಾತಿನಂತೆ ನಾವು ಏನನ್ನ ಹೇಳುತ್ತೇವೆ ಅನ್ನೋದರ ಜೊತೆ, ಹೇಗೆ ಹೇಳುತ್ತೇವೆ ಅನ್ನೋದು ಕೂಡಾ ಮುಖ್ಯವಾಗುತ್ತದೆ. ಆದುದರಿಂದ ಮಾತು, ಹಿತಮಿತವಾಗಿರಲಿ, ನೇರವಾಗಿರಲಿ, ನಯವಾಗಿರಲಿ, ಸ್ವಷ್ಟವಾಗಿರಲಿ, ಅರ್ಥ ಆಗುವ ರೀತಿಯಲ್ಲಿರಲಿ. ಹೀಗಾಗಲು ಸ್ಪಷ್ಟ ಉಚ್ಛಾರ, ಸೂಕ್ತ ಸ್ವರಭಾರ, ಹಿತಮಿತವಾದ ಧ್ವನಿಯ ಏರಿಳಿತ, ಮೃದು-ಮಧುರ ಮೆಲುದನಿಯ ಮಾತುಗಳು ಅವಶ್ಯ. ನಮ್ಮ ಹಾವಭಾವಗಳೂ ಆಕರ್ಷಕವಾಗಿರಲಿ.

    * ಅಂತೆಯೇ ಬಳಸುವ ಭಾಷೆ ಶುದ್ಧವಾಗಿರಬೇಕು. ವಿಚಿತ್ರ ಉಚ್ಚಾರ, ಅಸಹ್ಯ ಆಂಗಿಕ ಚೇಷ್ಠೆಗಳ ವ್ಯಜ್ರ್ಯ.

    * ಮಾತಿನಲ್ಲಿ ಅತಿಯಾದ ವೇಗವು ಬೇಡ, ಮಂದಗತಿಯೂ ಬೇಡ, ವಾಕ್ಯದ ಕೊನೆಯಲ್ಲಿ ಪದಗಳನ್ನು ನುಂಗುವುದಾಗಲಿ, ತೇಲಿಸುವುದಾಗಲಿ ತರವಲ್ಲ. ವಾಕ್ಯ ರಚನೆ ವ್ಯಾಕರಣ ಬದ್ಧವಾಗಿರಬೇಕು. ತಪ್ಪು ಉಚ್ಚಾರಗಳು ಬೇಡ.

    * ಉತ್ತಮ ಸಂವಹನಕಾರನಿಗೆ, ಅನುಭವ-ಆತ್ಮವಿಶ್ವಾಸ, ಸಿದ್ಧತೆ, ಮಾಹಿತಿಗಳ ವಿಷಯಜ್ಞಾನದ ಶಬ್ದ ಭಂಡಾರದ ಕೊರತೆ ಇರಬಾರದು. ಹಾಗೆಂದು ಅತಿಯಾದ ಆತ್ಮವಿಶ್ವಾಸ ಅಧಿಪತ್ಯ, ತಾನೇ ಸರಿ-ತಾನೇ ಗೆಲ್ಲಬೇಕೆಂಬ ಹಠಮಾರಿತನವೂ ಒಳ್ಳೆಯದಲ್ಲ. ಹೇಳಬೇಕಾದುದನ್ನು ಸಂಕ್ಷಿಪ್ತವಾಗಿ ಹೇಳಿಬಿಡಬೇಕು. ಅತಿಯಾದರೆ, ಸಮಯವೂ ವ್ಯರ್ಥವಾಗುತ್ತದೆ. ಕೇಳುವವರ ತಾಳ್ಮೆಯೂ ಕೆಟ್ಟು ಹೋಗುತ್ತದೆ. ಕೇಳುವ ಆಸಕ್ತಿಯೂ ಕಡಿಮೆಯಾಗುತ್ತದೆ. ಹಾಗೆಂದು ತೀರ ಕಡಿಮೆಯಾದರೆ ಕೇಳುವವರಿಗೆ ಅರ್ಥವಾಗದು, ಹೇಳಬೇಕಾದ ವಿಷಯ ರವಾನೆಯಾಗದು. ಅಂತೆಯೇ ಮಾತುಗಳಿಗೆ ತಕ್ಕ ತೂಕವಿರಬೇಕು.

    * ಅಂತೆಯೇ ಅನಾವಶ್ಯಕವಾದ ಭಾವೋದ್ವೇಗ ಬೇಡ, ದುಡುಕಿ ಹೇಳುವ ಇಲ್ಲವೇ ಗಡಿಬಿಡಿಯಲ್ಲಿ ಒಂದೇ ಉಸಿರಿಗೆ ಎಲ್ಲವನ್ನು ಹೇಳಿ ಮುಗಿಸುವ ತವಕವೂ ಒಳ್ಳೆಯ ಸಂವಹನದ ಲಕ್ಷಣವಲ್ಲ.

    * ಕೇಳುಗರಿಗೆ ಅವಮಾನವಾಗುವಂತಹ, ನೋಯಿಸುವಂತಹ, ಮುಜುಗರ ತರುವಂತಹ ಮಾತುಗಳು ನಿಷಿದ್ಧ. ಅಂತೆಯೇ ನಮ್ಮ ಮಾತುಗಳು ದರ್ಪದಿಂದ ಕೂಡಿದ್ದರೆ, ಅಧಿಕಾರಶಾಹಿಯಾಗಿದ್ದರೆ ಸಂವಹನ ಸಂತಸತರದು.

    * ಹೇಳುವವರು ಹೇಳುತ್ತಲೇ ಇರಬಾರದು ಹಾಗೂ ಹೇಳಿದ್ದನ್ನೇ ಹೇಳಬಾರದು. ಹಾಗೂ ತಮ್ಮ ವಿಚಾರಧಾರೆಗಳನ್ನು, ಅಭಿಪ್ರಾಯಗಳನ್ನು ಕೇಳುಗರ ಮೇಲೆ ಹೇರಬಾರದು. ಮುಕ್ತ ಚರ್ಚೆಗೆ ಅವಕಾಶವಿದ್ದು ಕೇಳುಗರ ಅಭಿಪ್ರಾಯಗಳಿಗೂ ಸಕಾರಾತ್ಮಕವಾದ ಸ್ಪಂದನೆ ಇರಲಿ.

    * ಮಾತುಗಳು ಅನಾವಶ್ಯಕವಾಗದಿರಲಿ, ಅತಿಯಾಗದಿರಲಿ, ನಾಟಕೀಯವಾಗದಿರಲಿ ಹಾಗೂ ಉದ್ದೇಶರಹಿತವಾಗದಿರಲಿ, ಕೇಳುಗರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದರಂತೂ ಕೇಳುವರ ಉತ್ಸಾಹ ಹೆಚ್ಚಾಗುತ್ತಿರುತ್ತದೆ.

    * ಅಂತೆಯೇ ಹೇಳುವವರು ಹೇಳುತ್ತಲೇ ಇದ್ದು, ಕೇಳುವವರು ಕೇಳುತ್ತಲೇ ಇರಬಾರದು. ಹೀಗಾದರೆ, ಅದು ಏಕಮುಖೀ ಮಾತುಗಳಾಗಿ, ಸಂವಹನದ ಸ್ವಾರಸ್ಯವನ್ನು ಕಳೆದುಕೊಳ್ಳುತ್ತದೆ. ಆಗಾಗ, ಹೇಳುವವರು ಕೇಳುಗರಾಗಬೇಕು- ಕೇಳುಗರೂ ಹೇಳುಗರಾಗಬೇಕು. ಇಬ್ಬರಿಗೂ ತಮ್ಮ ತಮ್ಮ ನಿಲುವನ್ನು ಪ್ರಕಟಿಸುವ ಮುಕ್ತ ಸಮಯಾವಕಾಶವಿರಬೇಕು.

    * ಒಟ್ಟಿನಲ್ಲಿ ಏನಾದರೂ ಹೇಳಲೇ ಬೇಕಲ್ಲ ಎಂಬ ಕಾರಣಕ್ಕೆ ಹೇಳಬಾರದು. ಹೇಳಲೇ ಬೇಕಾದುದನ್ನು ಮಾತ್ರ ಹೇಳಬೇಕು. ಹೇಳುವ ರೀತಿಯಲ್ಲಿ ಹೇಳಬೇಕು. ಸುತ್ತಿ ಬಳಸಿ ಹೇಳಬಾರದು. ಅಧಿಕೃತ ಮಾಹಿತಿಗಳನ್ನಷ್ಟೇ ನೀಡಬೇಕು. ತಪ್ಪು ಅಂಕಿ ಸಂಖ್ಯೆಗಳನ್ನು ನೀಡಬಾರದು. ಉತ್ರ್ಪೇಕ್ಷೆಯಂತೂ ಎಂದೂ ಇರಬಾರದು.

    * ಇನ್ನು ಕೇಳುವವರು ಅಷ್ಟೆ; ಏನಾದರೂ ¥ಶ್ನ್ನಿಸಲೇ ಬೇಕೆಂಬ ಕಾರಣಕ್ಕೆ ಮಾತಾಡಬಾರದು. ಕೇಳಲೇ ಬೇಕಾದುದನ್ನು ಮಾತ್ರ ಕೇಳಬೇಕು. “Wise people talk, as they have something to say, Fools also talk as they too wants to say something ಎಂಬ ಮಾತಲ್ಲಿ ಸತ್ಯಾಂಶವಿದೆ. ಆದುದರಿಂದ ಕೇಳುಗರು ಗಮನವಿಟ್ಟು ಕೇಳಿಸಿಕೊಳ್ಳಬೇಕು. ಹಾಗೂ ಕಾಟಚಾರಕ್ಕೆಂದು ಏನನ್ನಾದರೂ ಕೇಳಬಾರದು. ಕೆಲವರಿರುತ್ತಾರೆ, ಅವರಿಗೆ ಇತರರನ್ನು ಕೇಳಿಸಿಕೊಳ್ಳುವ ಆಸಕ್ತಿಯಾಗಲೀ, ತಾಳ್ಮೆಯಾಗಲಿ, ವ್ಯವಧಾನವಾಗಲೀ ಇರೋದಿಲ್ಲ. ಬರೇ ತಮ್ಮ ಬಗ್ಗೆಯೂ ಅವಶ್ಯಕತೆಗಿಂತ ತುಸು ಹೆಚ್ಚಾಗಿಯೇ ಹೇಳುತ್ತಿರುತ್ತಾರೆ. ಇತರರನ್ನೂ ಕೇಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಬಂದರೂ “ನೀವು ಹೇಳಬೇಕಾದ್ದನ್ನು ಬೇಗನೆ ಹೇಳಿಬಿಡಿ” ಎನ್ನುತ್ತಾರೆ. ನಮ್ಮ ಮಾತನ್ನು ಇತರರು ಕೇಳಿಸಿಕೊಳ್ಳಬೇಕೆಂದರೆ, ನಾವು ಇತರರ ಮಾತುಗಳನ್ನು ಕೇಳಿಸಿಕೊಳ್ಳಬೇಕಲ್ಲವೇ. ಆದುದರಿಂದ ಸಂವಹನ ದ್ವಿಮುಖೀಯಾಗಿರಲಿ.

    ಒಟ್ಟಿನಲ್ಲಿ ಸಂವಹನವೆಂಬುದು ನಿಂತ ನೀರಲ್ಲ; ಅದು ನಿತ್ಯ ನಿರಂತರ; ಜೀವನದುದ್ದಕ್ಕೂ ನಡೆಯುವ ಪ್ರಕ್ರಿಯೆ. ಆದರೆ, ಸಂವಹನ ಎಷ್ಟು ಹೊತ್ತು ನಡೆಯಿತು. ಅನ್ನೋದು ಮುಖ್ಯವಲ್ಲ- ಏನೆಲ್ಲಾ ಎಷ್ಟೆಲ್ಲಾ ವಿಚಾರಗಳು ವಿನಿಮಯಗೊಂಡವು ಅನ್ನೋದು ಮುಖ್ಯ. ಒಟ್ಟಿನಲ್ಲಿ ಒಬ್ಬರ ಬಗ್ಗೆ ಇನ್ನೊಬ್ಬರು ಮಾತನಾಡೋದರ ಬದಲು, ಒಬ್ಬರಿಗೊಬ್ಬರು ಆತ್ಮೀಯತೆಯಿಂದ ಮಾತನಾಡಿಕೊಂಡರೆ, ಜಗತ್ತಿನ ಅರ್ಧದಷ್ಟು ಸಮಸ್ಯೆಗಳು ಬಗೆಹರಿದೀತು. ಇದಕ್ಕೆ ಒಳ್ಳೆಯ ಸಂವಹನಕಾರರಾಗುವುದೊಂದೇ ಉಳಿದಿರುವ ದಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts