ಭಾರತೀಯ ಔಷಧ ಮಂಡಳಿ ಸದಸ್ಯರಾಗಿ ಡಾ.ಕಿಶೋರಸಿಂಗ್ ಆಯ್ಕೆ

blank

ಕಲಬುರಗಿ: ಇಲ್ಲಿನ ರಾಜೀವ್‌ಗಾಂಧಿ ಫಾರ್ಮಸಿ ಕಾಲೇಜ್‌ನ ಅಧ್ಯಕ್ಷ ಡಾ. ಕಿಶೋರಸಿಂಗ್ ಛತ್ರಪತಿ ಅವರು ಭಾರತೀಯ ಔಷಧ ಮಂಡಳಿ (ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ)ಯ ಕೇಂದ್ರೀಯ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಿಂದ ಮಹೋನ್ನತ ಸಂಸ್ಥೆಗೆ ಕೇಂದ್ರೀಯ ಮಂಡಳಿ ಸದಸ್ಯರಾಗಿ ಪ್ರಥಮವಾಗಿ ಆಯ್ಕೆಯಾಗಿರುವುದು ಈ ಭಾಗಕ್ಕೆ ಕೀರ್ತಿ ತರುವಂತಾಗಿದೆ.

ಕರ್ನಾಟಕ ರಾಜ್ಯ ಔಷಧ ಮಂಡಳಿ (ಕರ್ನಾಟಕ ಸ್ಟೇಟ್ ಫಾರ್ಮಸಿ ಕೌನ್ಸಿಲ್ )ದಿಂದ ಸ್ಪರ್ಧಿಸಿದ್ದ ಡಾ. ಕಿಶೋರಸಿಂಗ್ ಅವರು ಫಾರ್ಮಸಿ ಕೌನ್ಸಿಲ್ ಆರ್ಫ ಇಂಡಿಯಾ (ಪಿಸಿಐ)ದ ಕೇಂದ್ರೀಯ ಮಂಡಳಿ (ಸೆಂಟ್ರಲ್ ಕೌನ್ಸಿಲ್ ಮೆಂಬರ್) ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ಭಾರತೀಯ ಔಷಧ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದರಿಂದ ನೇರವಾಗಿ ರಾಜ್ಯದಲ್ಲಿನ ರಾಜೀವಗಾಂಧಿ ಆರೋಗ್ಯ ವಿಜ್ಷಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.

ಸನ್ಮಾನ: ಕಲ್ಯಾಣ ಕರ್ನಾಟಕ ಭಾಗದಿಂದ ಪ್ರಥಮವಾಗಿ ಡಾ. ಕಿಶೋರಸಿಂಗ್ ಔಷಧ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿ ತವರಿಗೆ ಆಗಮಿಸಿದ್ದರಿಂದ ಅವರನ್ನು ರಾಜೀವಗಾಂಧಿ ಫಾರ್ಮಸಿ ಕಾಲೇಜ್‌ನ ಉಪನ್ಯಾಸಕ ವರ್ಗ ಹಾಗೂ ಸಿಬ್ಬಂದಿಯವರು ಮತ್ತು ಮಿತ್ರ ವರ್ಗದವರು ಸನ್ಮಾನಿಸಿ ಶುಭ ಕೋರಿದರು. ಸನ್ಮಾನಿತಗೊಂಡು ಮಾತನಾಡಿದ ಡಾ. ಕಿಶೋರಸಿಂಗ್, ಬಹಳ ವರ್ಷಗಳಿಂದ ಮಹತ್ವದ ಈ ಸ್ಥಾನಕ್ಕೆ ಆಯ್ಕೆಯಾಗಬೇಕೆಂಬ ಇಚ್ಚೆ ಹೊಂದಲಾಗಿತ್ತು. ಆದರೆ ಈಗ ಕರ್ನಾಟಕ ರಾಜ್ಯ ಔಷಧ ಮಂಡಳಿಯ ಸರ್ವ ಸದಸ್ಯರು, ಹಿತೈಷಿಗಳ ಅಭಿಲಾಷೆ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಅವರ ಪ್ರಯತ್ನದಿಂದ ಭಾರತೀಯ ಔಷಧ ಮಂಡಳಿಯ ಕೇಂದ್ರೀಯ ಮಂಡಳಿ ಸದಸ್ಯರಾಗಿ ಆಯ್ಕೆಯಾಗಲು ಕಾರಣವಾಗಿದೆ ಎಂದು ತಿಳಿಸಿದರು.

ಭಾರತೀಯ ಔಷಧ ಮಂಡಳಿ (ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ)ಯ ಕೇಂದ್ರೀಯ ಮಂಡಳಿಯ ಸದಸ್ಯರಾಗಿದ್ದರಿಂದ ಈ ಭಾಗದಲ್ಲಿನ ಫಾರ್ಮಸಿ ಶಿಕ್ಷಣ ಅಭಿವೃದ್ಧಿಗೆ ಕೈ ಜೋಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಡಾ. ಕಿಶೋರಸಿಂಗ್ ತಿಳಿಸಿದರು.

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…