More

  ಡಾ. ಕವಿತಾ ಯೋಗಪ್ಪನವರ್ ಅಧಿಕಾರ ಸ್ವೀಕಾರ

  ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ಡಾ. ಕವಿತಾ ಯೋಗಪ್ಪನವರ್ ಮಂಗಳವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಕೆ.ಮಾಯಣ್ಣ ಗೌಡ ಅಧಿಕಾರ ಹಸ್ತಾಂತರಿಸಿದರು.

  ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಕವಿತಾ ಯೋಗಪ್ಪನವರ್ ಅವರನ್ನು ಪಾಲಿಕೆ ಆಯುಕ್ತೆಯನ್ನಾಗಿ ನಿಯುಕ್ತಿಗೊಳಿಸಿ ಜೂ.8ರಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಡಾ. ಶಿವರಾಮಕಾರಂತ ಬಡಾವಣೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಕವಿತಾ ಅವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ವರ್ಗಾಯಿಸಿ ಆದೇಶಿಸಿತ್ತು. ಡಾ. ಕವಿತಾ ಅವರು ಈ ಹಿಂದೆ ಸೊರಬ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದರು.

  See also  ವಿಎಸ್‌ಎಸ್‌ಎನ್‌ಗಳಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಉಡುಗೊರೆ ಘೋಷಣೆ; ಪ್ರೋತ್ಸಾಹಧನ ಪಡೆಯಲು ಸಹಕಾರಿಗಳು ಮಾಡಬೇಕಾದ್ದೇನು?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts