More

    ಭಯೋತ್ಪಾದನೆಯ ಕಾರ್ಖಾನೆ ವಿಸ್ತರಿಸುತ್ತಿರುವ ಪಾಕ್; ಕೆ.ಎಸ್.ನಾರಾಯಣಾಚಾರ್ಯರ ಅಂಕಣ

    ಭಯೋತ್ಪಾದನೆಯ ಕಾರ್ಖಾನೆ ವಿಸ್ತರಿಸುತ್ತಿರುವ ಪಾಕ್; ಕೆ.ಎಸ್.ನಾರಾಯಣಾಚಾರ್ಯರ ಅಂಕಣ

    ಅಮೆರಿಕದ ಡಬ್ಲ್ಯುಟಿಒ ಗೋಪುರ ಧ್ವಂಸವಾದಾಗ ಆಗಿನ ಅಧ್ಯಕ್ಷ ಬರಾಕ್ ಒಬಾಮ ‘ಇನ್ನು ನಾವು ‘ಕ್ರೂಸೇಡ್’ ಆರಂಭಿಸುತ್ತೇವೆ’ ಎಂದು ಹೇಳಿ ಮರುಗಳಿಗೆಯಲ್ಲೇ ಮಾತು ಹೊರಳಿಸಿ, ಇಸ್ಲಾಮಿಯರನ್ನು ಎದುರು ಹಾಕಿಕೊಳ್ಳಲು ಅಂಜಿ, ‘ಭಯೋತ್ಪಾದನೆಗೂ ಮತಧರ್ಮಕ್ಕೂ ಸಂಬಂಧವಿಲ್ಲ’ ಎಂದರು. ಆಮೇಲೆ ತಾವೇ ಸೃಷ್ಟಿಸಿದ ತಾಲಿಬಾನಿನಲ್ಲಿ ‘ದುಷ್ಟರು, ಶಿಷ್ಟರು’ ಭೇದ ಕಲ್ಪಿಸಿದರು. Good Taliban, Bad Taliban! ಅಬ್ಬಾ! ಇದೇನು ಕೊಲೆಸ್ಟ್ರಲ್​ಗಳ ಭೇದವೇ? ರೆಡ್ ಕಾರ್ಪನಲ್ಸ್, ವೈಟ್ ಕಾರ್ಪನಲ್ಸ್ ಎನ್ನುತ್ತಾರಲ್ಲ ಆ ಪರಿಭಾಷೆಯೇ? ಅಲ್ಲ! ಅಮೆರಿಕ, ಇಸ್ಲಾಂಗೆ ಹೆದರಿತ್ತು. ಬ್ರಿಟಿಷರು ತಾವೇ ಸೃಷ್ಟಿಸಿದ ಭೂತ- ಪಾಕಿಸ್ತಾನಕ್ಕೆ ಹೆದರುತ್ತಿದ್ದಾರಲ್ಲ? ಲಂಡನ್ನಿನ ಮೇಯರ್ ಒಬ್ಬ ಮುಸ್ಲಿಂ! ಗೊತ್ತಿದೆಯೇನ್ರೀ? ಪಾಕ್​ನಲ್ಲಿ ತರಬೇತಿ ಪಡೆದ ಭಯೋತ್ಪಾದಕರೇ ಲಂಡನ್ನಿನ ಬ್ರಿಡ್ಜ್ ಮೇಲೆ ಬಾಂಬ್ ಎಸೆದಿದ್ದರಿಂದ ಇಬ್ಬರು ನಿರಪರಾಧಿಗಳು ಪ್ರಾಣ ಕಳೆದುಕೊಂಡ ಘಟನೆ ಮರೆತುಹೋಯಿತೆ? ಪಾಕ್ ಭಯೋತ್ಪಾದನೆಗೂ, ಬ್ರಿಟಿಷ್ ಪ್ರಜಾತಂತ್ರದ ಅಭದ್ರತೆಗೂ ಸಂಬಂಧ ಕಾಣುತ್ತಿದೆಯೇ? ಮಾಡಿದ್ದುಣ್ಣೋ ಮಹಾರಾಯ!

    ಶೇಕ್ಸ್​ಪಿಯರ್​ನ The Tempest ನಾಟಕದಲ್ಲಿ ಒಂದು ದೃಶ್ಯ. ರಾಜ್ಯಭ್ರಷ್ಟನಾದ ಪ್ರಾಸ್ಪೆರೋ, ಕಥಾನಾಯಕ, ಒಂದು ನಿರ್ಜನ ದ್ವೀಪದಲ್ಲಿ ತಲೆಮರೆಸಿಕೊಂಡು, ಮಾಯಾಮಂತ್ರ ಸಿದ್ಧಿ ಪಡೆದು, ಒಂದು ಮರದಲ್ಲಿ ಅಡಗಿದ್ದ ಭೂತವನ್ನು ಮಂತ್ರಶಕ್ತಿಯಿಂದ ಬಿಡಿಸಿ, ಅದಕ್ಕೆ ಭಾಷೆ, ಮಾತು ಕಲಿಸುತ್ತಾನೆ. ಆ ಭೂತದ ಹೆಸರು ‘ಕ್ಯಾಲಿಬನ್’ (ಅಕ್ಷರ ಜೋಡಣೆಯ ವ್ಯತ್ಯಾಸ ಮಾಡಿದರೆ ಕ್ಯಾನಿಬಲ್=ನರಭಕ್ಷಕ ಆಗುತ್ತದೆ. ಆ ಅರ್ಥ ಬರಲೆಂದೇ ಇಟ್ಟ ಹೆಸರು. ಈ ಅಲಂಕಾರಕ್ಕೆ ಆಂಗ್ಲದಲ್ಲಿ ‘ಅನಗ್ರಮಟೈಸೇಷನ್’ ಎನ್ನುತ್ತಾರೆ). ಈ ಭೂತಕ್ಕೆ ಮಾತು ಬಂದ ಮೇಲೆ ಪ್ರಾಸ್ಪೆರೋ ಮೇಲೆಯೇ ತಿರುಗಿ ಬೀಳುತ್ತದೆ. ‘ನಾನು ಭಾಷೆ ಕಲಿಸಿದ್ದಕ್ಕೆ ಇದು ಪ್ರತ್ಯುಪಕಾರವೇ?’ ಎಂದ ನಾಯಕನಿಗೆ ಭೂತ ಹೇಳುತ್ತದೆ- “you taught me language and i know how to curse you” ಅಂತ! (‘ನೀನು ಭಾಷೆ ಕಲಿಸಿದೆ. ಈಗ ನನಗೆ ನಿನ್ನನ್ನು ಬೈಯ್ಯಲು ಬರುತ್ತದೆ’) ಅದು ಬ್ರಿಟನ್, ಫ್ರಾನ್ಸ್, ಅಮೆರಿಕ, ಇತರ ಐರೋಪ್ಯ ದೇಶಗಳ ದುಃಸ್ಥಿತಿ! ಜಪಾನ್ ಮತ್ತು ಚೀನಾ ಬಿಟ್ಟರೆ, ಜಗತ್ತೇ ಇಸ್ಲಾಮಿಗೆ ಹೆದರುವ ಪರಿಸ್ಥಿತಿ. ಈ ನಿರ್ಮಾಣ ಹೇಗಾಯಿತು? ಸಾಕಷ್ಟು ಬರೆದಿದ್ದೇನೆ. ಇಂದು ಒಂದು ಹೆಚ್ಚಿನ ಹೊಳಹು ನೀಡುತ್ತಿದ್ದೇನೆ.

    1970ನೆಯ ವರ್ಷಕ್ಕೆ ಹೋಗೋಣ. ಕನ್ಯಾಕುಮಾರಿ ಎಂಬ ತಮಿಳುನಾಡು ಜಿಲ್ಲೆಯ ಸಮುದ್ರ ತೀರದಲ್ಲಿ ಎರಡು ಘಟನೆಗಳಾದವು. ಮಿನಾಕ್ಷಿಪುರಂನಲ್ಲಿ ಒಂದು ಹಳ್ಳಿಯೇ ಇಸ್ಲಾಂಗೆ ಮತಾಂತರವಾಯ್ತು; ದೇಶಕ್ಕೆ ಗಾಬರಿ. ಆ ತರುವಾಯ ಮಂಡೈಕ್ಕಾಡು ಎಂಬಲ್ಲಿ ಉದ್ದಕ್ಕೂ ಮೀನುಗಾರರು ಕ್ರೖೆಸ್ತಕ್ಕೆ ಮತಾಂತರವಾದರು. ಅಲ್ಲಿ ಕೋಮುಗಲಭೆಯಾಗಿ ಅನೇಕರು ಸತ್ತು, ಆಸ್ತಿಪಾಸ್ತಿ ನಷ್ಟವಾಗಿ, ವಿಚಾರಣೆಗಾಗಿ ಆಯೋಗ ನಿಯಮಿತವಾಯ್ತು. ಆಗ ದ್ರವಿಡ ಸರ್ಕಾರವೇ ಅಲ್ಲಿತ್ತು. ಭಾಜಪ ಆಗಲೂ ಈಗಲೂ ಅಲ್ಲಿ ನೆಲೆ ಕಂಡಿಲ್ಲ.

    ಕೊಲೆ, ಲೂಟಿ, ಹಿಂಸೆಗೆ ಕಾರಣರಾರು? ಏಕೆ? ಮೂಲ ಎಲ್ಲಿ? ಎಂದು ವಿಚಾರಿಸಲು ವೇಣುಗೋಪಾಲ್ ಎಂಬ ನ್ಯಾಯಮೂರ್ತಿ ನೇಮಿಸಲ್ಪಟ್ಟರು. ಅವರು ಇತ್ತ ತೀರ್ಪಿನ ಭಾಷಾಂತರ ಹೀಗೆ- ‘ಒಂದು ಅಲ್ಪಸಂಖ್ಯಾತ ಸಮುದಾಯವು ಎಲ್ಲೆಲ್ಲಿ ಬಹುಸಂಖ್ಯಾತ ಆಗುತ್ತದೆಯೋ, ಅದು ಹಳ್ಳಿ ಇರಲಿ, ಪ್ರದೇಶವೇ ಇರಲಿ, ಸಣ್ಣದೋ, ದೊಡ್ಡದೋ ಇರಲಿ, ಆ ಸಮುದಾಯ ಆಗ ಮಿಲಿಟೆಂಟ್ = ಉಗ್ರ ಆಗುತ್ತದೆ. ಅದು ನ್ಯಾಯಕ್ಕೆ ಹೆದರುವುದಿಲ್ಲ. ಭಯವಿಲ್ಲದ ಭಂಡತನದಲ್ಲಿ ಪುಂಡಾಟಕ್ಕೆ ತೊಡಗಿ, ಇತರರನ್ನು ಬೆದರಿಸಿ, ಅದು ದಬ್ಬಾಳಿಕೆ ಪ್ರವೃತ್ತಿಗೆ ತೊಡಗುತ್ತದೆ. ಶಕ್ತಿ ಪ್ರದರ್ಶನಕ್ಕೆ ಇಳಿಯುತ್ತದೆ. ಅದಕ್ಕಾಗಿ, ಸಭೆ, ಸಂಘಟನೆ, ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಇತರರು ಪ್ರತಿಭಟಿಸುತ್ತಾರೆ- ಅದು ತರ್ಕಯುಕ್ತ ಪ್ರತಿಕ್ರಿಯೆ ಆಗಿ ಸಂಘರ್ಷ ಏರ್ಪಡುತ್ತದೆ. ಆಗ ಕೋಮುಗಳಲ್ಲಿ ದ್ವೇಷ, ಸಂಶಯ, ಅಸೂಯೆ, ಇಂಥವು ನಡೆಯುವುದೂ, ಅನಿವಾರ್ಯ ಪರಿಣಾಮವಾಗುತ್ತದೆ. ಇಡೀ ಕನ್ಯಾಕುಮಾರಿ ಜಿಲ್ಲೆಯ ಕೋಮುಘರ್ಷಣೆಗಳೆಲ್ಲದರ ರೀತಿ, ಪ್ಯಾಟರ್ನ್, ರಚನಾ ವಿಧಾನ, ತಂತ್ರ ಒಂದೇ ಪ್ರಕಾರ ಇದೆ. 1980ರ ಜನಗಣತಿಯ ಪ್ರಕಾರ ಕನ್ಯಾಕುಮಾರಿ ಜಿಲ್ಲೆಯಲ್ಲಿ ಕ್ರೖೆಸ್ತರೇ ಬಹುಸಂಖ್ಯಾತರು. ಹಿಂದೂಪರ ವಕೀಲ ಬಾಲಕೃಷ್ಣ ಅವರು ಬರಹದಲ್ಲಿತ್ತ ಒಕ್ಕಣೆ ಪ್ರಕಾರ- ಈ ಬಹುಸಂಖ್ಯಾತತ್ವ ಏರ್ಪಟ್ಟಿದ್ದು ಬರೀ ಮತಾಂತರದ ಮೂಲಕ. ಅದನ್ನು ಕ್ರೖೆಸ್ತ ಮಿಷನರಿಗಳು ಮಾಡಿಟ್ಟದ್ದು. ಆದ ಪ್ರಯುಕ್ತ ಸರ್ಕಾರವು ಮತಾಂತರ ಪ್ರತಿಷೇಧ ಕಾಯ್ದೆಯನ್ನು ಜಾರಿ ಮಾಡಬೇಕು’ ಅಂತ. (ನೋಡಿ- Anti Hindu ಗ್ರಂಥದ ಪುಟ 104 evil of conversation)

    ಮುಂದೆ 2002 ಅಕ್ಟೋಬರ್ 5ರಲ್ಲಿ ಜಯಲಲಿತಾ ಇಂಥ ಕಾಯ್ದೆಯನ್ನು ಜಾರಿ ಮಾಡಿದರು. ಮಧ್ಯಪ್ರದೇಶ, ಒಡಿಶಾಗಳಲ್ಲಿ ಇಂಥ ಕಾಯ್ದೆ ಈಗಾಗಲೇ ಚಾಲ್ತಿಯಲ್ಲಿತ್ತಲ್ಲ? ಆದರೆ ಸೋನಿಯಾ ಒತ್ತಡದಿಂದ ಜಯಲಲಿತಾ ಈ ಜಾರಿಯನ್ನು ಕೆಲವೇ ದಿನಗಳಲ್ಲಿ ಹಿಂಪಡೆದರು! ವ್ಯಾಟಿಕನ್ ಪ್ರಭಾವ! ಆಗ ಬಲಿಯಾದವರು ಕಾಂಚೀ ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ. ಅದೂ ‘ಗೂಂಡಾ ಕಾಯ್ದೆಯಡಿ’! ಒಂದು ಗೌರವಾನ್ವಿತ ಹಿಂದೂ ಮಠದ ಪ್ರತಿಷ್ಠಿತ ಸ್ವಾಮಿಯನ್ನು ಒಂದು ಅನೂರ್ಜಿತ ಕೊಲೆಯಲ್ಲಿ ಸಿಲುಕಿಸಿ! ಕೋರ್ಟು ಎಳೆದಾಡಿ, ಅವರನ್ನು ಬಿಡುಗಡೆ ಮಾಡಿದ್ದು ಬೇರೆ ಮಾತು! ಇಲ್ಲಿ ಕ್ರೖೆಸ್ತರಿಗೆ ಎಂಥ ಅಪರಾಧದಲ್ಲೂ ಶಿಕ್ಷೆ ಆಗುವುದಿಲ್ಲ. ಅವರ ಹಿಂದೆ ಅಂತಾರಾಷ್ಟ್ರೀಯ ಕ್ರೖೆಸ್ತ ಶಕ್ತಿಯ ಒತ್ತಡ ಇರುತ್ತದೆ. ಭಯೋತ್ಪಾದಕರೂ, ಅಪರಾಧಿಗಳೂ ಆದ- ಅಪ್ಜಲ್ ಗುರು, ಕಸಬ್, ವಾನೀ ಇಂಥವರಿಗೆ ಶಿಕ್ಷೆಯಾದರೆ ಜೆಎನ್​ಯುು ಕನ್ಹಯ್ಯಾ, ಕಮ್ಯುನಿಸ್ಟರು, ಕಾಂಗ್ರೆಸಲ್ಲೇ ಹಿತಾಸಕ್ತರು ಸಂಘಟಿತ ಪ್ರತಿಭಟನೆ ಮಾಡುತ್ತಾರೆ. ಹಿಂದೂ ನಾಯಕರತ್ನಗಳೇ ಅವರ- ಅಪರಾಧಿಗಳ ಪರ ಹ್ಯೂಮನ್ ರೈಟ್ಸ್​ಗೆ ವಕಾಲತ್ತು ವಹಿಸುತ್ತಾರೆ. ನೋಡಿ. ಒಂದೇ ಎಡೆ ಕ್ರಿಮಿನಲ್ ಮನನೆಲೆಯ ಮತೀಯ ಶಕ್ತಿಗಳು ಸೇರಿದರೆ, ಕಾಶ್ಮೀರದಂತಾಗುತ್ತೆ.

    ಕೇರಳದ ಮಲಪ್ಪುರಂ ಜಿಲ್ಲೆಯಾದದ್ದು ನಂಬೂದ್ರಿಪಾದರ ಕಾಲದಲ್ಲಿ. ವೈನಾಡು, ಕನ್ನಾನೂರ್, ಕೋಳಿಕ್ಕೋಡ್, ಕ್ಯಾಲಿಕಟ್- ಇಲ್ಲೆಲ್ಲ ಕೋಮುಶಕ್ತಿಯ ಸಾಂದ್ರತೆ, ದೇಶಕ್ಕೆ ಸವಾಲಾಗಿದೆ. ಅಲ್ಲೇ ಒಂದು ಕಡೆ ರಾಹುಲ್ ‘ಗೆದ್ದು’ ಬಂದದ್ದು! ಯಾರ ಪ್ರತಿನಿಧಿಯಾಗಿ? ಸಂವಿಧಾನವನ್ನು ಪರಿಶೀಲಿಸೋಣ. 1931ರಲ್ಲಿ ಕರಾಚಿ ಅಧಿವೇಶನದಲ್ಲಿ ಕಾಂಗ್ರೆಸ್ಸು, ಠರಾವಿನಲ್ಲಿ ಹೇಳಿದ್ದು- ‘ಪ್ರತಿ ಧರ್ವಿುಯರೂ ತಂತಮ್ಮ ಮತ-ನಂಬಿಕೆಗಳನ್ನು ಹೊಂದಲು, ಆಚರಿಸಲು- to profess and practice-ಮಾತ್ರ ಹಕ್ಕು ಹೊಂದಿರತಕ್ಕದ್ದು’ ಅಂತ. ಅಲ್ಲಿ ‘ಪ್ರಚುರಿಸಲು’-“Propagate’ ಶಬ್ದವೇ ಇರಲಿಲ್ಲ. ಈ ಶಬ್ದದ ಸೇರ್ಪಡೆಗೆ ಮುನ್ಷಿ, ಟಂಡನ್ ಮೊದಲಾದವರ ವಿರೋಧವಿತ್ತು. ‘ಇದು ಮತಾಂತರಕ್ಕೆ ಮಹಾದ್ವಾರ’ ಅಂತ ಆಗಲೇ ದೂರದೃಷ್ಟಿಯ ನಾಯಕರು ಎಚ್ಚರಿಸಿದ್ದರು.

    1948ರಲ್ಲಿ ಸಂವಿಧಾನ ರಚನೆಯ ಕಾಲಕ್ಕೆ ಈ ಪ್ರಶ್ನೆ ಮತ್ತೆ ತಲೆ ಎತ್ತಿ ನೆಹ್ರೂ- ಕಳ್ಳತನದಿಂದ ಈ ಶಬ್ದವನ್ನು ಸೇರಿಸಿ ಬಿಟ್ಟರು (ಪುಟ 195). ಅಲ್ಲಿ ಕ್ರೖೆಸ್ತ, ಇಸ್ಲಾಮಿ ವೋಟ್ ಬ್ಯಾಂಕುಗಳು ಒತ್ತಡ, ಲಾಬಿ ಮಾಡಿದ್ದವು. ಮುಂದೆ ್ಕಡ ಸ್ಟಾನಿಸ್ಲಾಸ್​ರ ಸಂದರ್ಭದ ಖಟ್ಲೆಯಲ್ಲಿ ಸುಪ್ರೀಂ ಕೋರ್ಟ್ ಹೀಗೆ ತೀರ್ಪು ಇತ್ತಿತು. ‘ಆರ್ಟಿಕಲ್ 25(1)ರ ಪ್ರಕಾರ ಇತರರನ್ನು ಮತಾಂತರಿಸಲು ಹಕ್ಕು ಸಿದ್ಧಪಡುವುದಿಲ್ಲ. ಅದು ನೀಡುವ ಹಕ್ಕು ಒಬ್ಬನು ತನ್ನ ಮತನಂಬಿಕೆಗಳನ್ನು ಪ್ರಚುರಿಸಲು, ವಿಶದಪಡಿಸಲು ಮಾತ್ರ. ಏಕೆ? ಆ ಹಕ್ಕು ಇತರರಿಗೂ ಸಮಾನವಾಗಿರುತ್ತ, ಒಬ್ಬನ ಹಕ್ಕನ್ನು ಇನ್ನೊಬ್ಬನು ಕಸಿಯುವುದನ್ನು ಈ ಪರಿಚ್ಛೇದ ಅನುಮತಿಸುವುದಿಲ್ಲ. ಫ್ರೀಡಂ ಆಫ್ ಕಾನ್​ಷರ್ನ್ಸ್ ಎಲ್ಲರಿಗೂ ಒಂದೇ’- ಇತ್ಯಾದಿ. ಇಲ್ಲಿ ಕಳ್ಳತನದ ವಿವರಣೆಗೆ ಬಲವಾದ ಹೊಡೆತ ಬಿತ್ತು. ಮುಂದೆ ಅರುಣಾಚಲ ಪ್ರದೇಶ ಹಾಗೂ ತ್ರಿಪುರಾಗಳಲ್ಲೂ ಮತಾಂತರ ನಿಷೇಧ ಕಾಯ್ದೆ ಜಾರಿಯಾಯ್ತು.

    1956 ಅಕ್ಟೋಬರ್ 15ರಂದು ನಾಗ್ಪುರದಲ್ಲಿ ಬಾಬಾಸಾಹೇಬರು, ‘ದಲಿತರು ಯಾವ ಮತಶ್ರದ್ಧೆಯನ್ನು ಅವಲಂಬಿಸಿಯಾರು?’ ಎಂಬ ಪ್ರಶ್ನೆಗೆ ಕೊಟ್ಟ ಸ್ಪಷ್ಟ ಉತ್ತರ ಹೀಗಿದೆ. ಅಂಬೇಡ್ಕರ್ ಹೇಳುತ್ತಾರೆ- ‘ಇಸ್ಲಾಂಗೋ ಕ್ರೖೆಸ್ತಕ್ಕೋ ಮತಾಂತರ ಆದರೆ ಅದು ಅಪರಾಷ್ಟ್ರೀಕರಣ- Denationalise ಆಗಿಬಿಡುತ್ತದೆ. ರಾಷ್ಟ್ರಾಂತರ ನಿಷ್ಠೆ ತಡೆಯಲು ಆಗುವುದಿಲ್ಲ. ಇಸ್ಲಾಂಗೆ ಮತಾಂತರರಾದರಂತೂ ಮುಸ್ಲಿಂರ ಸಂಖ್ಯೆ ಹೆಚ್ಚಾಗಿ ಅವರ ಪ್ರಭಾವ, ಒತ್ತಡ, ಡಾಮಿನೇಷನ್, ದಬ್ಬಾಳಿಕೆ ಪ್ರವೃತ್ತಿ ಹೆಚ್ಚಳವಾಗುವುದು ಸತ್ಯ. ಅಲ್ಲದೆ ಕ್ರೖೆಸ್ತ ಮತಕ್ಕೆ ಸೇರಿದರೆ ಅವರ ಸಂಖ್ಯೆ ಐದಾರು ಕೋಟಿಯಷ್ಟು ಹೆಚ್ಚಾಗಿ, ಬ್ರಿಟಿಷರ ನೇಣು ಭಾರತದ ಕೊರಳಿಗೆ ಇನ್ನಷ್ಟು ಬಿಗಿಯಾಗುತ್ತದೆ’ (ಬರಹ, ಭಾಷಣಗಳು Vol 17). ಅದರಿಂದಲೇ ಅಂಬೇಡ್ಕರ್ ಹೇಳಿದ್ದು ಇಂದು ದಲಿತ, ಶೋಷಿತ, ಮತಾಂತರಿತ ದುರ್ದೈವಿಗಳಿಗೆ ತಿಳಿದಂತಿಲ್ಲ.

    ಕ್ರೖೆಸ್ತ, ಇಸ್ಲಾಮಿಯ, ಕಮ್ಯುನಿಷ್ಟ, ಕಾಂಗ್ರೆಸ್ ವೋಟುಬ್ಯಾಂಕುಗಳು, ಸ್ವಾರ್ಥಿ ರಾಜಕಾರಣಿಗಳು ತಿಳಿಯಲೂ ಬಿಡುತ್ತಿಲ್ಲ. ನೆರೆಯ ಪಾಕಿಸ್ತಾನ ಇರುವ ತನಕ ಈ ಮತೀಯ ಭಯೋತ್ಪಾದನೆ, ಭಯ ತಯಾರಿಯ ‘ಕಡಾಯಿ’, ಕಾರ್ಖಾನೆ ನಿಲ್ಲುವುದಿಲ್ಲ. ಇಲ್ಲಿರುವ ಪುಂಡಾಟಿಕೆ ನಿಲ್ಲಿಸಲು ಪ್ರಕೃತ ಸಂಸತ್ತಿನಲ್ಲಿ ಕೆಲವು ಮಸೂದೆಗಳು ಪಾಸಾಗಿ ಕಾನೂನಾಗಬೇಕಾಗಿವೆ. ಒಂದನೆಯದು Anti Reservation Bill. ಎರಡನೆಯದು ಅಸ್ಸಾಂನಲ್ಲಿ ಈಗಾಗಲೇ ಜಾರಿಯಾಗಿರುವ ಕಾನೂನು- ಎರಡು ಮಕ್ಕಳಿಗಿಂತ ಹೆಚ್ಚು ಉತ್ಪಾದಿಸಿದ ಕುಟುಂಬಗಳಿಗೆ ಸರ್ಕಾರೀ ಸೌಲಭ್ಯ, ಸವಲತ್ತುಗಳು- ಮೀಸಲಾತಿ, ಮೊದಲಾದವು ಅನ್ವಯವಾಗದ ಸ್ಥಿತಿ. ಇದು ಪ್ರಜಾ ನಿಯಂತ್ರಣಕ್ಕೆ- ಎಲ್ಲರಿಗೂ ಅನ್ವಯವಾದರೂ, ಎಲ್ಲಿ ಮೊಳೆ ಚುಚ್ಚುತ್ತದೋ- Where the shoe pinches ಅಲ್ಲಿ ಚುಚ್ಚುವುದು ಅತ್ಯಗತ್ಯ. ಮೂರನೆಯದು ವಿದೇಶೀ ನುಸುಳುಕೋರರá– ರೋಹಿಂಗ್ಯಾ, ಅಕ್ರಮ ಪಾಕ್ ವಲಸೆಗಾರರು, ನೇಪಾಳ ಮೂಲಕ ಒಳಬರುವುದನ್ನು ತಡೆಯಲು ದೇಶವ್ಯಾಪೀ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್- ಎಂಬುದು. ಇವಲ್ಲದೆ ಮದ್ರಸಾಗಳು Liberal Education ಅಡಿಯಲ್ಲಿ ಬರುತ್ತ ‘ಮೂಲಭೂತವಾದ’ ಎಂಬ ಭೂತ ಫಂಡಮೆಂಟಲಿಸಂನಿಂದ ಹೊರಬರುವುದು. ಪರಿಷ್ಕೃತ- ಭಯೋತ್ಪಾದನಾ ಬೋಧೆ ಇರದ ಮತಗ್ರಂಥಗಳನ್ನು ಈಜಿಪ್ತಿನಲ್ಲಿ ಮಾಡಿರುವಂತೆ ಇಲ್ಲೂ ಮಾಡಿಸಬೇಕಾದ ಅವಶ್ಯಕತೆ ಇದೆ, ತುರ್ತ.

    ಉದ್ಧವ ಠಾಕ್ರೆ, ಶಿವಾಜಿ ಮಾರ್ಗ ಬಿಟ್ಟು, ಕಾಂಗ್ರೆಸ್ ಮಾರ್ಗದಲ್ಲಿ ಅಫ್ಜಲ್ ಖಾನ್ ಕೂಟದಲ್ಲಿ ಸೇರಿರುವುದು ರಾಷ್ಟ್ರೀಯತೆಗೇ ಅಪರಾಧ, ಪೆಟ್ಟು ಎನ್ನೋಣವೇ? ಶಿವಾಜಿಯು ಔರಂಗಜೇಬನಿಗೆ ಮಣಿಯುವಂತಿಲ್ಲವೆ ಪರಿಸ್ಥಿತಿ? ಕಾಂಗ್ರೆಸ್ ಚಾಳಿ ಬಿಡುವುದಿಲ್ಲ. ಅದಕ್ಕೆಂದೇ ನರೇಂದ್ರ ಮೋದಿ ‘ಕಾಂಗ್ರೆಸ್​ವುುಕ್ತ’ ಭಾರತದ ಅವಶ್ಯಕತೆಯನ್ನು ದೀಕ್ಷೆಯಂತೆ ಕೈತೊಟ್ಟಿರುವುದು. ಭಯೋತ್ಪಾದನೆಯ ಬೇರು, ಮತೀಯ ಗ್ರಂಥ, ಬೋಧಕ, ಅದರ ಜಾರಿಯು Islamic Army ಪಾಕ್​ನಲ್ಲಿ, ಇಲ್ಲಿನ ಒಳಶತ್ರುಗಳು, ವೋಟ್​ಬ್ಯಾಂಕ್, ಅವುಗಳ ರಕ್ಷಕರಾದ ದೇಶ ಹಿತಾಸಕ್ತಿಯ ದ್ರೋಹಿಗಳು, ಅಪಾರ ಕಪು್ಪಹಣ, ದಾವೂದ್ ಇಬ್ರಾಹಿಂ ಕಡೆಯಿಂದ ಹರಿದು ಬರುತ್ತಿರುವ ಕಳ್ಳನೋಟುಗಳು, ಇಲ್ಲಿಯ ವಿತರಕರು, ಈ ದುಷ್ಟರ ಜಾಲ ಪೂರ್ಣ ನಿರ್ನಾಮವಾಗಬೇಕು! ಭಾರತದಲ್ಲಿ ಹಣ ಹೆಚ್ಚಾಗಿದೆ! ಬಹುಪಾಲು ಅದು ದುಷ್ಟರ ಕೈಯಲ್ಲೇ ಇದೆ. ಕಪು್ಪಹಣ ಮರಿಹಾಕುತ್ತಿದೆ. ಕಾಂಗ್ರೆಸ್ಸಿನಿಂದ ಹುಟ್ಟಿದ ಮರಿಗಳೆಲ್ಲ ಗಾಂಧಾರಿ ಸಂತಾನದಂತೆ, ಈಗ ಕುರುಕ್ಷೇತ್ರದಲ್ಲಿ ಸೇರಿವೆ. ಅಲ್ಲಿ ಈಗ ನಾವು ವೈಶಂಪಾಯನ ಕೊಳದ ಬಳಿಯೇ ಇದ್ದೇವೆ! ದುರ್ಯೋಧನ ಶಕ್ತಿ ಇರುವ ತನಕ ಯುದ್ಧ ಮುಗಿಯವುದಿಲ್ಲ. ಆ ಕೊನೆಯನ್ನು ಕಾಣಲು ಇಚ್ಛಿಸದವರು ತೀರ್ಥಯಾತ್ರೆ ಹೋಗಲಿ! ಸೋನಿಯಾ, ಸಿಂಗ್ವಿ, ಸಿಬಲ್, ದಿಗ್ವಿಜಯ, ಮಣಿ ಶಂಕರಾದಿಗಳಿಗೆ ಗೊತ್ತು. ಇದು Final ಅಂತ.

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts