ಕಪ್ಪುಹಣ ಶೇಖರಣೆ! ಅದರ ಫಲ ಚುನಾವಣೆಗಳಲ್ಲಿ ‘ಆಟ’ ಆಡಿಸುವುದು, ಬೇಕಾದವರನ್ನು ಅಧಿಕಾರಕ್ಕೇರಿಸುವುದು. ಬೇಡವಾದವರನ್ನು ಇಳಿಸುವುದು. ಸರ್ಕಾರಗಳನ್ನು ಉರುಳಿಸುವುದು, ಉಳಿಸುವುದು, ಪಕ್ಷಾಂತರ ಮಾಡುವುದು, ಮತಾಂತರ, ರಾಷ್ಟ್ರಾಂತರ, ಸಮುದಾಯಾಂತರ ಮಾಡುವುದು.
ಈಚೆಗೆ ಕೆಲವು ದಿನಗಳಿಂದ ಕೆಲವರ ಬಾಯಲ್ಲಿ ದಿನದಿನವೂ ‘ಸಗಣಿ’ ಮಾತು ಬರುತ್ತಿದೆ! ಈ ಕುರಿತು ಉಪನಿಷತ್ತು ಏನು ಹೇಳುತ್ತದೆ? ಎಂದು ಯೋಚಿಸಿದೆ. ಕೆಲವರಿಗೆ ಅಗತ್ಯವಾದ ಉಪದೇಶವನ್ನೂ ರವಾನಿಸಬೇಕೆಂದುಕೊಂಡು ಈಗ ಪೆನ್ನು ಹಿಡಿದಿದ್ದೇನೆ. ಒಬ್ಬ ಮಾಜಿಗಳಂತೂ ‘ಮಿಶ್ರತಳಿ’ಗಳ ಬಗ್ಗೆ ಅಪ್ಪಣೆ ಕೊಡಿಸಿ, ಮಾತನ್ನೆಲ್ಲ ಸಗಣಿ ಮಾಡಿಕೊಂಡು ಬಿಟ್ಟರು. ಮಾತಿನ ಸಗಣಿ ಬಳಿಯುವವರಾರು? ಪತ್ರಿಕಾಕರ್ತರೆ? ಟಿ.ವಿ.ಗಳವರೇ? ಹೈಕಮಾಂಡೇ? ಕೈ ಕಮಾಂಡೇ? ಸಗಣಿ ತಿಂದವರು ಉತ್ತರಿಸುವುದಿಲ್ಲ ಏಕೆ? ಸಗಣಿ- ಮಾನದಂಡ ಮೂಲದಾದ್ದರೆ ವಿಚಾರಶಕ್ತಿಯನ್ನೇ ‘ಬಂದ್’ ಮಾಡಿಬಿಡುತ್ತದೆ. ಒಬ್ಬ ಮಾಜಿ ‘ಸಗಣಿ’ ಉಗುಳಿದ್ದು ಹೀಗೆ- ‘ಈಗ ಲವ್ಜಿಹಾದ್ ತಡೆಗಟ್ಟುವುದಕ್ಕಿಂತ ಹೆಚ್ಚು ತುರ್ತಾದ ವಿಷಯಗಳು, ಕಾರ್ಯಾಚರಣೆಗಳೂ, ಪ್ರಗತಿ ಕಾರ್ಯಗಳೂ, ಅಭಿವೃದ್ಧಿ ಕಾರ್ಯಗಳೂ- ಎಲ್ಲ ರಾಜಕಾರ್ಯಗಳೂ ಇವೆ’ ಅಂತ. ಅಲ್ಲರೀ! ಭಯೋತ್ಪಾದನೆ ತಡೆಯುವುದು, ಕೃತಕ ತಳಿ ಪ್ರಜಾಭಿವೃದ್ಧಿ ತಡೆಗಟ್ಟುವುದೂ ಆದ್ಯತೆಯಾಗಬಾರದೆಂದರೆ, ನೀವು ಪಾಕ್ ಪರರೋ? ಚೀನಾ ಪರರೋ?
ನಮ್ಮ ಎಲ್ಲ ಅಭಿವೃದ್ಧಿ ಕಾರ್ಯಫಲಗಳನ್ನೂ ನುಂಗಿ ಹಾಕುತ್ತಿರುವುದು, ಅನಿಯಮಿತ ಕುಟುಂಬವೃದ್ಧಿ- ‘ಷರಿಯಾ’ ಹಾವಳಿ. ಪ್ರಜಾಸಂಖ್ಯೆ ನಿಯಂತ್ರಿತವಾಗ ಬೇಕೆಂದರೆ, ಹೆಚ್ಚು ಮಕ್ಕಳನ್ನು ಹಡೆದು, ಅವರು ದಿನಾ 10 ಕೆಜಿ ಅಕ್ಕಿ, ಬೇಳೆ, ರಾಗಿ ಪಡೆದು, ಇಂದಿರಾ ಕ್ಯಾಂಟಿನುಗಳಲ್ಲಿ ‘ಬಿಟ್ಟಿ’ ಊಟ ಗಿಟ್ಟಿಸಿ, ಉಳಿದ ‘ಫ್ರೀ’ ಟೈಮ್ ಪೂರ್ಣಾವಧಿಕಾಲವನ್ನು ಚಳವಳಿಗಳಲ್ಲೂ, ‘ಷಾಹಿನ್ ಬಾಗ್’ಮುತ್ತಿಗೆಯಲ್ಲೂ, ಈಗ ‘ದಿಲ್ಲಿ ಚಲೋ’ ಮುತ್ತಿಗೆಯ ಪವಿತ್ರ ಕಾಲದಲ್ಲೂ ಕಳೆಯುತ್ತ, ರಾಷ್ಟ್ರಕ್ಷೇಮಕ್ಕೆ ತಲೆನೋವಾದರೆ, ಆ ತಲೆಯಲ್ಲಿ ಯಾವ ‘ಸಗಣಿ’ ಇರಬೇಕೋ? ಸ್ವದೇಶಿಯೋ? ವಿದೇಶಿಯೋ? ‘ಮಿಶ್ರತಳಿ’ ಎಂಬ ಪವಿತ್ರ ಮಾತು ಒಬ್ಬರ ಬಾಯಿಂದ ಬಂದ ಸಗಣಿ! ‘ಅಬ್ದುಲ್ಲಾ ಅಯ್ಯರು’ ಶಬ್ದ ನೋಡಿ; ಮಿಶ್ರತಳಿಯಲ್ಲವೇ? ‘ಕಮಲಾ-ಹ್ಯಾರಿಸ್’ ಮಿಶ್ರ ತಳಿಯಲ್ಲವೇ? ಮುಂದಿನ ಜನ್ಮದಲ್ಲಿ ಇಸ್ಲಾಮಿಯರಾಗಿ ಜನಿಸುವ ಬಯಕೆಯವರ ವಂಶಕುಡಿಯ ಬಾಯಿಯಿಂದ ಏನೇನು ಮಾತು ಹೊರಬರುತ್ತಿದೆಯಪ್ಪ.
‘ತಿಂದ ಆಹಾರ ಮೂರು ವಿಧವಾಗಿ ಪರಿಣಾಮ ಹೊಂದುತ್ತದೆ’ ಎಂದು ಛಾಂದೋಗ್ಯ ಉಪನಿಷತ್ತು ಹೇಳುತ್ತದೆ. ‘ಅನ್ನಂ ಅಶಿತಂ ತ್ರೀಧಾ ಭವತಿ’ ಅಂತ. ಅದರಲ್ಲಿ ಸೂಕ್ಷ್ಮ, ಆವಿಯಂತಹ ದ್ರವ ಭಾಗವು ಮನಸ್ಸಾಗಿ ಪರಿಣಾಮ ಹೊಂದುವುದೆಂದೂ, ದೈವಭಾಗವು-ಹಾಲು, ಮೊಸರು, ತುಪ್ಪ, ಪಾಯಸ-ಇಂಥವು ರಕ್ತದಲ್ಲಿ ಸೇರುತ್ತವೆಯೆಂದು, ಅಜೀರ್ಣವಾದದ್ದು-‘ಯತ್ ಸ್ಥೂಲಂ ತತ್ ಶಕೃತ್’= ಸಗಣಿಯಾಗುತ್ತದೆಯೆಂದೂ ಹೇಳಿ, ಆಹಾರದಲ್ಲಿ ರಾಜಸ, ತಾಮಸ, ಸಾತ್ವಿಕ ಭಾಗ ಮಾಡಿ ಹೇಳಿತು! ಯಾವಾಗ? ಸಹಸ್ರಮಾನಗಳ ಹಿಂದೆ? ಅದು ಆಯುರ್ವೆದದ ‘ಕಫ, ವಾತ, ಪಿತ್ತ’ ಕಲ್ಪನೆಗಳ ಜನಕವಾದ ಸೂಕ್ತಿ. ಈ ಮೂಲದಿಂದಲೇ ಹಿಂದೆ ಹಿರಿಯರು ತಲೆಗೆಟ್ಟವನನ್ನು ‘ಹೊಟ್ಟೆಗೆ ಏನು ತಿಂತೀಯ?’ ಎಂದು ಕೇಳುತ್ತಿದ್ದರು. ಅಪಾರ್ಥ ಬೇಡವಯ್ಯ. ಅಯ್ಯರೇ! ಬೆಳೆದ ಬೆಳೆಯಲ್ಲಿ ಭತ್ತ, ರಾಗಿ, ಜೋಳ, ತೊಗರಿ, ಇಂಥವಲ್ಲಿ ಧಾನ್ಯವು ಮನುಷ್ಯನಿಗೆಂದೂ, ಹುಲ್ಲು ಕಡ್ಡಿ ದನಕ್ಕೆಂದೂ ವಿಭಾಗ ಮಾಡಿದವರು ಬ್ರಾಹ್ಮಣರಲ್ಲ! ಇವರು ಯಾವ Reserved ವಿಭಾಗಕ್ಕೂ ಅನರ್ಹರಾದವರು ಅಂತಲೇ ‘ಗೋ=ಬ್ರಾಹ್ಮಣ’ ಸಮೀಕರಣ ಹುಟ್ಟಿರಬೇಕು. ಈಗ ಪ್ರಶ್ನೆ. ದನಗಳನ್ನು ಕೊಲ್ಲಬೇಕು ಎಂಬುವವರು ನಾಳೆ-ಅಲ್ಲಲ್ಲ- ಈಗಲೇ! ಬ್ರಾಹ್ಮಣರನ್ನೂ ಕೊಲ್ಲಬೇಕೆಂದಾರು!
‘ಬ್ರಾಹ್ಮಣ ಹಿಂಸನ’ ಎಂದರೇನು? ತೇಜೋವಧೆ ಎಂದರೇನು? ಕೊಲ್ಲುವುದು. ಒಬ್ಬ ಸಗಣಿ ಆಹಾರ ಸೇವೀ ಚಳವಳಿಯನ್ನೇ ಮಾಡಿದ- ‘ಗೀತೆಯನ್ನು ಸುಡಬೇಕು!’ ಅಬ್ಬ! ರಾಮಾಯಣವನ್ನೇ ಸುಟ್ಟರು ತಮಿಳಿನ ಡಿಕೆ, ಡಿಎಂಕೆಗಳವರು. ಇಲ್ಲಿನ ಸಗಣಿ ಪುತ್ರರು-ರಾಮನನ್ನೂ, ಸೀತೆಯನ್ನೂ ದೂಷಿಸಿದರು. ಬಾಯಿಗೆ ಬಂದದ್ದೇ- ಏನು? ಸಗಣಿ?- ಬರೆದರು, ಆಡಿದರು. ‘ಕುಲವನ್ನು ನಾಲಿಗೆ ಹೇಳಿತು’ ಗಾದೆ ಮಾಡಿದವರು ಬ್ರಾಹ್ಮಣರಲ್ಲ! ಜಾನಪದರು! ಈಗ, ‘ಕುಲಪರೀಕ್ಷೆ’- ಯಾವ ಸಗಣಿಯಿಂದ? ನಾನು ಹೇಳಲಾರೆ. ಮಾಜಿಗಳೇ ಹೇಳಬೇಕಯ್ಯ? ‘ಕುಲಪರೀಕ್ಷೆ’ ಏಕೆ ಬೇಡ? ‘ವರ ಪರೀಕ್ಷೆ, ವಧು ಪರೀಕ್ಷೆ’ ಇರಬಹುದಾದರೆ ಡಿಎನ್ಎ ಪರೀಕ್ಷೆ ಆಕ್ಷೇಪಣೀಯವೂ ಅಲ್ಲ, ಅನಪೇಕ್ಷಿತವೂ ಅಲ್ಲ. ಜನ ಬಯಸುತ್ತಾರೆ- ‘ಶುದ್ಧ ಆಹಾರ ಸೇವಿಸುವವರು ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಬೇಕು’ ಅಂತ. ಅಯ್ಯಯ್ಯೋ ಮಂತ್ರಿಗಳು ಈಗೀಗ ‘ಕಂತ್ರಿ’ಗಳಾಗುತ್ತ ಬರುತ್ತಿರುವುದು ‘ಸಗಣಿ’ ಮಹಿಮೆಯಿಂದಲೇ ಇರಬೇಕು.
‘ಭಯೋತ್ಪಾದನೆ ನಿಗ್ರಹ’ ಆದ್ಯತೆ ಬೇಡ ಎಂಬುವವನು ವೋಟುಭಕ್ತ. ವೋಟುಭಿಕ್ಷುಕ! ಈಗ ವೋಟು ಯಾವ ಪ್ರಾಣಿಯ ಸಗಣಿ? ಜಾತಿವಾರು ವಿಂಗಡಿಸಿದರೆ ಸತ್ಯ ಹೊರಬರುತ್ತದೆ. ಅಮೆರಿಕದ ಚುನಾವಣೆಯಲ್ಲಿ ಈಗ ‘ಸಗಣಿ’ ವೋಟುಗಳ ಹಾವಳಿ ಅಂತ ದಿನಾ ಬರುತ್ತಿರುವ ಸತ್ಯಾತ್ಮಕ ವರದಿ. ವೋಟಿಗೆ ಜಾತಿಯಿಲ್ಲವೇ? ಏನಿರಯ್ಯ? ಜಾತಿ ಇದ್ದ ಮೇಲೆ ಸಗಣೀ ಸಂಬಂಧ ಇರಲಾರದೆನ್ನುತ್ತೀರಾ? ನರಭಕ್ಷಕ ಜಾತಿಯೊಂದು ಈಗ ಭಾರತದಲ್ಲೇ ಕೆಲಸ ಮಾಡುತ್ತ, ಕಾಶ್ಮೀರ, ಬಂಗಾಳ, ಕೇರಳ, ತಮಿಳುನಾಡುಗಳಲ್ಲಿ ಹರಡಿ, ರಾಷ್ಟ್ರೀಯತೆ ವಿರುದ್ಧ ದಾಂಧಲೆ ಮಾಡುತ್ತಿದೆ. ಅಲ್ಲಿ ಆದ್ಯತೆ ಯಾವುದು? ಸ್ವಾರ್ಥ? ಅದರ ಪರಿಣಾಮ, ಕಪು್ಪಹಣ ಶೇಖರಣೆ! ಅದರ ಫಲ ಚುನಾವಣೆಗಳಲ್ಲಿ ‘ಆಟ’ ಆಡಿಸುವುದು, ಬೇಕಾದವರನ್ನು ಅಧಿಕಾರಕ್ಕೇರಿಸುವುದು. ಬೇಡವಾದವರನ್ನು ಇಳಿಸುವುದು. ಪಕ್ಷಾಂತರ ಮಾಡುವುದು, ಮತಾಂತರ, ರಾಷ್ಟ್ರಾಂತರ, ಸಮುದಾಯಾಂತರ ಮಾಡಿ, ‘ಕ್ರಿಸ್ಟೋಫರ್ ಮುನಿಯಪ್ಪ’, ‘ಮ್ಯಾಲ್ಕಾಲ್ಮ ಆದಿಶೇಷಯ್ಯ’ (ಹಿಂದಣ ಮದ್ರಾಸು ವಿಶ್ವವಿದ್ಯಾಲಯದ ಕುಲಪತಿ) ‘ಅಹ್ಮದ್ ಪಟೇಲ್’ (ದಿವಂಗತ ಕಾಂಗ್ರೆಸ್ ನಾಯಕ) ಹೀಗೆ ಅನೇಕ ತಳಿಗಳನ್ನು ಸೃಷ್ಟಿಸುವುದು! ಇದನ್ನೇ ಹಿಂದೇ ‘ವಿಶ್ವಾಮಿತ್ರ ಸೃಷ್ಟಿ’ ಎನ್ನುತ್ತಿದ್ದರು. ವಸಿಷ್ಠ ಸೃಷ್ಟಿಯಲ್ಲಿ ತೆಂಗು, ಆಕಳು, ಕರಿಎಳ್ಳು, ಕಡಲೆ ಹುಟ್ಟಿದರೆ, ವಿಶ್ವಾಮಿತ್ರ ಸೃಷ್ಟಿಯಲ್ಲಿ ಈಚಲ, ಎಮ್ಮೆ, ಗುರ್ರೆಳ್ಳು (ಹುಚ್ಚೆಳ್ಳು), ಕಡಲೇಕಾಯಿ (ನೆಲಗಡಲೆ) ಇಂಥವು ಪ್ರತಿಸೃಷ್ಟಿಯಾದವು!
ವಿಶ್ವಾಮಿತ್ರರು ಒಮ್ಮೆ ನಾಯಿಮಾಂಸ ತಿನ್ನಲಿಲ್ಲವೇ? ಅದರ ಫಲ! ತಿರುಪತಿ ದೇವಾಲಯ ನೈವೇದ್ಯಕ್ಕೆ ಇಂದು ಮೆಣಸು ಉಪಯುಕ್ತ ಮೆಣಸಿನಕಾಯಿ ಅಲ್ಲ. ಇದು ‘ಚಿಲ್ಲೀಸ್’ ಎಂಬುದು ದಕ್ಷಿಣ ಅಮೆರಿಕದ ಚಿಲೀ ಪ್ರಾಂತದ ಸೃಷ್ಟಿ. ವಿದೇಶೀ ತಳಿ. ಗೆಣಸು ಭಾರತೀಯ, ‘ಮೂಲಂಗೀ’ ವಿದೇಶೀ! ನೋಡಿ, ತಳಿಗಳ ವರ್ಗೀಕರಣ! ಆಕಳತುಪ್ಪ, ಸಗಣಿ, ಹಾಲು, ಮೂತ್ರ, ಬೆಣ್ಣೆ- ಎಲ್ಲ ಪಂಚಗವ್ಯಕ್ಕೆ ಬರುತ್ತದೆ. ಬೇರೆ ಪ್ರಾಣಿಗಳದ್ದು? ‘ಗವ್ಯ’ ಎಂದರೆ ಗೋವಿನ ಉತ್ಪನ್ನ. ‘ಆಜ್ಯ’ ಎಂದರೆ ಆಡಿನ (‘ಅಜ’ದ) ಉತ್ಪನ್ನ. ಹಿಂದೆ ಖುಷಿಗಳು ಹೋಮಕ್ಕೆ ಆಜ್ಯವನ್ನೇ- ಆಡಿನ ಹಾಲಿನಿಂದಲೇ ತೆಗೆದ ತುಪ್ಪವನ್ನೇ ಉಪಯೋಗಿಸುತ್ತಿದ್ದರು. ಏಕೆ? ಆಡು- ಅಗ್ನಿಯ ವಾಹನ. ‘ಆಡುಮುಟ್ಟದ ಸೊಪ್ಪಿಲ್ಲ’ ಎಂಬಂತೆ ಆ ಹಾಲಿನಲ್ಲಿ ಸಕಲ ಆರೋಗ್ಯಗುಣಗಳೂ ಇವೆಯಾಗಿ ಅದು ಯಜ್ಞೇಶ್ವರನಿಗೇ ಮೀಸಲು, ಆದುದರಿಂದ ಮನುಷ್ಯರು ಅದನ್ನು ಅಪಹರಿಸಬಾರದು, ಕುಡಿಯಬಾರದು ಎಂದು ಪೂಜ್ಯಾರ್ಥದಲ್ಲಿ ಮೀಸಲು, ರಿಸರ್ವ್ ಮಾಡಿದ್ದರು ಪಾಪ! ಗಾಂಧಿಯವರು ಅದನ್ನೇ ಕುಡಿದು, ದೇಶಕ್ಕೆ ಅವಾಂತರ ಮಾಡಿದರು! ‘ಆಡು’ ಅಂಗಾರಕನಿಗೂ ವಾಹನ! ದೇವತೆಗಳ ವಾಹನಗಳಲ್ಲೂ ಮಿಥ್ ಇರುತ್ತದೆ. ಆಡು ‘ಅಜ’ ಶಬ್ದ ಬ್ರಹ್ಮನಿಗೂ, ದೇವರಿಗೂ ವೇದದಲ್ಲಿ ಸಂಕೇತ.
ಈಗ ಒಂದು ಉಪಾಖ್ಯಾನ ಹೇಳುತ್ತೇನೆ. ಹಿಂದೆ ಧಾರಾ ನಗರಿಯಲ್ಲಿ (ಈಗಿನ ಮಧ್ಯಪ್ರದೇಶ ‘ಥಾರ್’) ಭೋಜರಾಜ ಅಂತ ದೊರೆ ಇದ್ದ. ಇವನು ಮಗುವಾಗಿದ್ದಾಗ ಇವನ ಚಿಕ್ಕಪ್ಪ ಮಂಜರಾಜ ಆಳುತ್ತಿದ್ದ! ಜೋಯಿಸನೊಬ್ಬ ಮಗುವಿನ ಕೈ ನೋಡಿ, ಇವನೇ ಮುಂದೆ ದೊರೆಯಾಗುತ್ತಾನೆ ಅಂತ ಭವಿಷ್ಯ ನುಡಿದ. ಇದು ರಾಜನಿಗೆ ಹುಳಿ ಹಿಂಡಿ, ತನ್ನ ಮಗನಿಗೆ ರಾಜ್ಯ ತಪು್ಪವ ಭೀತಿಯಲ್ಲಿ ಭೋಜನನ್ನು ಕೊಲ್ಲಲು ಕಟುಕರನ್ನು ನಿಯಮಿಸಿ, ಅಡವಿಗೆ ಅಟ್ಟಿದ! ಆಗಿನ ಕಟುಕರಿಗೂ ಕರುಣೆ ಇತ್ತು. ಕಟುಕರು ಮಗುವನ್ನು ‘ನಿನ್ನ ಕೊನೆ ಆಸೆ ಏನು?’ ಅಂತ ಕೇಳಿದರು. ಬಾಲಕವಿ ಭೋಜ ತಾಳೆಗರಿಯಲ್ಲಿ ಒಂದು ಶ್ಲೋಕ ಗೀಚಿ, ‘ಚಿಕ್ಕಪ್ಪನಿಗೆ ಕೊಡು, ಇದೇ ಆಸೆ’ ತಿಳಿಸಿ ಬಾ ಎಂದ. ಅದರಲ್ಲಿ ಹೀಗೆ ಬರೆದಿತ್ತು, ‘ಹಿಂದೆ ಕೃತಯುಗಕ್ಕೆ ಅಲಂಕಾರಪ್ರಾಯನಾದ ಮಾಂಭಾತು ಅಂತ ದೊರೆ ಇದ್ದ. ಸತ್ತ. ತ್ರೇತಾಯುಗದಲ್ಲಿ ಧನುಧರ ಶ್ರೀರಾಮ ಸಮುದ್ರಕ್ಕೇ ಸೇತುವೆ ಕಟ್ಟಿದ. ಅವನೂ ಹೋದ. ದ್ವಾಪರದಲ್ಲಿ ಧರ್ಮರಾಜ ಅಂತ ಧರ್ವತ್ಮ ಇದ್ದ. ಅವನೂ ಸತ್ತ. ಈ ಯಾರೊಬ್ಬರೂ ಈ ಭೂಮಿ, ಅಧಿಕಾರ, ಪದವಿಗಳನ್ನು ಜೊತೆಗೆ ಕೊಂಡೊಯ್ಯಲಿಲ್ಲ. ಆದರೆ ಹೇ, ಮಹಾರಾಜ! ನೀನು ಹಾಗಲ್ಲ; ನೀನು ಸತ್ತಾಗ ಈ ಭೂಮಿಯನ್ನೇ ಕೊಂಡೊಯ್ಯುವೆ’ ಅಂತ ಶ್ಲೋಕ ಓದಿ ಮಂಜರಾಜನಿಗೆ ಜ್ಞಾನೋದಯವಾಯ್ತು. ಸತ್ತಾಗ ಏನೂ ಜೊತೆಗೆ ಬರುವುದಿಲ್ಲ ಅಂತ. ಅವನೂ ಭೋಜನೂ ಅಪ್ಪಟ ಹಿಂದೂ ಆಗಿದ್ದರು. ಅವರ ಹೃದಯಗಳು ಬಂಡೆ ಆಗಿರಲಿಲ್ಲ. ಬೆಳಗಾವಿಯ ಬೇತಾಳರಿಗೆ, ಮೈಸೂರು ಕಡೆಯ ಮಹಿಷಾಸುರನಿಗೆ, ಕರ್ನಾಟಕದ ಕರಾಳ ಪುರುಷರಿಗೆ, ಕಳಂಕಿತರಿಗೆ, ತಿಹಾರ್ ಜೈಲಿನ ‘ಜೈಶಂಕರನಿಗೆ ಬೋಧಿಸುವವರಾರು? ಒಬ್ಬ ಮಾಜಿ ಹೇಳುತ್ತಾರೆ- ‘ಇಂದಿರಾ ಕ್ಯಾಂಟೀನು ನಡೆಸಿ’ ಅಂತ. ಅದು ನಡೆಯಲು ಕಾಲೇ ಇಲ್ಲ! ಒಬ್ಬ ಬ್ಯಾಂಕು ಕ್ಯಾಷಿಯರ್ ಹೇಳುತ್ತಿದ್ದ- ‘ದಿನಾ ನಾನು ಇಷ್ಟು ಕೋಟಿ, ಅಷ್ಟು ಕೋಟಿ ಬಟವಾಡೆ ಮಾಡಿದೆ’ ಅಂತ. ಅವರಪ್ಪನ ಹಣವೇ? ಇದು ಬಾಗಲಕೋಟೆಯ ಬಾಣಸಿಗರಿಗೆ ತಿಳಿಯುತ್ತಿಲ್ಲ! ಚಾಮುಂಡೇಶ್ವರಿ ಏಕೋ ಬುದ್ಧಿ ಕೊಡುತ್ತಿಲ್ಲ.
ಅಯ್ಯಾ ಅಬ್ದುಲ್ಲಾ ಐಯ್ಯರೇ! ದಯವಿಟ್ಟು ಕನ್ನಡಿಗರ ತಲೆ ಇಷ್ಟು ಕೆಡಿಸಬೇಡಿ. ಅವು ಸಾಕಷ್ಟು ಕೆಟ್ಟು ಹೋಗಿವೆ. ನನ್ನದೊಂದು ಗಡಿಯಾರ ಕೆಟ್ಟಿತ್ತು. ಧಾರವಾಡದ ಒಂದು ಅಂಗಡಿಯಲ್ಲಿ ‘ರಿಪೇರಿ ಮಾಡಿಕೊಡಿ’ ಅಂತ ಕೇಳಿದೆ. ಇದು ಐವತ್ತು ವರ್ಷದ ಮಾತು. ಗಡಿಯಾರಗಳು ಆಗಲೂ ಕೆಡುತ್ತಿದ್ದವು. ಈಗಲೂ ಕೆಡುತ್ತವೆ. ‘ಹೂಬ್ಲೇ’ ಕೂಡ! ಆಗ ಅಂಗಡಿಯವ ಹೇಳಿದ್ದು. ‘ಇದನ್ನು ರೈಲ್ವೆ ಹಳಿಯ ಮೇಲಿಟ್ಟು ಬಿಡಿ. ರೈಲು ಓಡುವಾಗ ತಂತಾನೇ ರಿಪೇರಿಯಾಗುತ್ತದೆ’ ಅಂತ.
ಆಕಳ ಸಗಣಿಯಾದರೆ ಸುಟ್ಟು ಭೂಮಿಯಲ್ಲಿ ಹೂತು, ಕರ್ಪರ ಬೆರಸಿ ವಿಭೂತಿ ಮಾಡಬಹುದು. ಆಡು, ಕುರಿ ಎಮ್ಮೆ, ಕಾಡುಪ್ರಾಣಿಗಳ ಸಗಣಿ ಯಾವುದಕ್ಕೂ ಬರುವುದಿಲ್ಲ! ಇದಿಷ್ಟು ಸ್ವದೇಶೀ ಆದ ಪ್ರಾಣಿಗಳ ಸಗಣಿ! ವಿದೇಶೀ ಪ್ರಾಣಿ, ಪಶು ಸಗಣಿ ಹೇಗಿರುತ್ತದೋ? ನಾನರಿಯೆ!
ಅಬ್ಬ! ಒಂದು ವಿಷಯ ಹೇಳಲು ಮರೆತಿತ್ತು. ಆಕಳಿಗಿಂತ ಕುರಿಯ ಮಾಂಸಕ್ಕೆ ಬೆಲೆ ಹೆಚ್ಚಂತೆ! ಕೊರಿಯಾದಲ್ಲಿ ಈಗಲೂ ನಾಯಿಮಾಂಸ ತಿನ್ನುತ್ತಾರಂತೆ! ಇಲ್ಲಿ ಕೆಲವು ರಾಜಕೀಯ ಪಕ್ಷಗಳು ‘ವೋಟಿನ’ ಬೇಟೆಯಲ್ಲಿ ನರಮಾಂಸವನ್ನೇ ಭಕ್ಷಿಸುತ್ತವೆ. ಪಕ್ಷದ ಅಧ್ಯಕ್ಷ‘ಗಿರಿ’ ವಹಿಸುತ್ತವೆ; ‘ಸಿರಿ’ಯನ್ನೇ ಬರಿದು ಮಾಡುತ್ತವೆ. ನದಿಯನ್ನೇ ಬಾಗಿಸುತ್ತವೆ. ಈ ಬೇಟೆಗೆ ವಿದೇಶೀ ನಾಯಿಗಳು ‘ಛೂ’ ಬಿಡುತ್ತ ಮುನ್ನಡೆಯುತ್ತವೆ. ದನಗಳೇ ವಾಸಿ! ಗೋಪೂಜೆ ಮಾಡುತ್ತಾರೆ ಹೊರತು ನಾಯಿ, ಹಂದಿ, ಬೆಕ್ಕು, ಯಾರೂ ಪೂಜಿಸುವುದಿಲ್ಲ. ವೃದ್ಧ ಗೋವು, ಎತ್ತುಗಳನ್ನು ಕೊಲ್ಲುವ ತರ್ಕದಲ್ಲಿ, ಕುಟುಂಬದ ಹಿರಿಯರನ್ನೂ ಕೊಲ್ಲಬೇಕಾಗುತ್ತದೆಯಲ್ಲವೇ? ಸಗಣಿ ತಲೆಗೆ ಈ ತರ್ಕ ಹತ್ತುವುದಿಲ್ಲ. ರಾಮನೋ, ಸಿದ್ಧನೋ, ಬುದ್ಧನೋ, ಬೇತಾಳನೋ, ಭೈರವನೋ, ಕಾವಿ, ಖಾಕಿ, ಖಾವಿಧಾರಿಗಳೋ ಈ ತರ್ಕಕ್ಕೆ ಕೊನೆ ಹಾಡಲಾರರು. ಕರ್ನಾಟಕದಲ್ಲಿ ತಲೆಬುಡವಿಲ್ಲದ ತರ್ಕವೋ ತರ್ಕ! ಅದು ಶಾಸ್ತ್ರ ಯಾವುದು? ‘ಸಗಣೀ’ ಶಾಸ್ತ್ರ. ಹೊಸದು! ‘ಗಿಣೀ’ ಶಾಸ್ತ್ರ, ರೋಗಿಣಿ ಶಾಸ್ತ್ರ ಹೋಯ್ತು. ‘ಹೈಕಮಾಂಡ್ ಶಾಸ್ತ್ರ’ಆಗಿದೆಯಲ್ಲ!
(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)