More

    ಬದುಕಿನ ಮೌಲ್ಯಗಳನ್ನು ಹೇಳುವುದಕ್ಕಿಂತ ಅನುಸರಿಸಿ

    ಮಡಿಕೇರಿ: ಬದುಕಿನ ಮೌಲ್ಯಗಳನ್ನು ಹೇಳುವುದಕ್ಕಿಂತ ಅನುಸರಿಸಿ ನಿರೂಪಿಸುವುದೇ ಸೂಕ್ತ ಎಂದು ಸಾಹಿತಿ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.
    ಮಡಿಕೇರಿ ಲಯನ್ಸ್ ಕ್ಲಬ್ ವತಿಯಿಂದ ಸೋಮವಾರ ಆಯೋಜಿಸಿದ್ದ ಸಂಹಿತಾ ಹೆಸರಿನ ಪ್ರಾಂತೀಯ ಸಮ್ಮೇಳನದಲ್ಲಿ ಬದುಕಿನಲ್ಲಿ ಕೊಡುವುದರಲ್ಲಿರುವ ಸಂತೋಷ ಎಂಬ ವಿಚಾರದ ಕುರಿತು ಮಾತನಾಡಿ, ಬಾಯಿಯಲ್ಲಿ ಹೇಳುವುದು ಮೌಲ್ಯವಲ್ಲ. ಹೇಳಿದ ಮೌಲ್ಯಗಳಂತೆ ಜೀವಿಸಿ ತೋರಿಸುವುದೆ ನಿಜವಾದ ಮೌಲ್ಯ. ಹಲವರು ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡುತ್ತಾರೆ. ಹೀಗಿರುವಾಗ ನಾವು ಗಳಿಸಿದ್ದರಲ್ಲಿ ಕೊಂಚವನ್ನಾದರೂ ಇತರರ ಏಳಿಗೆಗಾಗಿ ತ್ಯಾಗ ಮಾಡುವುದು ಅಗತ್ಯ ಎಂದು ಪ್ರತಿಪಾದಿಸಿದರು. ಕೊಡುವುದರಿಂದಾಗಿ ಯಾವುದೇ ನೋವು ಉಂಟಾಗಲಾರದು. ನಮ್ಮಲ್ಲಿರುವ ಹಲವು ಸಂಪತ್ತಿನಲ್ಲಿ ಕೆಲವನ್ನಾದರೂ ಇತರರಿಗಾಗಿ ನೀಡಿದಾಗ ಮನಸ್ಸಿಗೆ ದೊರಕುವ ಸಂತೋಷವನ್ನು ವರ್ಣಿಸಲು ಸಾಧ್ಯ ಇಲ್ಲ ಎಂದರು.
    ದಾನ ನೀಡುವುದು ಉಪಕಾರ ಅಲ್ಲ. ನಮ್ಮ ಜೀವನದ ಪರಿಪೂರ್ಣತೆಯ ಸಂಕೇತ ಅದಾಗಿದೆ. ಕೊಡುಗೆ ದೊಡ್ಡದೇ ಇರಬೇಕು ಎಂದೇನಿಲ್ಲ. ನಿಮ್ಮ ಕೈಲಾದ ಕೊಡುಗೆಯೂ ಹಲವರ ಪಾಲಿಗೆ ದೊಡ್ಡ ಮಟ್ಟದ ಉಪಕಾರವಾಗಬಲ್ಲದು ಎಂದರು.
    ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪಿ.ಪಿ.ಸೋಮಣ್ಣ ಮಾತನಾಡಿ, ಲಯನ್ಸ್ ಕ್ಲಬ್‌ಗಳು ಪ್ರಾಂತೀಯವಾಗಿ ನೂರಾರು ಯೋಜನೆಗಳನ್ನು ಸಮಾಜಕ್ಕೆ ನೀಡಿದ್ದು, ಅಂಗಾಂಗ ದಾನ, ನೇತ್ರದಾನದಂಥ ಯೋಜನೆಗಳು ಅನೇಕರಿಗೆ ಪ್ರಯೋಜನಕಾರಿಯಾಗಿದೆ. ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಲಯನ್ಸ್ ಕ್ಲಬ್ ಸದಸ್ಯರು ಸಂತ್ರಸ್ತರ ನೆರವಿಗೆ ಮಾನವೀಯತೆಯೊಂದಿಗೆ ಧಾವಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ವನಮಹೋತ್ಸವದಂಥ ಯೋಜನೆಗಳು ಭವಿಷ್ಯದಲ್ಲಿ ಹಸಿರು ಪರಿಸರಕ್ಕೆ ಕಾರಣವಾಗಲಿದೆ ಎಂದರು.
    ಲಯನ್ಸ್ ಕ್ಲಬ್‌ನ ವಲಯ ಅಧ್ಯಕ್ಷ ಕೆ.ಕೆ.ದಾಮೋದರ್, ಶಾಶ್ವತ್ ಬೋಪಣ್ಣ ತಮ್ಮ ವ್ಯಾಪ್ತಿಯ ಲಯನ್ಸ್ ಕ್ಲಬ್‌ಗಳ ಸಾಧನಾ ವರದಿಯನ್ನು ಮಂಡಿಸಿದರು.
    ಲಯನ್ಸ್ ಸಂಸ್ಥೆ ರಾಜ್ಯಪಾಲರ ಪ್ರತಿನಿಧಿಗಳಾದ ಜೆ.ಸಿ.ಶೇಖರ್, ನವೀನ್ ಕಾರ್ಯಪ್ಪ, ಲಯನ್ಸ್ ಸಮ್ಮೇಳನ ಸಮಿತಿ ಅಧ್ಯಕ್ಷ ಬಿ.ಸಿ.ನಂಜಪ್ಪ, ಕಾಯದರ್ಶಿ ಕೆ.ಮಧುಕರ್, ಖಜಾಂಚಿ ಜೆ.ವಿ.ಕೋಟಿ, ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಲ್.ಮೋಹನ್ ಕುಮಾರ್, ಖಜಾಂಚಿ ಡಿ.ಮಧುಕರ್ ಶೇಟ್, ಸಮ್ಮೇಳನ ಸಮಿತಿ ಸಲಹೆಗಾರರಾದ ಎಂ.ಎ.ನಿರಂಜನ್, ಬಿ.ವಿ.ಮೋಹನ್ ದಾಸ್, ಅನಿತಾ ಸೋಮಣ್ಣ,
    ಸಾಹಿತಿ ಡಾ.ಗುರುರಾಜ ಕರ್ಜಗಿ, ಪರಿಮಳಾ ಗುರುರಾಜ ದಂಪತಿಯನ್ನು ಸನ್ಮಾನಿಸಲಾಯಿತು. ಮಡಿಕೇರಿ ಲಯನ್ಸ್ ಕ್ಲಬ್‌ನ ಮಹಿಳಾ ಸದಸ್ಯರು ನಡೆಸಿಕೊಟ್ಟ ಭಾರತೀಯ ಸಂಸ್ಕೃತಿ ಬಿಂಬಿಸುವ ಫ್ಯಾಷನ್ ಶೋ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts