ಹೈಕಮಾಂಡ್​ ನನಗೆ ಸಿಎಂ ಸ್ಥಾನ ನೀಡಿದರೆ ನಿಭಾಯಿಸಲು ರೆಡಿ: ಡಿಸಿಎಂ ಪರಂ

ಬೆಳಗಾವಿ: ಒಂದು ವೇಳೆ ಹೈಕಮಾಂಡ್​ ನನಗೆ ಸಿಎಂ ಸ್ಥಾನ ನೀಡಿದರೆ ಅದನ್ನು ನಿಭಾಯಿಸಲು ನಾನು ಸಿದ್ಧ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಬ್ಬರು ಹೈಕಮಾಂಡ್​ ನಿಮಗೆ ಸಿಎಂ ಜವಾಬ್ದಾರಿ ನೀಡಿದರೆ ನಿಭಾಯಿಸುತ್ತೀರಾ ಎಂದು ಪ್ರಶ್ನಿಸಿದಾಗ, ಖಂಡಿತವಾಗಿಯೂ ನಿಭಾಯಿಸುತ್ತೇನೆ ಎಂದಿದ್ದಾರೆ.

ನಾನು ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಎರಡು ಬಾರಿ ಚುನಾವಣೆಗೆ ಪಕ್ಷವನ್ನು ಮುನ್ನಡೆಸಿದ್ದೇನೆ. ಹಾಗಾಗಿ ಸರ್ಕಾರ ಬಂದಾಗ ಹೈಕಮಾಂಡ್​ ನನಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ. ನನ್ನ ಶಕ್ತಿ ಮೀರಿ ನಾನು ಕೆಲಸ ಮಾಡುತ್ತೇನೆ. ಮುಂದೆ ಅವರು ಯಾವುದೇ ಜವಾಬ್ದಾರಿ ನೀಡಿದರೂ ನಾನು ನಿಭಾಯಿಸುತ್ತೇನೆ ಎಂದರು.

ಮುಂದಿನ ಅಧಿವೇಶನದಲ್ಲಿ ಅಭಿವೃದ್ಧಿ, ರೈತರ ಸಮಸ್ಯೆ, ಬರಗಾಲ ಮತ್ತು ಕೇಂದ್ರ ಸರ್ಕಾರ ನಮಗೆ ಕೊಟ್ಟಿರುವ ಅನುದಾನದ ಸರ್ಕಾರದ ವತಿಯಿಂದ ಚರ್ಚಿಸಿ ಜನರಿಗೆ ತಿಳಿಸುತ್ತೇವೆ ಎಂದರು. (ದಿಗ್ವಿಜಯ ನ್ಯೂಸ್)