ಸರಳ ಬದುಕು ಉನ್ನತ ಚಿಂತನೆ ಎತ್ತರದ ಸಾಧನೆ

Latest News

ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ

ಚಾಮರಾಜನಗರ: ಮಕ್ಕಳ ದಿನಾಚರಣೆ ಅಂಗವಾಗಿ ತಾಲೂಕಿನ ಕೋಡಿಮೋಳೆ ಗ್ರಾಮದ ಭಗತ್‌ಸಿಂಗ್ ಯುವ ಸೇನೆಯಿಂದ ಗುರುವಾರ ನಗರದ ದೀನಬಂಧು ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು...

ಜಾತಿ ವ್ಯವಸ್ಥೆ ವಿರೋಧಿಸಿದ್ದ ದಾಸ ಶ್ರೇಷ್ಠ

ಚಾಮರಾಜನಗರ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕನಕದಾಸರ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಕನಕದಾಸರ ಭಾವಚಿತ್ರಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ದಾಸ ಪರಂಪರೆಯಲ್ಲಿ...

ಮತದಾರರಿಗೆ ರಮೇಶ್ ಕೃತಜ್ಞತೆ

ಚಾಮರಾಜನಗರ: ಹರದನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ರಮೇಶ್, ಶುಕ್ರವಾರ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ತೆರಳಿ...

ಕಂದಾಚಾರ, ಜಾತೀಯತೆ ವಿರುದ್ಧ ಹೋರಾಟ

ಚಾಮರಾಜನಗರ: ಸಮಾಜದಲ್ಲಿ ಗಟ್ಟಿಯಾಗಿ ನೆಲಯೂರಿದ್ದ ಮೂಢನಂಬಿಕೆ, ಕಂದಾಚಾರ, ಜಾತೀಯತೆಯನ್ನು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ವಿರೋಧಿಸಿದ್ದರು ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಎಸ್.ಮಾದಯ್ಯ...

ವಿಚಾರಧಾರೆಗಳು ಇಂದಿಗೂ ಪ್ರಸ್ತುತ

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಶುಕ್ರವಾರ ನಗರದಲ್ಲಿ ಸರಳ ಹಾಗೂ...

ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ತರ ಸುಧಾರಣೆಯ ಹೆಜ್ಜೆಗುರುತುಗಳನ್ನು ಮೂಡಿಸುತ್ತ ನೈತಿಕ, ಸಾತ್ವಿಕ ಬಾಳ್ವೆಗೆ ಅಸಂಖ್ಯ ಜನರನ್ನು ಪ್ರೇರೇಪಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಇಂದು, ಭಾನುವಾರ 70ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಧರ್ವಧಿಕಾರಿಯಾಗಿ 50 ವರ್ಷ ಪೂರೈಸಿರುವ ಅವರ ಕಾರ್ಯ, ವ್ಯಕ್ತಿತ್ವವನ್ನು ಸಮೀಪದಿಂದ ನೋಡಿರುವ ನಾಡಿನ ಮೂವರು ಗಣ್ಯರು ಅವರೊಂದಿಗಿನ ಒಡನಾಟದ ಸಿಹಿಬುತ್ತಿಯನ್ನು ಇಲ್ಲಿ ತೆರೆದಿಟ್ಟಿದ್ದಾರೆ.

 

ಅಪೂರ್ವ ಸುಧಾರಕ

| ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ವೀರೇಂದ್ರ ಹೆಗ್ಗಡೆಯವರು ತಮ್ಮ ತಂದೆ ಅನಾರೋಗ್ಯಪೀಡಿತರಾಗಿದ್ದ ಸಂದರ್ಭ ಮಂತ್ರಾಕ್ಷತೆ ಪಡೆಯಲು ನಮ್ಮನ್ನು ಮೊದಲ ಬಾರಿ ಭೇಟಿ ಮಾಡಿದ್ದರು. ಬಳಿಕ ಧರ್ಮಸ್ಥಳ ಧರ್ವಧಿಕಾರಿಯಾದ ದಿನದಿಂದ ಇವತ್ತಿನವರೆಗೆ ನಮ್ಮ ಮಧ್ಯೆ ಸಂಪರ್ಕ ಇದೆ. ಅವರ ಬೆಳವಣಿಗೆಗೆ ನಾವು ಪ್ರತ್ಯಕ್ಷ ಸಾಕ್ಷಿಯಾಗಿದ್ದೇವೆ. ಹಿಂದಿನ ದಶಕಗಳಲ್ಲಿ ಹೆಗ್ಗಡೆ ಮತ್ತು ನಾವು ಜತೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂಬುದು ಜನರ ಅಪೇಕ್ಷೆಯಾಗಿತ್ತು. ಹೀಗಾಗಿ ನೂರಾರು ಕಾರ್ಯಕ್ರಮಗಳಲ್ಲಿ ನಾವು ಜತೆಗೆ ವೇದಿಕೆ ಹಂಚಿಕೊಂಡಿದ್ದೇವೆ. ಉದ್ಯಾವರ ಆಯುರ್ವೆದ ಕಾಲೇಜು ಮುಚ್ಚುವ ಹಂತದಲ್ಲಿದ್ದಾಗ ಹೆಗ್ಗಡೆಯವರಿಗೆ ಇದರ ಜವಾಬ್ದಾರಿ ವಹಿಸಿಕೊಳ್ಳುವಂತೆ ನಾನೇ ಕೋರಿದ್ದೆ. ಅದಕ್ಕವರು ಒಪ್ಪಿದ ಕಾರಣ ಉಡುಪಿಯಲ್ಲಿ ಉತ್ತಮ ಆಯುರ್ವೆದ ಆಸ್ಪತ್ರೆ ಇರುವಂತಾಯಿತು.

ಧಾರವಾಡದಲ್ಲಿ ಶಿಕ್ಷಣ ಸಂಸ್ಥೆ: ಇನ್ನೊಂದು ಮಹತ್ವದ ಘಟನೆ ಧಾರವಾಡದಲ್ಲಿ ಜೆಎಸ್​ಎಸ್ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಲು ಕಾರಣರಾಗಿದ್ದು. ಜನತಾ ಶಿಕ್ಷಣ ಸಮಿತಿ ವತಿಯಿಂದ ನಡೆಯುತ್ತಿದ್ದ ಕಾಲೇಜು ಹೀನಾವಸ್ಥೆಯಲ್ಲಿತ್ತು. ಸರ್ಕಾರದ ಯಾವ ಅನುದಾನಗಳೂ ದೊರೆಯುತ್ತಿರಲಿಲ್ಲ. ಪ್ರತಿ ತಿಂಗಳು 14 ಲಕ್ಷ ರೂ. ಖರ್ಚುವೆಚ್ಚಕ್ಕೆ ಬೇಕಾಗಿತ್ತು. ಇಂಥ ಸಂದರ್ಭ ಬೇರೆ ದಾರಿ ಕಾಣದೆ ಹೆಗ್ಗಡೆಯವರಿಗೆ ಶಿಕ್ಷಣ ಸಂಸ್ಥೆ ಮುನ್ನಡೆಸಲು ಕೋರಿದಾಗ ಅದಕ್ಕೂ ಅವರು ಸಮ್ಮತಿಸಿದ್ದು, ಮಹತ್ವದ ಮೈಲಿಗಲ್ಲು. ಹೀಗೆ ಉಜಿರೆ, ಧರ್ಮಸ್ಥಳಕ್ಕೆ ಸೀಮಿತವಾಗಿದ್ದ ಅವರ ಶಿಕ್ಷಣ ಸಂಸ್ಥೆಗಳು ಉಡುಪಿ ಮತ್ತು ಧಾರವಾಡಕ್ಕೂ ಕಾಲಿಡುವಂತಾಯಿತು. ಜೆಎಸ್​ಎಸ್ ಅಡಿಯಲ್ಲಿ ಪದವಿ ಕಾಲೇಜು, ಹೈಸ್ಕೂಲ್, ಪಾಲಿಟೆಕ್ನಿಕ್ ಕಾರ್ಯನಿರ್ವಹಿಸುತ್ತಿವೆ. ಬಳಿಕ ಅವರು ಎಸ್​ಡಿಎಂ ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕಾಲೇಜು ಪ್ರಾರಂಭಿಸಿ ಶಿಕ್ಷಣ ಸಂಸ್ಥೆಗಳನ್ನು ಉತ್ತಮವಾಗಿ ನಿರ್ವಹಿಸಿ, ಕಾಂತ್ರಿಯನ್ನೇ ಮಾಡಿದ್ದಾರೆ.

ಧರ್ಮಸ್ಥಳ ಮತ್ತು ಉಡುಪಿ ನಂಟು: ಹೆಗ್ಗಡೆಯವರು ಮತ್ತು ನಾವು ಜತೆಯಾಗಿ ಸೇರಿ ಮಠಾಧಿಪತಿಗಳ ಸಂಘಟನೆಯನ್ನು ಹುಟ್ಟುಹಾಕಿದ್ದೇವೆ. ಉಡುಪಿಯಲ್ಲಿ ನಡೆದ ಐತಿಹಾಸಿಕ ಧರ್ಮಸಂಸತ್​ನಲ್ಲಿ ಅವರು ಹೆಚ್ಚಿನ ಸಹಕಾರ ನೀಡಿದರು. ಉಜಿರೆಯಲ್ಲೂ ಧರ್ಮಸಂಸತ್ ನಡೆಸಿದರು. ನಮ್ಮ ಪರ್ಯಾಯ ಸ್ವಾಗತ ಸಮಿತಿಗೆ ಅವರು ಅನೇಕ ಬಾರಿ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಜತೆಗೆ ಇತರ ಮಠಾಧಿಪತಿಗಳ 2-3 ಪರ್ಯಾಯ ಸ್ವಾಗತ ಸಮಿತಿಗೂ ಗೌರವಾಧ್ಯಕ್ಷರಾಗಿದ್ದರು. ಹೀಗೆ ಉಡುಪಿ ಮತ್ತು ಧರ್ಮಸ್ಥಳ ಕ್ಷೇತ್ರದ ನಡುವೆ ಉತ್ತಮ ನಂಟು ಬೆಳೆಯಲು ಅವರು ಕಾರಣವಾಗಿದ್ದಾರೆ.


ಗ್ರಾಮೀಣಾಭಿವೃದ್ಧಿಯಲ್ಲಿ ಹೊಸ ಕ್ರಾಂತಿ

| ಡಾ.ಬಿ.ಎಂ.ಹೆಗ್ಡೆ, ಹಿರಿಯ ವೈದ್ಯರು

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಾಧನೆಗೆ ಅವರ ತಾಯಿಯೇ ಮೂಲ ಪ್ರೇರಣೆ. ಸಣ್ಣ ವಯಸ್ಸಿನಲ್ಲಿ ಧರ್ಮಸ್ಥಳದಂಥ ಕ್ಷೇತ್ರದ ಧರ್ವಧಿಕಾರಿಯಾದಾಗ ತಾಯಿಯೇ ಅವರ ಕೈಹಿಡಿದು ಮುನ್ನಡೆಸಿದ್ದರು ಎಂದರೆ ತಪ್ಪಾಗದು. ತಾಯಿ ಹಾಕಿಕೊಟ್ಟ ದಾರಿಯಲ್ಲೇ ಸರಿಯಾದ ರೀತಿಯಲ್ಲಿ ಅವರು ನಡೆದು ಬಂದಿದ್ದಾರೆ. ಆಯ್ಕೆ ಮಾಡಿಕೊಂಡ ಕ್ಷೇತ್ರಗಳಲ್ಲೆಲ್ಲ ಅವರು ಉತ್ತಮ ಸಾಧನೆಯನ್ನೇ ಮಾಡಿದ್ದಾರೆ.

ಸಮಾಜಸೇವೆ, ದೇವರಸೇವೆ, ವಿದ್ಯಾಕ್ಷೇತ್ರದಲ್ಲಿ ಹೆಗ್ಗಡೆಯವರು ಮುಖ್ಯವಾಗಿ ತಮ್ಮ ಛಾಪು ಮೂಡಿಸಿದ್ದಾರೆ. ದೇವಸ್ಥಾನ ಆಡಳಿತ ಅವರ ಕೈಗೆ ಸಿಕ್ಕಾಗ ಪ್ರಧಾನವಾಗಿ ಹಣಕಾಸು ನಿರ್ವಹಣೆ ಜವಾಬ್ದಾರಿ ಇತ್ತು. ದೇವಸ್ಥಾನಕ್ಕೆ ಬರುವ ಹಣವನ್ನೇ ಉಪಯೋಗಿಸಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು. ಸಮಾಜದಿಂದ ಸಿಕ್ಕ ಹಣವನ್ನು ಸಮಾಜದ ಒಳಿತಿಗಾಗಿಯೇ ಉಪಯೋಗಿಸುವ ಈ ಕಾರ್ಯ ನಿಜವಾದ ಮಾನವಧರ್ಮ. ಈ ಮೂಲಕ ದೇವಳದ ಹಣವನ್ನು ವೃದ್ಧಿಸುವ ಜತೆಯಲ್ಲಿ ದೇವಳವನ್ನೂ ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ದೇವಳಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ದೇವಸ್ಥಾನವೂ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಇದಕ್ಕೆಲ್ಲ ಕಾರಣ ಅವರ ನೈಪುಣ್ಯ. ಧರ್ಮಸ್ಥಳದ ಒಂದು ವಿಶೇಷವೆಂದರೆ, ಮುಖ್ಯ ದೇವರು ಶಿವ, ಪೂಜೆ ಮಾಡುವವರು ವೈಷ್ಣವ ಬ್ರಾಹ್ಮಣರು, ಧರ್ಮಾಧಿಕಾರಿ ಜೈನರು.

ಹೆಗ್ಗಡೆಯವರು ವಿದ್ಯಾಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯ ಮಾಡಿದ್ದಾರೆ. ಶಾಲೆಯಿಂದ ಆರಂಭವಾಗಿ ವೈದ್ಯಕೀಯ ಕಾಲೇಜು, ಸ್ನಾತಕೋತ್ತರ ಕೇಂದ್ರಗಳವರೆಗೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಕಾರ್ಯನಿರ್ವಹಿಸುತ್ತಿವೆ. ವಿದ್ಯಾಸಂಸ್ಥೆಗಳಿಗೆ ಬೇರೆ ಬೇರೆ ಮುಖ್ಯಾಧಿಕಾರಿಗಳು ಇದ್ದರೂ ಆಡಳಿತದ ಪ್ರತಿ ವಿಚಾರವನ್ನೂ ಅವರೇ ಖುದ್ದು ಗಮನಿಸುತ್ತಾರೆ. ಹಾಗಾಗಿ ವಿದ್ಯಾಸಂಸ್ಥೆಗಳು ಹೆಚ್ಚು ಪ್ರಸಿದ್ಧವಾಗಿವೆ. ಅವರು ವಿದ್ಯೆಯನ್ನು ಮಾರುತ್ತಿಲ್ಲ, ಸಂಸ್ಥೆಗಳ ನಿರ್ವಹಣೆಗೆ ಅಗತ್ಯ ಹಣವನ್ನಷ್ಟೆ ಪಡೆಯುತ್ತಿದ್ದಾರೆ. ಎಷ್ಟೋ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ.

ಇಷ್ಟೆಲ್ಲ ಕೆಲಸ ಮಾಡಿದರೂ ಅವರು ಯಾವ ಕೆಲಸವನ್ನೂ ತಾನೇ ಮಾಡಿದ್ದು ಎಂದು ಎಲ್ಲೂ ತೋರಿಸಿಕೊಂಡಿಲ್ಲ. ಜನರಿಂದ, ದೇವಸ್ಥಾನದ ಹಣದಿಂದ, ದೇವರಿಂದ ಸಾಧ್ಯವಾಗಿದೆ ಎನ್ನುತ್ತಾರೆ. ಅದಕ್ಕಾಗಿಯೇ ಅವರಿಗೆ ‘ಮಾತನಾಡುವ ಮಂಜುನಾಥ’ ಎನ್ನುವ ಹೆಸರಿದೆ. ಹಾಗಾಗಿ ಜನರು ತಮ್ಮ ಕಷ್ಟಗಳನ್ನು ಅವರ ಬಳಿ ತೋಡಿಕೊಳ್ಳುತ್ತಾರೆ. ಕಷ್ಟಗಳಿಗೆ ಹೆಗ್ಗಡೆ ನೀಡುವ ಉಪಶಮನ ಕೆಲಸ ಮಾಡುತ್ತದೆ.

ಸ್ವಾವಲಂಬನೆ ಹಾದಿ

ಸ್ವಸಹಾಯ ಸಂಘ ಹೆಗ್ಗಡೆಯವರ ಸ್ವಂತ ಪರಿಕಲ್ಪನೆ. ಬೇರೆಯವರನ್ನು ನೋಡಿ ಅನುಕರಣೆ ಮಾಡಿದ್ದಲ್ಲ. ಜಪಾನಿನಲ್ಲಿ ಒಂದು ಗಾದೆ ಇದೆ, ‘ಒಬ್ಬನಿಗೆ ಮೀನು ಕೊಟ್ಟರೆ ಒಂದು ದಿನ ತಿನ್ನಲು ಸಾಧ್ಯ. ಅದೇ ಮೀನು ಹಿಡಿಯಲು ಕಲಿಸಿದರೆ ಜೀವಮಾನವೆಲ್ಲ ತಿನ್ನುತ್ತಾನೆ’. ಇದಕ್ಕೆ ಸ್ವಸಹಾಯ ಸಂಘ ಒಂದು ಉದಾಹರಣೆ. ಮಹಿಳೆಯರು ಜವಾಬ್ದಾರಿಯುತವಾಗಿ ಮುನ್ನಡೆಯಬೇಕು ಎಂಬ ಉದ್ದೇಶದಿಂದ ಎಲ್ಲರನ್ನೂ ಒಟ್ಟು ಮಾಡಿ, ಒಬ್ಬರಿಗೊಬ್ಬರು ಸಹಾಯ ಮಾಡಬೇಕೆಂದು ಗುಂಪುಗಳನ್ನು ರಚಿಸಿದರು. ಈ ಸ್ವಸಹಾಯ ಸಂಘಗಳು ಇಂದು ಸಮಾಜವನ್ನೇ ಬದಲಾಯಿಸುವ ಕೆಲಸ ಮಾಡಿವೆ. ಇದು ಸರ್ಕಾರದ ಗಮನವನ್ನೂ ಸೆಳೆದಿದ್ದು, ಈ ಪರಿಕಲ್ಪನೆಗೆ ಕೇಂದ್ರ ಸರ್ಕಾರವೂ ಮೆಚ್ಚುಗೆ ವ್ಯಕ್ತಪಡಿಸಿದೆ. ಗ್ರಾಮೀಣಾಭಿವೃದ್ಧಿಯಲ್ಲಿಯೂ ಗಮನಾರ್ಹ ಸಾಧನೆ ಮಾಡಿರುವ ಹೆಗ್ಗಡೆಯವರು, ಈ ವಿಚಾರವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿನ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಮಾಡಿಸಿರುವುದು ಅವರ ಇನ್ನೊಂದು ಸಾಧನೆ.


ಅವಿನಾಭಾವ ಸಂಬಂಧ

ಜೈನಕಾಶಿ ಶ್ರವಣಬೆಳಗೊಳದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನಡುವೆ ದಶಕಗಳಿಂದ ಅವಿನಾಭಾವ ಸಂಬಂಧವಿದೆ.

ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜೈನ ಮಠದ ಪೀಠಾಧಿಪತಿಯಾಗಿ ನೇಮಕಗೊಂಡ ವರ್ಷವೇ ಅತ್ತ ಧರ್ಮಸ್ಥಳ ಕ್ಷೇತ್ರದ ಧರ್ವಧಿಕಾರಿಯಾಗಿ ವೀರೇಂದ್ರ ಹೆಗ್ಗಡೆ ನೇಮಕವಾಗಿದ್ದರು. ಇಬ್ಬರೂ ಕೇವಲ 6 ತಿಂಗಳ ಅಂತರದಲ್ಲಿ ತಮ್ಮ ಕ್ಷೇತ್ರಗಳ ಜವಾಬ್ದಾರಿ ವಹಿಸಿಕೊಂಡ ಸುವರ್ಣ ವರ್ಷದ ಮೈಲಿಗಲ್ಲು ದಾಟಿರುವುದು ವಿಶೇಷ. ಜೈನಕ್ಷೇತ್ರದ ಎಲ್ಲ ಧಾರ್ವಿುಕ ವಿಷಯಗಳಲ್ಲಿಯೂ ಇಬ್ಬರೂ ರ್ಚಚಿಸಿ, ಒಮ್ಮತದ ತೀರ್ಮಾನ ಕೈಗೊಳ್ಳುವ ಮಟ್ಟಿನ ವಿಶ್ವಾಸ, ಪರಸ್ಪರ ಗೌರವ ಹಿಂದಿನಿಂದಲೂ ಬೆಳೆದು ಬಂದಿದೆ.

ಮಸ್ತಕಾಭಿಷೇಕದ ಪರಮ ಸಂರಕ್ಷಕ: ಈಚೆಗೆ ಸಂಪನ್ನಗೊಂಡ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ವೀರೇಂದ್ರ ಹೆಗ್ಗಡೆ ಹಿಂದಿನ ನಾಲ್ಕು ಮಹಾಮಸ್ತಕಾಭಿಷೇಕಗಳ ಮಾದರಿಯಲ್ಲಿಯೇ ಸಕ್ರಿಯವಾಗಿ ಪಾಲ್ಗೊಂಡರು. ಮಹೋತ್ಸವ ಸಂಪನ್ನಗೊಳ್ಳುವವರೆಗೂ ಮಹೋತ್ಸವದ ಪರಮ ಸಂರಕ್ಷಕರಾಗಿ ಉತ್ಸಾಹದಿಂದ ಭಾಗವಹಿಸಿದರು.

ಶ್ರವಣಬೆಳಗೊಳ ಕ್ಷೇತ್ರದೊಂದಿಗೆ ತಮಗಿರುವ ಆತ್ಮೀಯ ಭಾವವನ್ನು ವೇದಿಕೆಗಳಲ್ಲಿನ ಭಾಷಣಗಳ ಮೂಲಕ ಅವರು ಪ್ರಕಟಪಡಿಸುತ್ತಲೇ ಇರುತ್ತಾರೆ. ತಮ್ಮ ಕ್ಷೇತ್ರದಿಂದ ಶ್ರವಣಬೆಳಗೊಳಕ್ಕೆ ಏನಾದರೂ ಶಾಶ್ವತ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ ನಿರ್ವಿುಸಿಕೊಟ್ಟಿದ್ದಾರೆ. ಈ ಮೂಲಕ ಈ ಭಾಗದ ಜನರು ವಿವಾಹ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲ ಕಲ್ಪಿಸಿದ್ದಾರೆ. ಶ್ರವಣಬೆಳಗೊಳ ಜೈನಮಠದಲ್ಲಿ ಯಾವುದೇ ಧಾರ್ವಿುಕ ಕಾರ್ಯಕ್ರಮವಿದ್ದರೂ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೊದಲು ವೀರೇಂದ್ರ ಹೆಗ್ಗಡೆಯವರನ್ನು ನೆನಪಿಸಿಕೊಂಡು ಅವ ರ ಸಹಕಾರ ಬಯಸುತ್ತಾರೆ. ಶ್ರೀಗಳ ಆಹ್ವಾನವನ್ನು ಎಂದಿಗೂ ತಪ್ಪಿಸಿಕೊಳ್ಳದ ಹೆಗ್ಗಡೆಯವರು ಕಾರ್ಯದೊತ್ತಡದ ನಡುವೆಯೂ ಕ್ಷೇತ್ರಕ್ಕೆ ಬಂದು ಎಲ್ಲವನ್ನೂ ನಿಭಾಯಿಸುತ್ತಾರೆ.

‘ಪರಸ್ಪರೋಪಗ್ರಹೋ ಜೀವನಾಂ’ ಎಂಬ ತತ್ತ್ವದಂತೆ ಶ್ರೀಕ್ಷೇತ್ರ ಶ್ರವಣಬೆಳಗೊಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜರುಗುವ ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಜನಪರ ಯೋಜನೆಗಳು ಉಭಯತ್ರಯರ ಸಲಹೆ, ಸಹಕಾರ, ಮಾರ್ಗದರ್ಶನದಲ್ಲಿ ಸಾಕಾರಗೊಳ್ಳುತ್ತಿವೆ. ಈ ಎರಡೂ ಧಾರ್ವಿುಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಹೆಗ್ಗಡೆಯವರ ಪಾತ್ರ ಬಹುಮುಖ್ಯವಾದುದು.

| ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀ ಕ್ಷೇತ್ರ ಶ್ರವಣಬೆಳಗೊಳ

- Advertisement -

Stay connected

278,478FansLike
564FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...