ಆಧ್ಯಾತ್ಮಿಕ ಜ್ಞಾನ ಅಲಿಸಿ ಜೀವನ ಸುಧಾರಿಸಿಕೊಳ್ಳಿ

ಭಾಲ್ಕಿ: ವಚನಗಳ ದರ್ಶನ ಪ್ರವಚನ ಮಾಡಲು ಆಗಮಿಸಿರುವ ಪೂಜ್ಯ ಡಾ.ಈಶ್ವರಾನಂದ ಸ್ವಾಮೀಜಿ ಅವರ ಆಧ್ಯಾತ್ಮಿಕ ಜ್ಞಾನದ ಸಾರವನ್ನುಸರ್ವ ಭಕ್ತರು ಪಡೆದು ಜೀವನ ಸುಧಾರಿಸಿಕೊಳ್ಳಬೇಕು ಎಂದು ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ತಿಳಿಸಿದರು.

ಪಟ್ಟಣದ ಚನ್ನಬಸವ ಆಶ್ರಮದಲ್ಲಿ ಆಯೋಜಿಸಿದ್ದ ಡಾ.ಚನ್ನಬಸವ ಪಟ್ಟದ್ದೇವರ 20ನೇ ಸ್ಮರಣೋತ್ಸವ ಮತ್ತು ವಚನ ಜಾತ್ರೆ 2019ರ ನಿಮಿತ್ತ 20 ರವರೆಗೆ ಜರುಗಲಿರುವ ವಚನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.

ಸಸ್ತಾಪುರಿನ ಶಿವಲಿಂಗೇಶ್ವರ ಮಠದ ಪ್ರವಚನಕಾರ ಡಾ.ಈಶ್ವರಾನಂದ ಸ್ವಾಮೀಜಿ ಮಾತನಾಡಿ, ಎಲ್ಲ ಸಂಪತ್ತುಗಳ ಗಳಿಕೆಗಿಂತ ಅಧ್ಯಾತ್ಮ ಸಂಪತ್ತಿನ ಗಳಿಕೆಯೇ ನಿಜವಾದ ಸಂಪತ್ತಾಗಿದೆ ಎಂದು ತಿಳಿಸಿದರು.
ಜಯದೇವ ಸ್ವಾಮೀಜಿ, ಶಿವಪ್ರಸಾದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಅರ್ಬನ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ವಂಕೆ, ಬಸವಗುರು ಪೂಜೆ ನೆರವೇರಿಸಿದರು.

ಪ್ರಮುಖರಾದ ಜೀವನ ಪೆದ್ದೆ, ಬಸವಾ ವಂಕೆ, ಜೈರಾಜ ಪಾತ್ರೆ, ಶಿವಕುಮಾರ ಕಲ್ಯಾಣೆ, ಶಿವಶರಣಯ್ಯ ಸ್ವಾಮಿ, ಸಾವಿತ್ರಿ ಪಾಟೀಲ್, ಪಾರ್ವತಿ ಧುಮ್ಮನಸೂರೆ ಭಾಗವಹಿಸಿದ್ದರು. ರಾಜು ಜುಬರೆ, ಸೂರ್ಯಕಾಂತ ಚಿಮಕೂಡ, ಸಂಕೇತ ಅವರಿಂದ ಭಕ್ತಿ ಸಂಗೀತ ನಡೆಯಿತು. ವೀರಣ್ಣ ಕುಂಬಾರ ನಿರೂಪಣೆ ಮಾಡಿದರು.