ಬೆಂಗಳೂರು : ಇಸ್ಲಾಮಿಕ್ ಸ್ಟೇಟ್ ಆ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಶಂಕಿತ ನೇತ್ರಾ ವೈದ್ಯ ಡಾ. ಅಬ್ದುರ್ ರೆಹಮಾನ್ ಅಲಿಯಾಸ್ ಡಾ.ಬ್ರೇವ್ (28) ವಿರುದ್ಧ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದೆ.
2020ರ ಆ.17ರಂದು ಎನ್‌ಐಎ ಅಧಿಕಾರಿಗಳು ಬೆಂಗಳೂರು ಪೊಲೀಸರ ಸಹಾಯದಿಂದ ಬಸವನಗುಡಿಯಲ್ಲಿ ಡಾ. ಅಬ್ದುರ್ ರೆಹಮಾನ್‌ನನ್ನು ಬಂಧಿಸಿದ್ದರು. ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ (ಐಎಸ್‌ಕೆಪಿ) ಜತೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೆಹಲಿ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ್ದಾರೆ.
ಐಎಸ್‌ಕೆಪಿ ಉಗ್ರ ಸಂಘಟನೆ ಬಲವರ್ಧನೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮಾರ್ಚ್ 8ನಲ್ಲಿ ದೆಹಲಿ ಜಾಮಿಯಾನಗರದಲ್ಲಿ ಕಾಶ್ಮೀರ ಮೂಲದ ಜಹಾನೇಬ್ ಸಮಿ ಮತ್ತು ಆತನ ಪತ್ನಿ ಹಿನಾ ಬಶೀರ್ ಬೇಗ್ ದಂಪತಿಯನ್ನು ಬಂಧಿಸಿದ್ದರು. ಇವರು ಕೊಟ್ಟ ಮಾಹಿತಿ ಮೇರೆಗೆ ಪುಣೆಯಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿನಿ ಸಾದಿಯಾ ಅನ್ವರ್ ಶೇಖ್ ಮತ್ತು ನಬೀಲ್ ಸಿದ್ದಿಕ್ ಖತ್ರಿ ಎಂಬಾತನನ್ನು ಬಂಧಿಸಿದ್ದರು. ಇವರ ವಿರುದ್ಧ ಈಗಾಗಲೇ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ.
ಐಸಿಸ್‌ನೊಂದಿಗೆ ನಂಟು ಹೊಂದಿದ್ದ ಐಎಸ್‌ಕೆಪಿ ಜತೆಗೆ ಶಂಕಿತ ಆರೋಪಿಗಳು ಕೈ ಜೋಡಿಸಿದ್ದರು. ಶಂಕಿತ ವಿಚಾರಣೆ ವೇಳೆ ಸಿಕ್ಕ ಮಾಹಿತಿ ಮೇರೆಗೆ ಡಾ.ಬ್ರೇವ್‌ನನ್ನು ಬಂಧಿಸಲಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ದಂತ ವೈದ್ಯಕೀಯ ಪದವಿ ಮುಗಿಸಿದ್ದ ಡಾ. ಅಬ್ದುರ್ ರೆಹಮಾನ್, ಜಾಲತಾಣಗಳಲ್ಲಿ ಪಾಕ್ ಉಗ್ರರ ಉಪನ್ಯಾಸಗಳನ್ನು ಕೇಳಿ ಸ್ಥಳೀಯ ಯುವಕರಿಗೆ ಉಗ್ರವಾದ ಬೋಧನೆ ಮಾಡುತ್ತಿದ್ದ. 2013ರಲ್ಲಿ ಸಿರಿಯಾ ದೇಶಕ್ಕೆ ಹೋಗಿ ಉಗ್ರರ ಕ್ಯಾಂಪ್‌ನಲ್ಲಿ 10 ದಿನ ಉಳಿದುಕೊಂಡು ಭಯೋತ್ಪಾದಕ ಚಟುವಟಿಕೆಗಳಲ್ಲಿ ಗಾಯಗೊಂಡಿದ್ದ ಉಗ್ರರರಿಗೆ ಚಿಕಿತ್ಸೆ ನೀಡಿ ವಾಪಸ್ ಬೆಂಗಳೂರಿಗೆ ಬಂದಿದ್ದ.
ಆನಂತರ ಐಸಿಸ್ ಉಗ್ರರಿಗೆ ಮೆಡಿಕಲ್ ಮತ್ತು ಮಿಲಿಟರಿ ಉದ್ದೇಶಗಳಿಗೆ ಅಪ್ಲಿಕೇಷನ್ ಅಭಿವೃದ್ಧಿ ಪಡಿಸುತ್ತಿದ್ದ. ಲೇಸರ್ ಗೈಡೆಡ್ ಆ್ಯಂಟಿ ಟ್ಯಾಂಕ್ ಮಿಸೈಲ್ ಅಪ್ಲಿಕೇಷನ್ ಸಿದ್ದಪಡಿಸುತ್ತಿದ್ದ. ಸಿರಿಯಾ ದೇಶಕ್ಕೆ ಸ್ಥಳೀಯ ಯುವಕರನ್ನು ಕಳುಹಿಸಿ ಉಗ್ರ ತರಬೇತಿ ಕೊಡಿಸುತ್ತಿದ್ದ. ಇದಕ್ಕಾಗಿ ಕುರಾನ್ ಸರ್ಕಲ್ ಸಂಘಟನೆ ಸ್ಥಾಪಿಸಿ ದೇಣಿಗೆ ಸಂಗ್ರಹಿಸುತ್ತಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಎಂಗೇಜ್ಮೆಂಟ್ ಆದ್ಮೇಲೆ ಸೆಕ್ಸ್ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ