ಅನೈತಿಕ ಸಂಬಂಧ ಶಂಕೆ: ಕೊಳ್ಳೇಗಾಲದಲ್ಲಿ ಡಬಲ್​ ಮರ್ಡರ್​

ಚಾಮರಾಜನಗರ: ಕೊಳ್ಳೇಗಾಲದ ದೊಡ್ಡಿಂದವಾಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ಎರಡು ಕೊಲೆ ನಡೆದಿದೆ. ಪುಟ್ಟಸ್ವಾಮಿ(24), ಮಹೇಶ್ವರಿ(32) ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.