ದೋಸ್ತಿ ಪಕ್ಕಿ ಹೋಗಯಿ!

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಮೈತ್ರಿ ಏರ್ಪಡುವುದೋ, ಇಲ್ಲವೋ ಈ ಕುರಿತು ಬರೀ ಚರ್ಚೆ ಅಲ್ಲ ಬೆಟ್ಟಿಂಗೇ ಏರ್ಪಟ್ಟಿತ್ತು. ವಿಶೇಷವೆಂದರೆ, ಮೈತ್ರಿ ಏರ್ಪಡಲಿದೆ ಎಂಬುದರ ಪರವಾಗಿಯೇ ಹೆಚ್ಚು ಜನ ಬೆಟ್ಟಿಂಗ್ ಕಟ್ಟಿದ್ದರು! ಫೆ.18ರಂದು ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ಅಂತಿಮವಾಗಿ, ಅಮಿತ್ ಷಾ ಮತ್ತು ಉದ್ಧವ್ ಠಾಕ್ರೆ ಅದನ್ನು ಅಧಿಕೃತವಾಗಿ ಘೋಷಿಸಿದ ಬಳಿಕ ಈ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ. ‘‘ಶಿವಸೇನೆ ಇನ್ನೂ ನಾಟಕ ಮಾಡಿದ್ದರೆ ‘ದೋಸ್ತ್ ದೋಸ್ತ್ ನಾ ರಹಾ…’ ಎಂದು ಹಾಡಿಕೊಂಡು ವ್ಯಥೆ ಪಡಬೇಕಿತ್ತು’ ಎಂದೂ, ‘ದೋಸ್ತಿ ಪಕ್ಕಿ ಹೋಗಯಿ, ಅಬ್ ಖೇಲ್ ಶುರು ಹೋಗಾ’ (ಮೈತ್ರಿ ಪಕ್ಕಾ ಆಗಿದೆ, ಈಗ ಆಟ ಶುರುವಾಗುತ್ತೆ) ಎಂದು ಟ್ವೀಟ್​ಗಳು ಹರಿದಾಡಿವೆ. ಜತೆಗೆ, ರಾಜಕೀಯ ಸಮೀಕರಣ ಬದಲಾಗುವ ಕುರಿತಂತೆಯೂ ವಿಶ್ಲೇಷಣೆ, ಅಭಿಪ್ರಾಯಗಳು ಸದ್ದು ಮಾಡುತ್ತಿವೆ.