ಸರ್ಕಾರದ ವಿರುದ್ಧ ದೋಸ್ತಿ ಸಂಗ್ರಾಮ: ಮೈಸೂರು ಚಲೋಗೆ ರಣಕಹಳೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ದೋಸ್ತಿ ನಾಯಕರು ‘ಮೈಸೂರು ಚಲೋ’ ಪಾದಯಾತ್ರೆಯ ರಣಕಹಳೆ ಮೊಳಗಿಸಿದ್ದು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಶನಿವಾರ ಪಣತೊಟ್ಟರು. ಕೆಂಗೇರಿಯಲ್ಲಿ ಕೆಂಪಮ್ಮ, ಗಣಪತಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಮೀಪದ ಬಯಲು ವೇದಿಕೆಯಲ್ಲಿ ಉಭಯ ಪಕ್ಷಗಳ ನಾಯಕರು ಜಂಟಿಯಾಗಿ ನಗಾರಿ ಬಾರಿಸುವ ಮೂಲಕ ಏಳು ದಿನಗಳ ನಡಿಗೆ ಚಳವಳಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ನಾಯಕರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಪಾದಯಾತ್ರೆ ಗೀತೆಯ ವಿಡಿಯೊ ತುಣುಕಿಗೆ ಮಾಜಿ ಸಿಎಂಗಳಾದ ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವೇದಿಕೆ ಮೇಲೆ ಜತೆಯಾಗಿ ಕಹಳೆಯೂದಿ ಗಮನ ಸೆಳೆದರೆ, ನೆರೆದ ಕಾರ್ಯಕರ್ತರು ಹಷೋದ್ಗಾರ ಮಾಡಿದರು.

ಜನತಾ ನ್ಯಾಯಾಲಯದ ಬಳಿಗೆ ದೌಡು: ಜನತಾ ಜನಾರ್ದನರು ನಿಚ್ಚಳ ಬಹುಮತದೊಂದಿಗೆ ಕಾಂಗ್ರೆಸ್​ಗೆ ಅಧಿಕಾರ ಕೊಟ್ಟಿರುವುದನ್ನು ಒಪು್ಪತ್ತೇವೆ. ಅದೇ ಕಾಲಕ್ಕೆ ರಚನಾತ್ಮಕ ಪ್ರತಿಪಕ್ಷಗಳಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಬಿಜೆಪಿ, ಜೆಡಿಎಸ್​ಗೆ ಜನರು ನೀಡಿದ್ದಾರೆ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರವಾಗಿದೆ ಎಂದು ಸಿಎಂ ಸಿದ್ದರಾಮಯ್ಯನವರು ವಿಧಾನ ಮಂಡಲ ಅಧಿವೇಶನದಲ್ಲಿ ಒಪ್ಪಿಕೊಂಡರೂ, ಮುಡಾ ನಿವೇಶನ ಗಳ ಹಂಚಿಕೆ ಅಕ್ರಮದ ಚರ್ಚೆಗೂ ಅವಕಾಶ ಕೊಡದೆ ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಳಿಸಿದರು.

ಮುಡಾ ವಿಚಾರದಲ್ಲಿ ಸರ್ಕಾರ ಪಲಾಯನ ಮಾಡಿದ್ದೇಕೆ ಎಂದು ಜನತಾ ನ್ಯಾಯಾಲಯದ ಮುಂದೆಯೇ ಕೇಳುತ್ತಿದ್ದೇವೆ. ಕಾಂಗ್ರೆಸ್​ನ ಅವ್ಯವಹಾರಗಳಿಗೆ ರಾಜ್ಯದ ಜನರ ಹಿತ, ಅಭಿವೃದ್ಧಿ ಬಲಿಗೊಡಲು ಬಿಡುವುದಿಲ್ಲವೆಂದು ಉಭಯ ಪಕ್ಷಗಳ ನಾಯಕರು ಕಟ್ಟೆಚ್ಚರ ನೀಡಿದರು.

ಕಿಚ್ಚು ಹೆಚ್ಚಿಸಿದ ಮಾತು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಎಲ್ಲರೂ ಒಗ್ಗಟ್ಟಿನಿಂದ ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಹೋರಾಟದ ಕಿಚ್ಚು ಹಚ್ಚಿಸಿದರು. ಮಳೆ ಅಡ್ಡಿಯ ನಡುವೆಯೂ ಕಾರ್ಯಕರ್ತರು ಎದೆಗುಂದದೆ ಹೋರಾಟದಲ್ಲಿ ಭಾಗಿಯಾದರು. ಯಾತ್ರೆ ಬಿಡದಿವರೆಗೆ ಸಾಗುವವರೆಗೆ ರಸ್ತೆಯುದ್ದಕ್ಕೂ ವಾದ್ಯಗಳ ಸದ್ದು, ಯುವಕರ ಜೋಶ್, ಬಿಜೆಪಿ-ಜೆಡಿಎಸ್ ಪಕ್ಷಗಳ ಬಾವುಟ ಹಾರಾಟ, ಪುಷ್ಪವೃಷ್ಟಿ, ಗಜಗಾತ್ರದ ಮಾಲಾರ್ಪಣೆ, ಘೋಷಣೆಗಳ ಮೊರೆತ ಮೊಳಗಿತು.

ಯಾತ್ರೆ ಸಂದೇಶ

* ಹಗರಣಗಳ ವಿಚಾರದಲ್ಲಿ ಸರ್ಕಾರ ಪಲಾಯನ, ಹೀಗಾಗಿ ಬೀದಿಗೆ ಇಳಿದೆವು

* ಭ್ರಷ್ಟಾಚಾರ ಮುಕ್ತ ಆಡಳಿತ ನೀಡದ ಸರ್ಕಾರವನ್ನು ಪ್ರಶ್ನಿಸುವುದು ನಮ್ಮ ಹೊಣೆ

* ವ್ಯಕ್ತಿ ವಿರುದ್ಧವಲ, ಭ್ರಷ್ಟ ವ್ಯವಸ್ಥೆ ವಿರುದ್ಧದ ಹೋರಾಟ, ರ್ತಾಕ ಅಂತ್ಯವೇ ನಮ್ಮ ಉದ್ದೇಶ

* ವಿಜಯೇಂದ್ರ ಜತೆಗೂಡಿ ನಿಖಿಲ್ ಹೆಜ್ಜೆ ಹಾಕಬೇಕೆಂಬುದು ಕುಮಾರಸ್ವಾಮಿ ಬಯಕೆ

* ಒಕ್ಕಲಿಗರ ಹಿಡಿತದ ಪ್ರಾಂತ ದಲ್ಲಿ ಪುತ್ರನಿಗೆ ನಾಯಕತ್ವದ ಖದರ್ ನೀಡುವ ಹವಣಿಕೆ

ಬಿಜೆಪಿ-ಜೆಡಿಎಸ್ ಜಂಟಿ ‘ಮೈಸೂರು ಚಲೋ’ ಪಾದಯಾತ್ರೆ ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ಕಿತ್ತೊಗೆಯುವುದು ಮಾತ್ರವಲ್ಲ, ವಚನಭ್ರಷ್ಟ ಹಾಗೂ ಭ್ರಷ್ಟಾಚಾರ ನಿರತ ಕಾಂಗ್ರೆಸ್ ಸರ್ಕಾರವನ್ನೇ ಕಿತ್ತೊಗೆಯಲಿದೆ.

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.

ಬಿಜೆಪಿ ಮತ್ತು ಜೆಡಿಎಸ್​ನವರು ಪಾದಯಾತ್ರೆಯನ್ನು ಕಾನೂನುಬಾಹಿರವಾಗಿ ಮಾಡುವುದಿಲ್ಲ. ಶಾಂತಿಯುತವಾಗಿ ನಡೆಸುವುದಾಗಿ ಕೇಳಿಕೊಂಡಿದ್ದರಿಂದ ಸಿಎಂ ಜೊತೆ ರ್ಚಚಿಸಿ ಅವಕಾಶ ನೀಡಿದ್ದೇವೆ. ಜನರಿಗೆ ತೊಂದರೆಗಳಾಗದಂತೆ ನೋಡಿಕೊಳ್ಳುವಂತೆ ಷರತ್ತು ವಿಧಿಸಲಾಗಿದೆ.

-ಡಾ.ಜಿ.ಪರಮೇಶ್ವರ, ಗೃಹ ಸಚಿವ

ಭ್ರಷ್ಟಾಚಾರದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಗೌರವಯುತವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು. ಇಲ್ಲವಾದರೆ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ, ನಮ್ಮ ಪಾದಯಾತ್ರೆ ಮುಗಿಯುವ ಮೊದಲೇ ಅವರು ರಾಜೀನಾಮೆ ನೀಡುತ್ತಾರೆ.

| ಬಿ.ಎಸ್.ಯಡಿಯೂರಪ್ಪ , ಮಾಜಿ ಸಿಎಂ

ವಿಧಾನಸಭೆ ಅಧಿವೇಶನದಲ್ಲಿ ಮುಡಾ ಅಕ್ರಮದ ಬಗ್ಗೆ ರ್ಚಚಿಸದೆ ಕದ್ದು ಹೋದರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ದೇಸಾಯಿ ನೇತೃತ್ವದ ತನಿಖಾ ಆಯೋಗ ಹೆಸರಲ್ಲಿ ಅಕ್ರಮ ಮುಚ್ಚಿಹಾಕಲು ಹೊರಟಿದ್ದಾರೆ.

| ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ಬಿಜೆಪಿಯವರದ್ದು ಶೇ.40 ಪರ್ಸೆಂಟ್ ಭ್ರಷ್ಟಾಚಾರ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದರು. ಹಾಗಾಗಿ ಬಿಜೆಪಿಯ ಎಲ್ಲ ಹಗರಣಗಳನ್ನು ಬಯಲಿಗೆಳೆಯುತ್ತೇವೆ.

| ಸಿದ್ದರಾಮಯ್ಯ ಸಿಎಂ

ಡಿಸೆಂಬರ್ ವೇಳೆಗೆ ರಾಜ್ಯ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬರುತ್ತೇವೆಂದು ಹೊರಟಿದ್ದಾರೆ. ಈ ಸರ್ಕಾರ ಒಡೆದುಹೋಗಲು ಇದೇನು ಮಡಕೆಯೇ?, ನಮ್ಮ ಒಬ್ಬ ಶಾಸಕರನ್ನೂ ಅಲ್ಲಾಡಿಸಲು ಸಾಧ್ಯವಿಲ್ಲ.

| ಡಿ.ಕೆ.ಶಿವಕುಮಾರ್ ಡಿಸಿಎಂ

‘ಹರ್ ಘರ್ ತಿರಂಗ’ ಅಭಿಯಾನ: ರಾಷ್ಟ್ರಧ್ವಜದ ಜೊತೆ ಸೆಲ್ಫೀ ಕ್ಲಿಕ್ಕಿಸಿ ಅಪ್​ಲೋಡ್ ಮಾಡಲು ಅಮಿತ್ ಷಾ ಮನವಿ

Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…