ದೂಧ್​ಸಾಗರ್​ ಘಾಟ್​ನಲ್ಲಿ ಹಳಿ ಮೇಲೆ ಗುಡ್ಡ ಕುಸಿತ: ಕರ್ನಾಟಕ- ಗೋವಾ ರೈಲು ಸಂಚಾರ ರದ್ದು

ಧಾರವಾಡ: ಗೋವಾ ಗಡಿಯ ದೂಧ್​ಸಾಗರ್​ ಘಾಟ್​ ನಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಕರ್ನಾಟಕ-ಗೋವಾ ರೈಲು ಸಂಚಾರ ಸ್ಥಗಿತಗೊಂಡಿದೆ.

ಭಾರಿ ಮಳೆಯಿಂದ ಅವಘಡ ಸಂಭವಿಸಿದ್ದು, ಕ್ಯಾಸಲ್​ರಾಕ್​ ಹಾಗೂ ಕೊಲಮ್​ ರೈಲು ನಿಲ್ದಾಣಗಳ ಮಧ್ಯದ ಹಳಿ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಇದರಿಂದಾಗಿ ಗೋವಾ-ಕರ್ನಾಟಕ ಮಧ್ಯದ ಗೋವಾ ನಿಜಾಮುದ್ದೀನ್​ ಎಕ್ಸ್​ಪ್ರೆಸ್​ 12779 ಹಾಗೂ ಪೂರ್ಣಾ ಏರ್ನಾಕುಲಮ್​ 11098 ರೈಲುಗಳ ಸಂಚಾರ ರದ್ದುಗೊಂಡಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *