More

    ಇರಾನ್​ ಪ್ರತಿದಾಳಿಗೆ ಅಂಜಿದರಾ ಅಮೆರಿಕ ಅಧ್ಯಕ್ಷ​? ಯುಎಸ್​-ಇರಾನ್​ ನಡುವಿನ ಪ್ರಕ್ಷುಬ್ಧತೆ ತಗ್ಗಿಸಲು ಕರೆ ನೀಡಿದ ಡೊನಾಲ್ಡ್​ ಟ್ರಂಪ್​…!

    ವಾಷಿಂಗ್ಟನ್​: ಕಳೆದವಾರ ಅಮೆರಿಕ ಇರಾನ್​​ನ ಬಾಗ್ದಾದ್​ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಮೇಲೆ ವಾಯುದಾಳಿ ನಡೆಸಿ ರೆವೆಲ್ಯೂಷನರಿ ಗಾರ್ಡ್ಸ್​ ಪಡೆಯ ಮುಖ್ಯಸ್ಥ ಖಾಸಿಮ್​ ಸುಲೈಮಾನಿ ಅವರನ್ನು ಹತ್ಯೆ ಗೈದ ಬಳಿಕ ಪ್ರತೀಕಾರವಾಗಿ ನಿನ್ನೆ ಇರಾನ್​ ಕೂಡ ದಾಳಿ ಮಾಡಿತ್ತು.

    ಇರಾಕ್​ನಲ್ಲಿರುವ ಯುಎಸ್​ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು. ಸುಮಾರು 80 ಅಮರಿಕನ್​ ಉಗ್ರರು ಹತ್ಯೆಯಾಗಿದ್ದಾರೆ ಎಂದು ಇರಾನ್​ ಹೇಳಿದ್ದರೂ ಅದನ್ನು ಅಮರಿಕ ಅಲ್ಲಗಳೆದಿತ್ತು. ಒಬ್ಬೇಒಬ್ಬ ಅಮೆರಿಕನ್​ ಸೈನಿಕರೂ ಮೃತಪಟ್ಟಿಲ್ಲ ಎಂದು ಹೇಳಿತ್ತು.

    ಇಷ್ಟೆಲ್ಲ ಘಟನೆಯ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನೀಡಿದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
    ನಿನ್ನೆ ಸಂಜೆ ಮಾತನಾಡಿದ ಅವರು, ವಾಷಿಂಗ್ಟನ್​ ತನ್ನ ಸೇನೆಯನ್ನು ತೆಹ್ರಾನ್​ ವಿರುದ್ಧ ಬಳಸುವ ಇಂಗಿತ ಹೊಂದಿಲ್ಲ ಎಂದಿದ್ದಾರೆ.

    ಅಮೆರಿಕ ಸೇನೆ ಆಧುನಿಕವಾಗಿ ಎಷ್ಟು ಸುಧಾರಣೆ ಹೊಂದಿದೆ, ಏನೇನು ತಂತ್ರಜ್ಞಾನಗಳನ್ನು ಹೊಂದಿದೆ ಎಂಬುದರ ಬಗ್ಗೆ ಮಾತನಾಡಿದ ಟ್ರಂಪ್​, ಸದ್ಯ ಇರಾನ್​ ಮತ್ತು ಅಮೆರಿಕ ನಡುವೆ ಉಂಟಾದ ಪ್ರಕ್ಷುಬ್ಧತೆಯ ಪ್ರಮಾಣವನ್ನು ನಿಯಂತ್ರಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

    ಈಗಾಗಲೇ ಅಮರಿಕ ಸೈನ್ಯ ಇರಾನ್​ನ ಸೇನಾ ಮುಖ್ಯಸ್ಥನನ್ನು ಹತ್ಯೆ ಮಾಡಿದ ನಂತರ ಅಲ್ಲಿ ಉಂಟಾದ ಬಿಗುವಿನ ಪರಿಸ್ಥಿತಿ ಸರಿಮಾಡಬೇಕಿದೆ. ಹೀಗಿರುವಾಗ ಮತ್ತೆ ನಾವು ಸೇನೆಯನ್ನಾಗಲಿ, ಕ್ಷಿಪಣಿಗಳನ್ನಾಗಲೀ ಬಳಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ನಾವು ಅತ್ಯಾಧುನಿಕ ಮಿಲಿಟರಿ ಸಾಮಗ್ರಿಗಳನ್ನು ಹೊಂದಿದ್ದೇವೆ, ಬಲಶಾಲಿ ಸೈನ್ಯವನ್ನು ಹೊಂದಿದ್ದೇವೆ ಎಂದ ಮಾತ್ರಕ್ಕೆ ಅನಗತ್ಯವಾಗಿ ಬಳಸುತ್ತೇವೆ ಎಂದಲ್ಲ. ಆರ್ಥಿಕತೆ ಮತ್ತು ಸೈನ್ಯ ಇವೆರಡೂ ಅಮೆರಿಕದ ಶಕ್ತಿ ಎಂದು ಟ್ರಂಪ್​ ತಿಳಿಸಿದ್ದಾರೆ.

    ಇರಾನ್​ ಹಿಂಸಾಚಾರ, ದ್ವೇಷ ಮತ್ತು ಯುದ್ಧ ಪ್ರಚೋದಿತ ಚಟುವಟಿಕೆಗಳನ್ನು ನಡೆಸುವವರೆಗೂ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆಯಾಗುವುದಿಲ್ಲ. ಇರಾನ್​ನ ಉಗ್ರರಿಗೆ ಬೆಂಬಲ ನೀಡುತ್ತಿರುವುದನ್ನು  ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂಬಂತಹ ಸ್ಪಷ್ಟ ಸಂದೇಶವನ್ನು ಇಡೀ ವಿಶ್ವ ಒಗ್ಗಟ್ಟಾಗಿ ಆ ದೇಶಕ್ಕೆ ನೀಡಬೇಕು ಎಂದು ಟ್ರಂಪ್​ ಒತ್ತಾಯಿಸಿದ್ದಾರೆ.

    ಅಷ್ಟೇ ಅಲ್ಲದೆ, ಅಮೆರಿಕ ತೈಲಗಳಿಗಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ಅವಲಂಬಿತವಾಗಿಲ್ಲ. ನಾವು ತೈಲ ಹಾಗೂ ನೈಸರ್ಗಿಕ ಅನಿಲಗಳ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ನಂಬರ್​ 1 ಸ್ಥಾನದಲ್ಲಿ ಇದ್ದೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts