25.6 C
Bangalore
Thursday, December 12, 2019

ಪಂಜಾಬ್​ ಸಚಿವ ನವಜೋತ್‌ ಸಿಂಗ್‌ ಸಿಧು ಅರ್ಥವೇ ಆಗುವುದಿಲ್ಲವಂತೆ!

Latest News

ವಿದ್ಯುತ್ ತಗುಲಿ ಚಿರತೆ ಸಾವು

ಎಚ್.ಡಿ.ಕೋಟೆ: ತಾಲೂಕಿನ ಜಿಯಾರ ಗ್ರಾಮದ ಬಳಿ ಕಬಿನಿ ಹಿನ್ನೀರಿಗೆ ತೆರಳುವ ಮಾರ್ಗದಲ್ಲಿ ಗುರುವಾರ ಮುಂಜಾನೆ ವಿದ್ಯುತ್ ತಂತಿ ಸ್ಪರ್ಶಿಸಿ 5 ವರ್ಷದ ಹೆಣ್ಣು...

ಆಧುನಿಕ ಪ್ರಪಂಚದಲ್ಲೂ ಜನಪದ ಸಾಹಿತ್ಯಕ್ಕೆ ಮನ್ನಣೆ

ಹಿರಿಯ ಚಿಂತಕ ಹೊರೆಯಾಲ ದೊರೆಸ್ವಾಮಿ ಅಭಿಪ್ರಾಯ ಕೆ.ಆರ್.ನಗರ : ಬರವಣಿಗೆ ದೃಢವಾಗಿದ್ದರೆ ವಿಚಾರ ಚೈತನ್ಯಶೀಲವಾಗಿ ಹೊರ ಹೊಮ್ಮುತ್ತದೆ. ಪರಿಪಕ್ವ ವಿಚಾರಗಳ ಮುಖಾಂತರ ಸಮಾಜದ ತಾರತಮ್ಯ...

ಕರ್ಫ್ಯೂ ಉಲ್ಲಂಘಿಸಿ ರಸ್ತೆಗಿಳಿದ ಸಿಎಬಿ ಪ್ರತಿಭಟನಾಕಾರರ ಮೇಲೆ ಪೊಲೀಸ್​ ಫೈರಿಂಗ್​; ಮೂವರು ಸಾವು, ಹಲವರಿಗೆ ಗಾಯ

ಗುವಾಹಟಿ: ಪೌರತ್ವ ತಿದ್ದುಪಡಿ ಮಸೂದೆ ನಿನ್ನೆ ರಾಜ್ಯಸಭೆಯಲ್ಲಿ ಅಂಗೀಕಾರ ಆಗಿ ಶೀಘ್ರವೇ ಕಾಯ್ದೆಯಾಗಿ ರೂಪುಗೊಳ್ಳಲಿದೆ. ಆದರೆ ಈ ಸಿಎಬಿ ವಿರೋಧಿಸಿ ಈಶಾನ್ಯ ಭಾರತದಲ್ಲಿ ನಡೆಯುತ್ತಿರುವ ಕಾವು...

ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದವನಿಗೆ ಕೋರ್ಟ್​ ಆವರಣದಲ್ಲಿ ಧರ್ಮದೇಟು ನೀಡಲು ಮುಂದಾದ ಸಾರ್ವಜನಿಕರು

ಬೆಳಗಾವಿ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಇಂದು ಬಂಧಿತನಾಗಿರುವ ಆರೋಪಿ ಸುನೀಲ ಬಾಳು ಬಾಳನಾಯಿಕನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದಾಗ ಸಾರ್ವಜನಿಕರೇ ಆತನಿಗೆ...

ಶ್ರೀರಾಮಸೇನಾದಿಂದ ದತ್ತ ತಿಲಕ ಕಾರ್ಯಕ್ರಮ

ದಾವಣಗೆರೆ: ಶ್ರೀರಾಮಸೇನಾ ಜಿಲ್ಲಾ ಘಟಕದಿಂದ ನಗರದ ಜಯದೇವ ವೃತ್ತದಲ್ಲಿರುವ ದತ್ತಾತ್ರೇಯ ದೇವಸ್ಥಾನದಲ್ಲಿ ಗುರುವಾರ ದತ್ತ ತಿಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದತ್ತನ ಭಜನೆ ಮಾಡಿದ ಕಾರ್ಯಕರ್ತರು,...

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇರೆಗೆ ಪಾಕಿಸ್ತಾನಕ್ಕೆ ಹೋಗಿದ್ದೆ ಎಂದು ವಿವಾದಕ್ಕೆ ಸಿಲುಕಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅರ್ಥವೇ ಆಗುವುದಿಲ್ಲ ಎಂದು ಅಕಾಲಿ ದಳದ ಮಂಜಿತ್‌ ಸಿಂಗ್‌ ಜಿ ಕೆ ತಿಳಿಸಿದ್ದಾರೆ.

ಕೆಲವೊಮ್ಮೆ ಅವರು ಮೋದಿಜಿಯನ್ನು ಹೊಗಳುತ್ತಾರೆ. ಆದರೆ ಈಗ ಅವರನ್ನು ಟೀಕಿಸುತ್ತಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಇಟಾಲಿಯನ್‌ ಮಮ್ಮಿ ಎಂದಿದ್ದರು. ಆದರೆ ಈಗ ಅವರ ಪಾದವನ್ನು ಮುಟ್ಟುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ಅವರ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ವಿರುದ್ಧವೇ ತಿರುಗಿ ಬಿದ್ದಿದ್ದರು. ಅದೀಗ ಅವರೇ ಮುಖ್ಯಮಂತ್ರಿಯಾಗಲು ಬಯಸುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.

ನವೆಂಬರ್‌ 28ರಂದು ಸಿಧು ಪಾಕಿಸ್ತಾನ ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌ನ ಶಂಕುಸ್ಥಾಪನೆ ಅಂಗವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.
ಕ್ರಿಕೆಟರ್‌ ಕಮ್‌ ರಾಜಕಾರಣಿ ಸಿಧು ಅವರ ಪಾಕ್‌ ಭೇಟಿಗೆ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಆಕ್ಷೇಪ ವ್ಯಕ್ತಪಡಿಸಿದ್ದರೂ ಕೂಡ ನ. 28ರಂದು ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಧು, ಪಾಕ್‌ ಭೇಟಿಯನ್ನು ಸಮರ್ಥಿಸಿಕೊಂಡಿದ್ದರು.

ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಸೇನೆಗೆ ಮಾತ್ರ ಕ್ಯಾಪ್ಟನ್‌. ನನ್ನ ಕ್ಯಾಪ್ಟನ್‌ ರಾಹುಲ್‌ ಗಾಂಧಿ. ಅವರು ನನ್ನನ್ನು ಎಲ್ಲಾ ಕಡೆಗೂ ಕಳುಹಿಸಿದ್ದರು. ಕ್ಯಾಪ್ಟನ್‌ ಸಾಬ್‌ ಎಂದರೆ ರಾಹುಲ್‌ ಗಾಂಧಿ, ಅವರೇ ನನ್ನ ಕ್ಯಾಪ್ಟನ್‌. ರಾಹುಲ್‌ ಗಾಂಧಿ ಅವರೇ ನನ್ನನ್ನು ಪಾಕ್‌ಗೆ ಹೋಗುವಂತೆ ಹೇಳಿದ್ದರು ಎಂದಿದ್ದರು.

ಬಳಿಕ ಯೂಟರ್ನ್‌ ಹೊಡೆದಿದ್ದ ಅವರು ರಾಹುಲ್‌ ಗಾಂಧಿ ಅವರು ನನ್ನನ್ನು ಪಾಕಿಸ್ತಾನಕ್ಕೆ ಹೋಗುವಂತೆ ಹೇಳಿಲ್ಲ. ಬದಲಿಗೆ ಇಮ್ರಾನ್‌ ಖಾನ್‌ರ ವೈಯಕ್ತಿಕ ಆಹ್ವಾನದ ಮೇರೆಗೆ ಪಾಕಿಸ್ತಾನಕ್ಕೆ ಹೋಗಿದ್ದು ಇಡೀ ವಿಶ್ವಕ್ಕೆ ಗೊತ್ತಿದೆ ಎಂದು ಹೇಳಿ ಟ್ವೀಟ್‌ ಮಾಡಿದ್ದರು. (ಏಜೆನ್ಸೀಸ್)

Stay connected

278,753FansLike
588FollowersFollow
625,000SubscribersSubscribe

ವಿಡಿಯೋ ನ್ಯೂಸ್

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...