21 C
Bengaluru
Thursday, January 23, 2020

ದಯವಿಟ್ಟು ಜಯಂತಿಗಳನ್ನು ಜಾತಿಗೆ ಕಟ್ಟಿಹಾಕಬೇಡಿ

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ತಮ್ಮ ಚಿಂತನೆ ಮತ್ತು ಬದುಕು-ಬರಹಗಳ ಮೂಲಕ ನಾಡಿನ ಸಂಸ್ಕೃತಿ, ಪರಂಪರೆ, ಸಮಾಜವನ್ನು ಪೊರೆದ ಮಹನೀಯರ ಆದರ್ಶ ಮತ್ತು ಚಿಂತನೆಗಳನ್ನು ವರ್ತಮಾನದ ಬದುಕಿಗೆ ಪರಿಚಯಿಸುವ ಮತ್ತು ಚಿಂತನೆಗಳ ಮರು ಅವಲೋಕನದ ದೃಷ್ಟಿಯಿಂದ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ ಎಂದು ಸರ್ಕಾರದ ಬಹುತೇಕ ಜಯಂತಿಗಳ ಆಚರಣೆ ಘೊಷಣೆ ಆದೇಶದಲ್ಲಿ ತಿಳಿಸಲಾಗಿರುತ್ತದೆ.

ಈ ಹಿಂದೆಲ್ಲ ಬಸವ, ಕನಕ, ಗಾಂಧಿ, ಅಂಬೇಡ್ಕರ್ ಹೀಗೆ ಮೂರ್ನಾಲ್ಕು ಜಯಂತಿಗಳನ್ನು ಮಾತ್ರ ಸರ್ಕಾರ ಆಚರಣೆ ಮಾಡುತ್ತಿತ್ತು. ನಂತರದ ದಿನಗಳಲ್ಲಿ ಜಾತಿ, ಮತ, ಕುಲ ಮೀರಿ ಮಾನವೀಯತೆಗಾಗಿ ಶ್ರಮಿಸಿದ ಸಾಂಸ್ಕೃತಿಕ ನಾಯಕರಿಗೆ ರಾಜಕೀಯ ಕಾರಣಗಳಿಗಾಗಿ ವಿವಿಧ ಸಮುದಾಯಗಳ ನೇತಾರರು ಜಾತಿಪಟ್ಟಿ ಕಟ್ಟಿದರು.

ಸರ್ಕಾರದಲ್ಲಿ ಸಚಿವರ ಸಮುದಾಯಗಳ ಆಧಾರದ ಮೇಲೆ ವಿವಿಧ ಕಾಲಘಟ್ಟದಲ್ಲಿ ಕೆಲವು ನಿರ್ದಿಷ್ಟ ಜಯಂತಿಗಳು ವಿಶೇಷವಾಗಿ ಆಚರಿಸಲ್ಪಟ್ಟವು. ನಾಡಪ್ರಭು ಕೆಂಪೇಗೌಡ ಜಯಂತಿ ಅರಮನೆ ಮೈದಾನದಲ್ಲಿ ಆಚರಿಸಲ್ಪಟ್ಟರೆ, ದಾಸಿಮಯ್ಯ ಜಯಂತಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಗಳು ಬೇರೆ ಬೇರೆ ಸಚಿವರ ಕಾಲಘಟ್ಟದಲ್ಲಿ ಆಚರಣೆಯಲ್ಲಿ ತಾತ್ಕಾಲಿಕವಾಗಿ ಹೆಚ್ಚು ಮಹತ್ವ ಪಡೆದವು.

ಸರ್ಕಾರ ಆದೇಶ ಮಾಡಿರುವ ಜಯಂತಿಗಳಿಗೆ ತಲಾ 69 ಲಕ್ಷ ರೂಪಾಯಿ ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ರಾಜ್ಯಮಟ್ಟದ ಆಚರಣೆಯಲ್ಲಿ ಹತ್ತು ಲಕ್ಷ ರೂ.ಗಳ ಅನುದಾನ, ಜಿಲ್ಲಾಮಟ್ಟದಲ್ಲಿ 50 ಸಾವಿರ ರೂ. ಮತ್ತು ತಾಲೂಕು ಮಟ್ಟದಲ್ಲಿ 20-25 ಸಾವಿರ ರೂ.ಗಳ ಅನುದಾನ ನೀಡಲಾಗುತ್ತಿದೆ.

ರಾಜ್ಯ ಮಟ್ಟದ ಆಚರಣೆ ಮತ್ತು ಜಿಲ್ಲಾ/ತಾಲೂಕು ಮಟ್ಟದಲ್ಲಿ ಆಚರಣೆಗೆ ಸಿದ್ಧತೆ ಆರಂಭವಾಗುವಾಗಲೇ ಈ ಜಯಂತಿಗಳ ಮೂಲ ಉದ್ದೇಶಗಳಿಗೆ ಮಿತಿ ಬಂದು ಬಿಡುತ್ತದೆ. ಸಮಾಲೋಚನಾ ಸಭೆಗೆ ಆಯಾ ಸಮುದಾಯದ ಮುಖ್ಯಸ್ಥರನ್ನು ಕರೆಯುತ್ತಾರೆ. ಆಯಾ ಮುಖ್ಯಸ್ಥರು ಸಭೆಯಲ್ಲಿ ಸಲಹೆ ನೀಡಿ, ತಮ್ಮ ಸಮುದಾಯದವರೊಬ್ಬರಿಗೆ ವೇದಿಕೆಯಲ್ಲಿ ಅವಕಾಶ ಪಡೆದು, ತಮ್ಮ ಜಾತಿಯ ಜನರನ್ನು ಕರೆತಂದು ಸಭಾಂಗಣ ಭರ್ತಿ ಮಾಡುತ್ತಾರೆ. ಹೀಗೆ ರಾಜಕಾರಣಿಗಳ ಪ್ರಭಾವ ಮತ್ತು ಜನಸಂಖ್ಯೆ ಆಧರಿಸಿ ಈ ಜಯಂತಿಗಳು ಅರಮನೆ ಮೈದಾನ, ವಿಧಾನಸೌಧದ ಆವರಣ, ಬ್ಯಾಂಕ್ವೆಟ್ ಹಾಲ್, ರವೀಂದ್ರ ಕಲಾಕ್ಷೇತ್ರ ಅಥವಾ ನೂರಿನ್ನೂರು ಆಸನ ವ್ಯವಸ್ಥೆಯ ರಂಗಮಂದಿರಗಳಲ್ಲಿ ಸಹ ನಡೆಯುವುದುಂಟು.

ಕನ್ನಡ-ಸಂಸ್ಕೃತಿ ಇಲಾಖೆ ವತಿಯಿಂದ 26 ಮಹಾಪುರುಷರ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ. ಅಲ್ಲದೆ ವಾರ್ತಾ ಇಲಾಖೆ ಗಾಂಧಿ ಜಯಂತಿ, ಸಮಾಜ ಕಲ್ಯಾಣ ಇಲಾಖೆ ಮಹರ್ಷಿ ವಾಲ್ಮೀಕಿ, ಬಾಬಾಸಾಹೇಬ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಜಯಂತಿ, ಯುವಜನ ಸೇವಾ ಇಲಾಖೆ ಸ್ವಾಮಿ ವಿವೇಕಾನಂದ ಜಯಂತಿ ಹೀಗೆ ಸರ್ಕಾರದ ಬೇರೆ ಬೇರೆ ಇಲಾಖೆಗಳು ಆಚರಿಸುವ ಜಯಂತಿ ಸುಮಾರು 50ನ್ನು ಮುಟ್ಟುವ ಸಾಧ್ಯತೆಗಳಿವೆ.

ಸರ್ಕಾರ ವರ್ಷವಿಡೀ ಸರಿಸುಮಾರು ವಾರಕ್ಕೊಂದರಂತೆ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ತನ್ನ ಆಡಳಿತ ವ್ಯವಸ್ಥೆಯ ಸಮಯ, ಸಂಪನ್ಮೂಲ ಮತ್ತು ಶ್ರಮವನ್ನು ಇದಕ್ಕಾಗಿ ವಿನಿಯೋಗಿಸಬೇಕಾಗುತ್ತದೆ. ಆಚರಣೆಯ ಪೂರ್ವಭಾವಿ ಸಮಾಲೋಚನಾ ಸಭೆ ಮತ್ತು ಆಚರಣೆಗೆ ಎರಡು ಅರ್ಧ ದಿನಗಳನ್ನು ಕನಿಷ್ಠ ಇದಕ್ಕಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲೆಯ, ತಾಲೂಕಿನ ಅಧಿಕಾರಿ ವರ್ಗ ವಿನಿಯೋಗಿಸಬೇಕಾಗುತ್ತದೆ. ಅಂದರೆ ಸರಾಸರಿ ಪ್ರತಿ ವಾರದ ಒಂದು ದಿನವನ್ನು ಜಯಂತಿಗಳಿಗಾಗಿಯೇ ಸರ್ಕಾರ ವಿನಿಯೋಗಿಸಬೇಕಾಗುತ್ತದೆ.

ಈ ಜಯಂತಿಗಳು ಹಲವು ಮೇಲಾಟಗಳ ವೇದಿಕೆಯಾಗಿ ಸಹ ಕಾಣಿಸಿಕೊಂಡಿವೆ. ಸರ್ಕಾರದಿಂದ ಶ್ರೀಕೃಷ್ಣ ಜಯಂತಿ ಆಚರಣೆ ಮಾಡಲು ಯಾದವ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳನ್ನು ಯಾದವ ಸಂಘ ಒತ್ತಾಯಿಸಿತು. ಅದರಂತೆ ಆದೇಶ ಹೊರಡಿಸುವಾಗ ಜಯಂತಿ ಆಚರಣೆ ಸಂದರ್ಭದಲ್ಲಿ ಯಾದವ ಸಂಘದ ಮಾರ್ಗದರ್ಶನ ಪಡೆದು ಜಯಂತಿ ಆಚರಿಸಲು ಸೂಚಿಸಿತ್ತು.

‘ಇತರ ಯಾವುದೇ ಸಮುದಾಯಗಳನ್ನೂ ಆಚರಣೆ ಸಂದರ್ಭದಲ್ಲಿ ಚರ್ಚೆಗೆ ಆಹ್ವಾನಿಸಬಾರದು’ ಎಂದು ಯಾದವ ಸಂಘವು ಲೀಗಲ್ ನೋಟೀಸನ್ನು ಇಲಾಖಾ ನಿರ್ದೇಶಕರಿಗೆ ನೀಡಿತ್ತು. ಭಾರತದ ದೊಡ್ಡ ಜನವರ್ಗವೇ

ಆರಾಧಿಸುವ ಶ್ರೀಕೃಷ್ಣ ಜಯಂತಿ ಹೀಗೆ ವಿವಾದಾಸ್ಪದ ಆಗಿದ್ದು ಮಾತ್ರ

ಜಯಂತಿ ಆಚರಣೆಗೆ ವಿರುದ್ಧವಾಗಿತ್ತು.

ಸರ್ವಜ್ಞ ಕುಂಬಾರನೋ, ಬ್ರಾಹ್ಮಣನೋ ಎಂಬ ಬಗ್ಗೆ ಜಾತಿ ವಿವಾದಗಳೆದ್ದಿತ್ತು. ಹಿರಿಯ ಸಂಶೋಧಕ ಚಿದಾನಂದಮೂರ್ತಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ದಾಸಿಮಯ್ಯ ಜಯಂತಿ ಆಚರಣೆ ಸಂದರ್ಭದಲ್ಲಿಯೇ ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಬೇರೆ ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸದಾ ವಿವಾದಗಳಲ್ಲಿಯೇ ಆರಂಭವಾಗಿ ಕೋರ್ಟು ಕಟ್ಟೆ ಸುತ್ತಿ, ನಂತರ ವಿವಾದಗಳಲ್ಲಿಯೇ ಪರ್ಯಾವಸಾನ ಕಂಡಿತು. ಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಸಂಬಂಧ ನಡೆದ ಸಭೆಯಲ್ಲಿ ಆಗಮಿಸಿದ್ದ ಸವಿತಾಸಮಾಜದ ಪ್ರತಿನಿಧಿಗಳ ಒತ್ತಾಯದ ಮೇರೆಗೆ ಶರಣ ಹಡಪದ ಅಪ್ಪಣ್ಣ ಮತ್ತು ಸವಿತಾ ಮಹರ್ಷಿ ಜಯಂತಿಗಳು ಪ್ರತ್ಯೇಕವಾಗಿ ಆಚರಣೆಗೊಂಡವು. ಅಕ್ಕ ಮಹಾದೇವಿ ಜಯಂತಿ ಮತ್ತು ಕಾಯಕ ಶರಣರ ಜಯಂತಿಗಳು ರಾಜ್ಯಮಟ್ಟದಲ್ಲಿ ಆಚರಣೆಯಾಗಬೇಕು ಎಂಬ ಆದೇಶವಿದ್ದರೂ, ರಾಜ್ಯವ್ಯಾಪಿ ಆಚರಣೆ ಆಗುತ್ತಿವೆ. ರಾಜ್ಯ ಮಟ್ಟದಲ್ಲಿ ಆಚರಣೆ ಆಗುತ್ತಿದ್ದ ಶಂಕರಾಚಾರ್ಯ ಜಯಂತಿ ಕಳೆದ ಎರಡು ವರ್ಷಗಳಿಂದ ರಾಜ್ಯಾದ್ಯಂತ ಆಚರಣೆ ಆಗುತ್ತಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಮೈಸೂರು, ಮಂಡ್ಯ ಮತ್ತು ಬೆಂಗಳೂರಿಗೆ ಸೀಮಿತವಾದರೆ ಬೆಂಗಳೂರಿನ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ರಾಜ್ಯವ್ಯಾಪಿ ಆಗುತ್ತಿದೆ. ಫೀಲ್ಡ್ ಮಾರ್ಷಲ್ ಕಾರಿಯಪ್ಪ ಜಯಂತಿ ಕೊಡಗಿನಲ್ಲಿ ಮಾತ್ರ ನಡೆಯುತ್ತಿತ್ತು. ಈಗ ಅನುದಾನದಲ್ಲಿ ಅದಕ್ಕೂ ಅವಕಾಶ ಕಲ್ಪಿಸಿದಂತಿಲ್ಲ.

ಹೀಗೆ ಜಾತಿ ಬೆಂಬಲ ಇದ್ದವರಿಗೆ ಮಾತ್ರ ಜಯಂತಿ ಎಂಬಂತಹ ವಾತಾವರಣವನ್ನು ಬದಲಿಸಬೇಕು. ಕನ್ನಡ ನಾಡಿನ ಮಹತ್ತನ್ನು ಜಗತ್ತಿಗೆ ಪಸರಿಸಿದ ವಚನ ಚಳವಳಿಯ ಬಸವಣ್ಣ, ಆಧುನಿಕ ಕರ್ನಾಟಕದ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್, ಬೆಂಗಳೂರಿನ ನಿರ್ವಪಕ ಕೆಂಪೇಗೌಡ, ಫೀಲ್ಡ್ ಮಾರ್ಷಲ್ ಕಾರಿಯಪ್ಪ, ವಿಶ್ವಮಾನವ ತತ್ತ್ವ ಪ್ರತಿಪಾದಿಸಿದ ಕುವೆಂಪು ಅವರಂತಹ ಮಹನೀಯರ ಬದುಕು, ಸಂದೇಶಗಳು ಸಮಗ್ರ

ಸಮಾಜಕ್ಕೆ ತಲುಪುವ ಬದಲು ಅವರೆಲ್ಲರನ್ನೂ ಜಾತಿಗಳಿಗೆ

ಸೀಮಿತಗೊಳಿಸಿಬಿಡುವ ಅಪಾಯ ಎದುರು ನಿಂತಿದೆ.

ಸರ್ಕಾರಗಳು ನಿಜ ಆಸಕ್ತಿಯಿಂದ ಕ್ರಮವಹಿಸಿ, ಈ ಎಲ್ಲ ಮಹನೀಯರ ಬದುಕು, ಚಿಂತನೆ ಮತ್ತು ಸಾಧನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಸಲುವಾಗಿ ಆಯಾ ಜಯಂತಿ ದಿನಗಳಂದು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಾರ್ಥನಾ ಸಮಾವೇಶದಲ್ಲಿ ಅವರ ಬದುಕು ಸಾಧನೆಗಳ ಪರಿಚಯವನ್ನು ಶಾಲಾ ಶಿಕ್ಷಕರ ಮೂಲಕವೇ ಮಾಡಬಹುದು.

(ಲೇಖಕರು ರಂಗಕರ್ವಿು)

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...