ಮುಸ್ಲಿಂ ವ್ಯಕ್ತಿ ಬಳಿ ಜೈ ಶ್ರೀರಾಂ ಹೇಳಿಸಿದ್ದ ಘಟನೆ ಖಂಡಿಸಿದ್ದ ಗೌತಮ್​ ಗಂಭೀರ್​ಗೆ ನಟ ಅನುಪಮ್​ ಖೇರ್​ ನೀಡಿದ ಸಲಹೆ ಇದು

ನವದೆಹಲಿ: ಗುರ್​ಗಾಂವ್​ನಲ್ಲಿ ಮುಸ್ಲಿಂ ವ್ಯಕ್ತಿಯೋರ್ವ ಟೋಪಿ ಧರಿಸಿದ್ದನ್ನು ವಿರೋಧಿಸಿ, ಶ್ರೀ ರಾಮ ಮಂತ್ರವನ್ನು ಜಪಿಸುವಂತೆ ಒತ್ತಾಯ ಮಾಡಿದ ಘಟನೆಯೊಂದು ನಡೆದಿತ್ತು. ಇದನ್ನು ನೂತನ ಸಂಸದ ಗೌತಮ್​ ಗಂಭೀರ್​ ಬಲವಾಗಿ ವಿರೋಧಿಸಿ, ನಮ್ಮದು ಜಾತ್ಯತೀತ ರಾಷ್ಟ್ರ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಈಗ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಹಿರಿಯ ನಟ ಅನುಪಮ್​ ಖೇರ್​ ಗೌತಮ್​ ಗಂಭೀರ್​ಗೆ ಸಲಹೆಯೊಂದನ್ನು ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ್ದಕ್ಕೆ ಅಭಿನಂದನೆಗಳು. ಒಬ್ಬ ಕಟ್ಟಾ ಭಾರತೀಯನಾಗಿ ನನಗೆ ಸಂತೋಷ ತಂದಿದೆ. ನೀವು ನನ್ನ ಬಳಿ ಯಾವುದೇ ಸಲಹೆಯನ್ನೂ ಕೇಳಿಲ್ಲ. ಆದರೂ ನಾನು ಒಂದು ವಿಷಯ ಹೇಳಬೇಕು. ನೀವು ಯಾವುದೇ ಕಾರಣಕ್ಕೂ ಪ್ರಸಿದ್ಧಿಗಾಗಿ ಮಾತನಾಡಬೇಡಿ. ಮಾಧ್ಯಮ ಹೇಳಿಕೆಗಳನ್ನು ಕೊಡುವಾಗ ಎಚ್ಚರವಿರಲಿ. ಖ್ಯಾತಿ ಪಡೆಯುವ ಅವಸರದಲ್ಲಿ ಬಲೆಗೆ ಬೀಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ. ಹಾಗೇ ನೀವು ನಿಮ್ಮ ಕೆಲಸ ಮಾಡಿ. ಅದು ಮಾತಾಡುತ್ತದೆ. ಆಗ ನೀವು ಯಾವುದೇ ಹೇಳಿಕೆ ನೀಡುವುದು ಬೇಕಾಗುವುದಿಲ್ಲ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

25 ವರ್ಷ ಮುಸ್ಲಿಂ ಯುವಕ ಮೊಹಮ್ಮದ್​ ಬರಕತ್​ ಆಲಂ ಎಂಬಾತ ಕೆಲವರು ತನ್ನ ಮೇಲೆ ಹಲ್ಲೆ ನಡೆಸಿ ಮುಸ್ಲಿಂ ಟೋಪಿ ತೆಗೆಸಿ ಜೈ ಶ್ರೀರಾಂ, ಭಾರತ್​ ಮಾತಾ ಕೀ ಜೈ ಹೇಳುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿದ್ದ. ಈ ವಿಚಾರವನ್ನು ಪೂರ್ವ ದೆಹಲಿ ಲೋಕಸಭಾ ಬಿಜೆಪಿ ಸಂಸದ ಗೌತಮ್​ ಗಂಭೀರ್​ ತೀವ್ರವಾಗಿ ಖಂಡಿಸಿ ಟ್ವೀಟ್​ ಮಾಡಿದ್ದರು.

Leave a Reply

Your email address will not be published. Required fields are marked *