ನನ್ನನ್ನು ಕಪಿಲ್​ ದೇವ್​ರೊಂದಿಗೆ ಹೋಲಿಸಬೇಡಿ: ಪಾಂಡ್ಯ

ನಾಟಿಂಗ್​ಹ್ಯಾಂ: ಆಲ್ರೌಂಡರ್ ಪಟ್ಟಕ್ಕೆ ಅರ್ಹ ನಿರ್ವಹಣೆ ತೋರಲು ವಿಫಲರಾಗುತ್ತಿದ್ದಾರೆಂಬ ಟೀಕೆಗೊಳಗಾಗುತ್ತಿದ್ದ ಹಾರ್ದಿಕ್ ಪಾಂಡ್ಯ ಟ್ರೆಂಟ್​ಬ್ರಿಜ್​ನಲ್ಲಿ ಉರಿ ದಾಳಿ ಬೌಲಿಂಗ್ ನಡೆಸಿ ಇಂಗ್ಲೆಂಡ್​ ತಂಡವನ್ನು ಕಟ್ಟಿಹಾಕಿದ್ದ ಹಾರ್ದಿಕ್​ ಪಾಂಡ್ಯ ನನ್ನನ್ನು ಕಪಿಲ್​ ದೇವ್​ ಅವರೊಂದಿಗೆ ಹೋಲಿಸಬೇಡಿ ಎಂದು ತಿಳಿಸಿದ್ದಾರೆ.

ಮೂರನೇ ಟೆಸ್ಟ್​ ಪಂದ್ಯದ ಎರಡನೇ ದಿನ ಪಾಂಡ್ಯ (28ಕ್ಕೆ 5) ಜೀವನಶ್ರೇಷ್ಠ ನಿರ್ವಹಣೆ ತೋರಿದ್ದರು. ಆ ನಂತರ ಮಾತನಾಡಿದ ಅವರು ಹೋಲಿಕೆ ಮಾಡುವುದು ಉತ್ತಮ. ನಾನು ಎಂದಿಗೂ ಕಪಿಲ್​ ದೇವ್​ ಆಗಬೇಕು ಎಂದು ಬಯಸಿರಲಿಲ್ಲ. ನಾನು ಹಾರ್ದಿಕ್​ ಪಾಂಡ್ಯ ಆಗಿಯೇ ಇರುತ್ತೇನೆ. ನಾನು ಹಾರ್ದಿಕ್​ ಪಾಂಡ್ಯ ಆಗಿಯೇ ಈ ಹಂತದವರೆಗೆ ಬೆಳೆದಿದ್ದೇನೆ. ಕಪಿಲ್​ ದೇವ್​ ಓರ್ವ ಶ್ರೇಷ್ಠ ಕ್ರಿಕೆಟಿಗ. ಅವರೊಂದಿಗೆ ನನ್ನನ್ನು ಹೋಲಿಸಬೇಡಿ. ನೀವು ನನ್ನನ್ನು ಕಪಿಲ್​ ದೇವ್​ ಅವರೊಂದಿಗೆ ಹೋಲಿಸದಿದ್ದರೆ ನನಗೆ ಸಂತೋಷವಾಗುತ್ತದೆ ಎಂದು ಪಾಂಡ್ಯ ತಿಳಿಸಿದ್ದಾರೆ.

ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಇಂಗ್ಲೆಂಡ್​ ಪ್ರವಾಸದಲ್ಲಿ ಸರಿಯಾದ ನಿರ್ವಹಣೆ ತೋರುತ್ತಿಲ್ಲ ಎಂದು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದರ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ನಾನು ಟೀಕಾಕಾರರಿಗಾಗಿ ಆಡುವುದಿಲ್ಲ, ನಾನು ದೇಶಕ್ಕಾಗಿ ಮಾತ್ರ ಆಡುತ್ತೇನೆ. ನನ್ನ ಪ್ರದರ್ಶನಕ್ಕೆ ತಂಡ ಸಂತೃಪ್ತಿ ವ್ಯಕ್ತ ಪಡಿಸಿದೆ. ನನಗೆ ಅಷ್ಟೇ ಸಾಕು ಎಂದು ಟೀಕಾಕಾರಿಗೆ ತಿರುಗೇಟು ನೀಡಿದ್ದಾರೆ (ಏಜೆನ್ಸೀಸ್​)

ಹಾರ್ದಿಕ್​ ಪಾಂಡ್ಯಗಿರುವ ಆಲ್​ರೌಂಡರ್​ ಪಟ್ಟ ಕಿತ್ತುಹಾಕಿ: ಭಜ್ಜಿ ಗರಂ