ಅಕ್ಕಿಆಲೂರ: ಯುವ ಜನಾಂಗವು ಆತ್ಮವಿಶ್ವಾಸವನ್ನೇ ಆಯುಧವನ್ನಾಗಿಸಿಕೊಳ್ಳಬೇಕೆಂದು ಸ್ನೇಕ್ ಕೃಷ್ಣರೆಡ್ಡಿ ಸ್ನೇಹ ಬಳಗದ ಅಧ್ಯಕ್ಷ ಮಹಾಂತೇಶ ಶಂಕ್ರಿಕೊಪ್ಪ ಹೇಳಿದರು.
ಸಮೀಪದ ಆಡೂರ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಬೆಂಗಳೂರ ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ವಿಷಯದಲ್ಲಿ ಚಿನ್ನದ ಪದಕ ಪಡೆದ ಅಂಕಿತಾ ಕೆಂಚಣ್ಣನವರ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಉತ್ತರ ಕರ್ನಾಟಕದ ಭಾಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಇದೆ. ನಕಾರಾತ್ಮಕ ಚಿಂತನೆಯಲ್ಲಿ ಮುಳುಗುವ ವಿದ್ಯಾರ್ಥಿಗಳಲ್ಲಿ ಇರುವ ಅಸಾಧಾರಣ ಸಾಮರ್ಥ್ಯದ ಬಗ್ಗೆ ಅರಿವಿಲ್ಲ. ಪ್ರಯತ್ನದ ಮುಂಚೆಯೇ ಸೋಲು ಒಪ್ಪಿಕೊಳ್ಳುವ ಮನೋಭಾವನೆಯಿಂದ ಹೊರಬಂದು, ಎಲ್ಲವನ್ನು ಸಾಧಿಸುವ ಅಚಲ ನಿರ್ಧಾರ ನಮ್ಮದಾಗಬೇಕು ಎಂದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಪದವಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜ್ಞಾನ, ಅನುಭವದ ಕೊರತೆ ಇರುತ್ತದೆ. ಭಿನ್ನ ಆಲೋಚನೆಗಳು ನಮ್ಮನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತದೆ. ಹಣಕ್ಕಿಂತ ಜ್ಞಾನ ಮತ್ತು ಸಾಧನೆಗೆ ಹೆಚ್ಚು ಬೆಲೆ ಬರುತ್ತದೆ ಎಂದರು.
ಅಂಕಿತಾ ಕೆಂಚಣ್ಣನವರ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಘವೇಂದ್ರ ಕಲಾಲ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷ ಮಾಲತೇಶ ರ್ಬಾ, ಉಪಾಧ್ಯಕ್ಷ ಕವಿತಾ ಕಡೇರ, ಚಂದ್ರಣ್ಣ ನಿಕ್ಕಂ, ಹೊನ್ನಪ್ಪ ಕಡೇರ, ಸೋಮಣ್ಣ ಗೋಣಿಗೇರ, ಎಸ್. ವಿ. ಸಂಗೂರಮಠ, ಮಂಜುನಾಥ ಬಾಳಗೋಡರ, ಯಲ್ಲಪ್ಪ ಮನಗೌಡರ, ಮಂಜುನಾಥ ಕೊಂಚಿಗೇರಿ, ಕೃಷ್ಣ ರೆಡ್ಡಿ, ಸಾವಕ್ಕ ಕಡೇರ, ಸುನಿತಾ ಶಂಕ್ರಿಕೊಪ್ಪ, ಕೆಂಚಪ್ಪ ನಾಗಪ್ಪನವರ ಉಪಸ್ಥಿತರಿದ್ದರು. ಶಿಕ್ಷಕಿ ನೀಲಮ್ಮ ನಿರ್ವಹಿಸಿದರು