ಮೂಡಲಗಿ: ದಾನಿಗಳಿಂದ ಮಕ್ಕಳ ಕಲಿಕೆಗೆ ನೆರವು

ಮೂಡಲಗಿ: ಪ್ರವಾಹದಿಂದಾಗಿ ವಲಯದ ಶಾಲೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ಸಂಘ-ಸಂಸ್ಥೆಗಳು, ದಾನಿಗಳ ಸಹಾಯದಿಂದ ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕವಾಗುತ್ತಿದೆ ಎಂದು ಮೂಡಲಗಿ ಬಿಇಒ ಅಜಿತ ಮನ್ನಿಕೇರಿ ಹೇಳಿದ್ದಾರೆ.

ಸಮೀಪದ ಕಲಾರಕೊಪ್ಪ, ಕಲಾರಕೊಪ್ಪ ಕ್ರಾಸ್, ಉದಗಟ್ಟಿಯ ನಾಗಲಿಂಗನಗರದ ಶಾಲೆಗಳಿಗೆ ಗೋಕಾಕ ಹಾಗೂ ಮೈಸೂರಿನ ನೇಮಿನಾಥ ಜೈನ ಶ್ವೇತಾಂಬರ ಸಂಘ, ಜೋಯಲರ್ಸ ಸಂಘದಿಂದ ಸೋಮವಾರ ಮಕ್ಕಳಿಗೆ ಕಲಿಕೋಪಕರಣ ವಿತರಿಸಿ ಮಾತನಾಡಿದರು.

ನೆರೆ ಸಂತ್ರಸ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನರ ಪರಸ್ಪರ ಸಹಾಯ ಸಹಕಾರ ಅವಶ್ಯಕವಾಗಿದೆ. ವಲಯ ವ್ಯಾಪ್ತಿಯಲ್ಲಿ ಪ್ರವಾಹ ಪೀಡಿತ ಶಾಲಾ ಮಕ್ಕಳಿಗೆ ನೆರವಿನ ಹಸ್ತದ ಜತೆಗೆ ಧೈರ್ಯ ಹೇಳುವ ಕೆಲಸ ಮಾಡುತ್ತಿರುವ ಸಹಕಾರ ಸಂಘ-ಸಂಸ್ಥೆಗಳು ದಾನಿಗಳ ಸೇವಾಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಂಘದ ಅಧ್ಯಕ್ಷ ಇಂದ್ರಮಲ್ಲಜಿ ಓಸವಾಲ, ಉಪಾಧ್ಯಕ್ಷ ಓಂಕಾರಮಲ್ಲಜಿ ರಾಠೋಡ, ಸದಸ್ಯರಾದ ಜಿತೇಂದ್ರ ಪೋರವಾಲ, ಮಹೇಂದ್ರ ಪೋರವಾಲ, ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ದಾಸಪ್ಪನವರ, ಮಾಜಿ ತಾಪಂ ಸದಸ್ಯ ಭೀಮಪ್ಪ ಗೌಡಪ್ಪನವರ, ಗ್ರಾಪಂ ಸದಸ್ಯರಾದ ಅರ್ಜುನ ಸನದಿ, ರಾಯಪ್ಪ ಗೌಡಪ್ಪನವರ, ಸಿದ್ದಪ್ಪ ಗೌಡಪ್ಪನವರ, ಸಿಆರ್‌ಪಿಗಳಾದ ಡಿ.ಎಂ.ಬೋಳೆತ್ತಿನ, ಕೆ.ಆರ್. ಅಜ್ಜಪ್ಪನವರ, ಮುಖ್ಯೋಪಾಧ್ಯಾಯ ಬಿ.ಬಿ.ಪಡಿಮಾಯಿ, ಬಿ.ಜಿ. ಮಂಗಿ, ಎಸ್.ಬಿ. ಚೌದರಿ, ವಿ.ವೈ.ಶಿರೋಶಿ, ಯಂಕಪ್ಪ ಕೊಪ್ಪದ, ಈರಪ್ಪ ಹಿಪ್ಪರಗಿ, ನಾಗಪ್ಪ ಹಿಪ್ಪರಿಗಿ, ಬಸವಂತಪ್ಪ ಹಿಪ್ಪರಗಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *