ಮುಂಡರಗಿ: ಅವಿಶ್ವಾಸದಿಂದ ತೆರವಾಗಿದ್ದ ತಾಲೂಕಿನ ಡೋಣಿ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಹಮ್ಮಿಕೊಂಡಿದ್ದ ಚುನಾವಣೆಯಲ್ಲಿ ಹುಲಿಗೆವ್ವ ಮಳ್ಳಪ್ಪ ಅಳವಂಡಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಹುಲಿಗೆವ್ವ ಅಳವಂಡಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವಿರೋಧ ಆಯ್ಕೆ ಎಂದು ಚುನಾವಣೆ ಅಧಿಕಾರಿ ವಿಶ್ವನಾಥ ಹೊಸಮನಿ ಘೊಷಿಸಿದರು. ಪಿಡಿಒ ಪಾರ್ವತಿ ಹೊಂಬಳ ಇದ್ದರು.
ಸಂಭ್ರಮ: ಹುಲಿಗೆವ್ವ ಅಳವಂಡಿ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಸಂಭ್ರಮಿಸಿದರು. ಮುದುಕಪ್ಪ ಕುಲಕರ್ಣಿ, ಕಾಶಪ್ಪ ಹೊನ್ನೂರು, ಸಿದ್ದಲಿಂಗನಗೌಡ ಪಾಟೀಲ, ಬಸವರಾಜ ಕೇರಿ, ಶಿವಕುಮಾರ ಡ್ರೋಣಗಿರಿ, ಕಾಶಪ್ಪ ಅಳವಂಡಿ, ಪ್ರಭು ಕುಲಕರ್ಣಿ, ಯಮನಪ್ಪ ಈಳಿಗೇರ, ಮುದುಕಪ್ಪ ಗ್ವಾಡಿ, ಈಶಪ್ಪ ಓಲಿ, ಮೋದಿನಸಾಬ್ ಕಾಗದಗರ, ಶಂಕ್ರಪ್ಪ ಹಳ್ಳಿಕೇರಿ, ನಾಗರಾಜ ಕಡೆಮನಿ, ಶರಣಪ್ಪ ಆಲೂರು, ಯಮನೂರಪ್ಪ ಚಲವಾದಿ, ಬಸವರಾಜ ಕಡೆಮನಿ ಇದ್ದರು.