ಕಡೂರು: ಪಟ್ಟಣದ ಶ್ರೀ ಚಂದ್ರಮೌಳ್ವೇಶ್ವರ ದೇವಾಲಯದ ರುದ್ರಭೂಮಿಯಲ್ಲಿ ಕಡೂರು ರೋಟರಿ, ವಿವಿಧ ಸಮಾಜಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ಥಾಪಿಸಲು ಹೊರಟಿರುವ ಅನಿಲ ಚಿತಾಗಾರಕ್ಕೆ ತಾಲೂಕು ಬ್ರಾಹ್ಮಣ ಸಮಾಜ 1.75 ಲಕ್ಷ ರೂ. ದೇಣಿಗೆ ನೀಡಿದೆ ಎಂದು ಚಿತಾಗಾರ ಸಮಿತಿ ಅಧ್ಯಕ್ಷ ರೋಟರಿಯನ್ ಕೆ.ಪಿ.ರಾಘವೇಂದ್ರ ತಿಳಿಸಿದರು.
ಪಟ್ಟಣದ ಕೋಟೆಯಲ್ಲಿರುವ ಶ್ರೀಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ಚೆಕ್ ಸ್ವೀಕರಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಸಾರ್ವಜನಿಕರ ಸಹಕಾರದೊಂದಿಗೆ ಅಂದಾಜು 65ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲು ಹೊರಟಿರುವ ಅನಿಲ ಚಿತಾಗಾರಕ್ಕೆ ಈಗಾಗಲೇ 38 ಲಕ್ಷ ರೂ.ಸಂಗ್ರಹವಾಗಿದೆ. ಇದೀಗ ತಾಲೂಕು ಬ್ರಾಹ್ಮಣ ಸಮಾಜ 1.75 ಲಕ್ಷ ರೂ. ಚಿತಾಗಾರ ಅಭಿವೃದ್ಧಿಗೆ ನೀಡಿರುವುದು ಸಹಕಾರಿಯಾಗಿದೆ ಎಂದರು.
ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ನಮ್ಮ ಸಮಾಜದ ಬಂಧುಗಳ ಸಹಕಾರದಿಂದ ಅನಿಲ ಚಿತಾಗಾರಕ್ಕೆ ದೇಣಿಗೆ ರೂಪದಲ್ಲಿ ಹಣ ನೀಡಿದ್ದು. ಸಮಾಜಮುಖಿ ಕೆಲಸಗಳಿಗೆ ಬ್ರಾಹ್ಮಣ ಸಮಾಜ ಸ್ಪಂದಿಸುತ್ತದೆ ಎಂದರು. ರೋಟರಿಯ ಟಿ.ಡಿ.ಸತ್ಯನ್, ಶಿವಕುಮಾರ್, ಪ್ರೇಮ್ ಕುಮಾರ್, ರಘುರಾಮ್, ಡಾ.ಉಮೇಶ್‌ರಾವ್, ಗಂಗಾಧರ್, ಸುರೇಶ್, ರಘು, ಗಾಯತ್ರಿ ಮತ್ತಿತರರು ಇದ್ದರು.
ರೋಟರಿ ಚಿತಾಗಾರಕ್ಕೆ 1.75 ಲಕ್ಷ ರೂ.ದೇಣಿಗೆ
ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips
Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…
honeymoon destinations : 2024 ರಲ್ಲಿ ನವವಿವಾಹಿತರನ್ನು ಆಕರ್ಷಿಸಿದ ನೆಚ್ಚಿನ ಹನಿಮೂನ್ ತಾಣಗಳು ಇವು..!
honeymoon destinations : ವ್ಯಕ್ತಿಯ ಆದ್ಯತೆಗಳು ಮತ್ತು ಆಯ್ಕೆಗಳು ವರ್ಷಗಳಲ್ಲಿ ಬದಲಾಗುತ್ತವೆ. ಈಗ ನಾವು 2024…
Kitchen Hacks: ಹಣ್ಣು, ತರಕಾರಿಗಳ ಸಿಪ್ಪೆ ಎಸೆಯುತ್ತಿದ್ದೀರಾ? ಹೀಗೆ ಮರುಬಳಕೆ ಮಾಡಬಹುದು ನೋಡಿ
Kitchen Hacks: ಹಣ್ಣುಗಳು, ತರಕಾರಿಗಳು ಆರೋಗ್ಯಕ್ಕೆ ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಇವುಗಳನ್ನು ಬಳಸಿದ…