ದಾನ ಸದ್ಬಳಕೆಯಾದರೆ ಮಾತ್ರ ಸಾರ್ಥಕ್ಯ

blank

ಹೊಸನಗರ: ಮಾಡುವ ದಾನ ಸದ್ವಿನಿಯೋಗ ಆದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಉದ್ಯಮಿ ಅತ್ತಿಕೊಡಿಗೆ ನಾಗಪ್ಪ ಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಹೊಸಬೀಡು ಇತಿಹಾಸ ಪ್ರಸಿದ್ಧ ಶ್ರೀ ಗಂಗಾಧರೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇಗುಲ ನಿರ್ಮಾಣಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಉದಾತ್ತ ಮನೋಭಾವದಿಂದಲೇ ಸಾಕಷ್ಟು ಅಭಿವೃದ್ಧಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಎಂದರೆ ಹೆಚ್ಚಿನ ದಾನ ಹರಿದು ಬರುತ್ತದೆ. ಆ ದಾನ ಸದ್ಬಳಕೆ ಆದಾಗ ಮಾತ್ರ ದಾನ ಮಾಡಿದವರ ಮನಸ್ಸು ಪ್ರಸನ್ನವಾಗುತ್ತದೆ ಎಂದರು.
ಕೊಡಚಾದ್ರಿ ಪದವಿ ಕಾಲೇಜಿನ ಉಪಾಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಊರು ಮತ್ತು ಪರ ಊರಿನವರ ಸಹಕಾರದಿಂದ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನೂತನ ಶಿಲಾಮಯ ದೇಗುಲ ನಿರ್ಮಿಸುವ ಆಶಯ ಈಡೇರಲಿ ಎಂದರು. ದೇಗುಲ ನಿರ್ಮಾಣಕ್ಕಾಗಿ 1.20 ಲಕ್ಷ ರೂ. ಮೊತ್ತದ ಚೆಕ್ಕನ್ನು ಸಮಿತಿಗೆ ನೀಡಿದರು.
700 ವರ್ಷಗಳ ಇತಿಹಾಸ ಇರುವ ಶ್ರೀ ಗಂಗಾಧರೇಶ್ವರ ಸ್ವಾಮಿಯ ಸನ್ನಿಧಿಯ ಐತಿಹ್ಯ, ಪ್ರತೀತಿಗಳ ಬಗ್ಗೆ ಕರಿಮನೆ ಗ್ರಾಪಂ ಉಪಾಧ್ಯಕ್ಷ ಹಲಸಿನಹಳ್ಳಿ ರಮೇಶ್ ತಿಳಿಸಿದರು. ಇದಕ್ಕೂ ಮುನ್ನ ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿರುವ ಶ್ರೀ ಗಂಗಾಧರೇಶ್ವರ ಸನ್ನಿಧಿ, ಶ್ರೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿ ವಿಶೇಷ ಚಂಡೆ ಮೇಳದೊಂದಿಗೆ ವಿಶೇಷ ಪೂಜೆ ನೆರವೇರಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಟಾಕಪ್ಪ ಗೌಡ, ಸಮಿತಿ ಕಾರ್ಯಾಧ್ಯಕ್ಷ ಬಿ.ಉದಯಕುಮಾರ ಶೆಟ್ಟಿ ಮೊಳವಳ್ಳಿ, ಜಿಪಂ ಮಾಜಿ ಉಪಾಧ್ಯಕ್ಷೆ ಅತ್ತಿಕೊಡಿಗೆ ಜಾನಕಮ್ಮ, ಉದ್ಯಮಿಗಳಾದ ವಿಠ್ಠಲ ಕುಲಾಲ್, ರವಿ ಕೊಠಾರಿ, ನಾಗರಾಜ ಪೂಜಾರ್ ಬೈಂದೂರು, ಜೀತೇಂದ್ರ ಶೆಟ್ಟಿ, ಪತ್ರಕರ್ತರಾದ ರವಿ ಬಿದನೂರು, ಶಶಿಧರ ಶೆಟ್ಟಿ ಕೊಕ್ಕರ್ಣೆ, ಸಿ.ಕೆ.ಸುಧಾಕರ, ಸತೀಶ ಹೊಸಬೀಡು, ಅಶ್ವಿನಿ ಪಂಡಿತ್ ಇತರರಿದ್ದರು.

Share This Article

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ರುಚಿಕರ ಆಲೂಪೂರಿ; ಇಲ್ಲಿದೆ ಸುಲಭ ವಿಧಾನ | Recipe

ದಿನ ನಿತ್ಯ ಒಂದೇ ರೀತಿಯ ಬೆಳಗ್ಗಿನ ತಿಂಡಿ ತಿಂದು ಬೇಸರವಾಗಿರುತ್ತದೆ. ಆದರೆ ಏನಾದರೂ ವಿಶೇಷವಾದ ಬ್ರೇಕ್​ಫಾಸ್ಟ್​…

ಉಗುರಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ; ಹೇಗೆ ಅಂತೀರಾ.. ಈ ಮಾಹಿತಿ ನೋಡಿ | Health Tips

ಒಬ್ಬ ವ್ಯಕ್ತಿಯನ್ನು ನೋಡುವ ಮೂಲಕ ಅವನ ಬಗ್ಗೆ ಬಹಳಷ್ಟು ಹೇಳಬಹುದು. ಆದರೆ ಉಗುರುಗಳು ನಿಮ್ಮ ಆರೋಗ್ಯದ…

ಬೆಟ್ಟದ ನೆಲ್ಲಿಕಾಯಿ- ಅಲೋವೆರಾ ಕೂದಲಿನ ಆರೈಕೆಗೆ ಯಾವುದು ಬೆಸ್ಟ್​​; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಹುಡುಗನಾಗಲಿ ಅಥವಾ ಹುಡುಗಿಯಾಗಲಿ ಇಬ್ಬರಿಗೂ ತಮ್ಮ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಪ್ರಸಕ್ತ ಜೀವನಶೈಲಿ,…