ಮಾನವೀಯ ಮೌಲ್ಯದಿಂದ ಗುರಿ ಸಾಧಿಸಲು ಸಾಧ್ಯ

ಭಾಲ್ಕಿ: ಪ್ರತಿಯೊಬ್ಬರೂ ಗುರಿ ಮುಟ್ಟಲು ಮಾನವೀಯ ಮೌಲ್ಯಗಳ ಜತೆಗೆ ಮುಂದೆ ಸಾಗಿದರೆ ಪ್ರತಿಫಲ ಸಿಗುತ್ತದೆ ಎಂದು ಕಟ್ಟಿಮನಿ ಹಿರೇಮಠ ಸಂಸ್ಥಾನದ ಶ್ರೀ ರಾಜೇಶ್ವರ ಶಿವಾಚಾರ್ಯರು ಪ್ರತಿಪಾದಿಸಿದರು.

ಡೊಣಗಾಪುರ ಗ್ರಾಮದ ಶ್ರೀ ಡೋಣೇಶ್ವರ ದೇವಾಲಯದ ಆವರಣದಲ್ಲಿ, ಜಾತ್ರೆ ನಿಮಿತ್ತ ಆಯೋಜಿಸಿದ್ದ ಡೋಣೇಶ್ವರ ಮಹಾಪೂಜಾ ಮಹೋತ್ಸವ, ವಿಶ್ವಶಾಂತಿಗಾಗಿ 37ನೇ ವರ್ಷದ ಜಪಯಜ್ಞ ಹಾಗೂ ಪ್ರಯೋಗಾತ್ಮಕ ಧರ್ಮ ಶಿಕ್ಷಣದ ಸಾನ್ನಿಧ್ಯ ವಹಿಸಿದ್ದ ಅವರು, ಉತ್ತಮ ಗುರು ಸಿಗಬೇಕಾದರೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯ ಎಂದರು.

ಚಾಂಬೋಳ ಮಠದ ಶ್ರೀ ಮೃಗೇಂದ್ರ ದೇವರು ವಿಶೇಷ ಉಪನ್ಯಾಸ ಮಂಡಿಸಿದರು. ಮಹಾತ್ಮಗಾಂಧಿ ಪ್ರೌಢಶಾಲೆ ಶಿಕ್ಷಕ ಜಯರಾಜ ದಾಬಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನದ ಟ್ರಸ್ಟಿ ಸಂಗಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಂಗಮನಾಥ ಕರಸಣ್ಣ, ಚಿದಾನಂದ ಝಳಕಿ, ವಿಶ್ವನಾಥ ಐನೋಲಿ ಮತ್ತು ಓಂಕಾರ ಮೇತ್ರೆ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ಮತ್ತು ಶ್ರೀ ರಾಚೋಟಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ತಾಪಂ ಸದಸ್ಯ ಶಿವರಾಜ ಮಾಲಿಪಾಟೀಲ್, ಗ್ರಾಪಂ ಅಧ್ಯಕ್ಷ ಅಂತಪ್ಪ ದೇವಗೊಂಡ, ಪ್ರಕಾಶ ಸ್ವಾಮಿ, ಮಂಗಲಾ ತಾದಲಾಪುರೆ, ಮನ್ಮಥಪ್ಪ ಬೊಂಬಳಗೆ, ಮಲ್ಲಿಕಾಜರ್ುನ ಉಪ್ಪಿನ, ಪತ್ರಕರ್ತ ರಾಜಶೇಖರ ಮುಗಟೆ, ದಿಲೀಪ ಜೊಳದಪಕೆ, ವಿಶ್ವನಾಥ ಕೊಠಿ ಉಪಸ್ಥಿತರಿದ್ದರು. ಬಾಬುರಾವ ವೀರಶೆಟ್ಟೆ ಸ್ವಾಗತಿಸಿದರು. ಮಲ್ಲಿಕಾರ್ಜುನ ಕುಂಚಗೆ ನಿರೂಪಣೆ ಮಾಡಿದರು. ರಾಜಶೇಖರ ಚಿದ್ರೆ ವಂದಿಸಿದರು.