ದೊಂಪತ್ತಡ್ಕ ಬೀಜದಕಟ್ಟೆಗೆ ಕಪ್ಪುಕಲ್ಲು ಸಾಗಾಟ ವಾಹನವೇ ಆಶ್ರಯ!

Latest News

ಸಂಗನಬಸವ ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ

ವಿಜಯಪುರ: ಇಲ್ಲಿನ ಹೊರವಲಯ ಕವಲಗಿಯಲ್ಲಿರುವ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಶುಕ್ರವಾರ ಅಂತರ್ ಶಾಲಾ ವಿಜ್ಞಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಎಸ್‌ಆರ್ ಪಿಯು ಕಾಲೇಜಿನ...

ಪುಟ್ನಂಜ ನಾಯಕಿಯ ಹೊಸ ಪ್ರಯತ್ನ: ಕಾಮಾಕ್ಷಿಯಾಗಿ ಬಂದ ಸ್ವಾತಿಮುತ್ತು ಮೀನ

ಬೆಂಗಳೂರು: ಒಂದು ಕಾಲದಲ್ಲಿ ಸಿನಿಪ್ರಿಯರ ಮನ ಗೆದ್ದ ನಟಿ ಮೀನಾ ಕರುನಾಡಿನಲ್ಲಿ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ‘ಪುಟ್ನಂಜ’,...

17-11-2019ರಿಂದ 23-11-2019ರವರೆಗೆ

ಮೇಷ: ನಿಮ್ಮ ನಿರೀಕ್ಷೆಗಳು ತುಂಬಾ ಇವೆ. ಆದರೆ ಬುಧನ ಜತೆಗಿನ ನಿಮ್ಮ ರಾಶ್ಯಾಧಿಪ ಕುಜನ ಸಂಯೋಜನೆಯಿಂದಾಗಿ ಹಲವು ಮಹತ್ವದ ವಿಷಯಗಳು ನಿಮ್ಮ ನಿರೀಕ್ಷೆಯ...

ನಿತ್ಯ ಭವಿಷ್ಯ: ಈ ರಾಶಿಯವರಿಗೆ ಕೈಯಲ್ಲಿ ಏನೂ ಹಣವಿಲ್ಲ, ಏನು ಮಾಡುವುದು ಎಂಬ ದೊಡ್ಡ ಚಿಂತೆ ಪವಾಡಸದೃಶವಾಗಿ ದೂರವಾಗಲಿದೆ

ಮೇಷ: ಬರೀ ಗಾಳಿಯೊಡನೆ ಗುದ್ದಾಡಿ ಕೈ ನೋವು ಮಾಡಿಕೊಳ್ಳುವಂತಹ ಯುದ್ಧಕ್ಕಾಗಿನ ತಯಾರಿಯನ್ನು ಬಿಡಿ. ಶುಭಸಂಖ್ಯೆ: 2 ವೃಷಭ: ಬಹಳ ಹಿಂದೆ ಪ್ರಾರಂಭಿಸಿದ ಕೆಲಸವೊಂದು ಸದ್ಯದಲ್ಲೇ...

ರಾಷ್ಟ್ರಪತಿ ಆಳ್ವಿಕೆ ರಾಜಕೀಯ ಅಸ್ತ್ರ: ಯಾರ ಕಾಲದಲ್ಲಿ ಹೆಚ್ಚು ಬಳಕೆ ಎಂಬುದರ ಮಾಹಿತಿ ಇಲ್ಲಿದೆ

ಮಹಾರಾಷ್ಟ್ರದಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚಿಸಲು ವಿಫಲವಾದ್ದರಿಂದ ಅಲ್ಲಿ ಇತ್ತೀಚೆಗಷ್ಟೇ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ. ರಾಷ್ಟ್ರಪತಿ ಆಳ್ವಿಕೆ ಏಕೆ...

ಪುರುಷೋತ್ತಮ ಭಟ್ ಬದಿಯಡ್ಕ

ಜಿಲ್ಲೆಯ ಪ್ರಧಾನ ಪೇಟೆಗಳಲ್ಲಿ ಒಂದಾದ ಬದಿಯಡ್ಕದಿಂದ ಕರ್ನಾಟಕದ ಸುಳ್ಯಪದವು, ಪುತ್ತೂರು, ಈಶ್ವರಮಂಗಲ, ಸುಳ್ಯ ಪೇಟೆ ಸಂಪರ್ಕಸುವ ಲೋಕೋಪಯೋಗಿ ಇಲಾಖೆ ಅಧೀನದ ಜಿಲ್ಲಾ ಪ್ರಧಾನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಡಾಂಬರು ಕಾಣದೆ ಕೆಸರುಮಯವಾಗಿರುವ ರಸ್ತೆಯಲ್ಲಿ ವಾಹನ ಸಂಚಾರ ಮೊಟಕುಗೊಂಡು ಸಾವಿರಾರು ಜನ ಸಂಚಾರ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ. 20 ವರ್ಷಗಳಿಂದ ಈ ರಸ್ತೆಗೆ ಡಾಂಬರು ಹಾಕಿಲ್ಲ ಎಂಬುದೂ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಗೆ ಕನ್ನಡಿ.

ಬದಿಯಡ್ಕದಿಂದ ಕಿನ್ನಿಂಗಾರು ತನಕ ಸಂಚರಿಸುತ್ತಿದ್ದ ಏಕೈಕ ಬಸ್ ಒಂದು ವಾರದಿಂದ ಸಂಚಾರ ಸ್ಥಗಿತಗೊಳಿಸಿ ಏತಡ್ಕದವರೆಗೆ ಮಾತ್ರ ಸಂಚರಿಸುತ್ತಿದೆ. ದೊಂಪತ್ತಡ್ಕ, ಬೀಜದಕಟ್ಟೆ ಪ್ರದೇಶದ ಜನರಿಗೆ ಬದಿಯಡ್ಕ ಅಥವಾ ತರೆ ಪ್ರದೇಶಗಳಿಗೆ ತೆರಳಲು ದೊಂಪತ್ತಡ್ಕದ ಕಗ್ಗಲ್ಲು ಕ್ವಾರಿಯ ಕಪ್ಪು ಕಲ್ಲು ಸಾಗಿಸುವ ವಾಹನಗಳೇ ಆಶ್ರಯವಾಗಿದೆ.

ಖಾಸಗಿ ವಾಹನ, ಶಾಲಾ ವಾಹನ ಹೊರತುಪಡಿಸಿ ಬೆರಳೆಣಿಕೆ ವಾಹನಗಳಷ್ಟೇ ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಹಿಂದೆ ಮೂರು ಬಸ್‌ಗಳು ಸಂಚರಿಸುತ್ತಿತ್ತು. ರಸ್ತೆ ಹದಗೆಟ್ಟ ಕಾರಣ ಎರಡು ಬಸ್‌ಗಳು ಈ ಹಿಂದೆಯೇ ಸಂಚಾರ ಮೊಟಕುಗೊಳಿಸಿತ್ತು. ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಗಳೆಲ್ಲವೂ ವಿಫಲವಾಗಿವೆ. ಲೋಕೋಪಯೋಗಿ ಇಲಾಖೆ, ಶಾಸಕರು, ಸಂಸದರು ದುರಸ್ತಿ ನಡೆಯುವ ಬಗ್ಗೆ ಭರವಸೆ ನೀಡುವುದರಲ್ಲಿ ಕೈತೊಳೆದುಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಡಾಂಬರು ಕಾಣದೆ ಹಳ್ಳಗಳೇ ಗೋಚರ!
ಏತಡ್ಕ ಸಮೀಪದ ತುಂಬೆ, ಬೆಳೇರಿಗಳಲ್ಲಿ ರಸ್ತೆಯೇ ಹಳ್ಳವಾಗಿ ಮಾರ್ಪಟ್ಟಿದೆ. ಏತಡ್ಕ ಕಿನ್ನಿಂಗಾರು ನಡುವಿನ ಆನೆಪಳ್ಳ, ಶಾಂತಿಯಡಿ, ಅನೋತ್ತಡ್ಕ, ಬೀಜದಕಟ್ಟೆ, ದೊಂಪತ್ತಡ್ಕ, ಕಲ್ಪಣೆ ಹಾಗೂ ಕಿನ್ನಿಂಗಾರು ಕಲ್ಲಗದಿಂದ ನೆಟ್ಟಣಿಗೆ, ಕಾಯರುಪದವು ತನಕ ಡಾಂಬರು ಸಂಪೂರ್ಣ ಕಿತ್ತು ಹೋಗಿದೆ. ದ್ವಿಚಕ್ರ, ತ್ರಿಚಕ್ರ ವಾಹನಗಳು, ಇತರ ಲಘು ವಾಹನಗಳ ಸಂಚರಿಸಲು ಹಾಗೂ ಜನ ನಡೆದಾಡಲೂ ಪರದಾಟ ಮಾಡುವಂತಾಗಿದೆ. ರಸ್ತೆಯ ಶೋಚನೀಯ ಸ್ಥಿತಿಯಿಂದ ಆಂಬುಲೆನ್ಸ್, ರಿಕ್ಷಾ, ಬಾಡಿಗೆ ವಾಹನಗಳು ಈ ರಸ್ತೆಗೆ ಬರಲು ನಿರಾಕರಿಸುತ್ತಿವೆ. ಮಲೆನಾಡು ಹೈವೇ ನಿರ್ಮಾಣ ಯೋಜನೆಯಡಿ ಈ ರಸ್ತೆ ನವೀಕರಣ ನಡೆಯಲಿರುವುದಾಗಿ ಐದಾರು ತಿಂಗಳಿನಿಂದ ಹೇಳುತ್ತಲೇ ಬಂದಿದ್ದರೂ ದುರಸ್ತಿ ಪ್ರಕ್ರಿಯೆಗಳು ಇದುವರೆಗೂ ಆರಂಭವಾಗಿಲ್ಲ.

ರಸ್ತೆ ದುರಸ್ತಿ ಹಿನ್ನೆಲೆ ಈ ಹಿಂದೆಯೇ ಸರ್ಕಾರಕ್ಕೆ ಯೋಜನೆ ರೂಪಿಸಿ ನೀಡಲಾಗಿತ್ತು. ಪ್ರಸಕ್ತ ಅನುಮತಿ ಸಿಕ್ಕಿದ್ದು, 41 ಕೋಟಿ ರೂ. ಮೊತ್ತ ಮೀಸಲಿರಿಸಲಾಗಿದೆ. ಮಳೆಗಾಲ ಕೊನೆಗೊಳ್ಳುತ್ತಿರುವಂತೆ ರಸ್ತೆ ಡಾಂಬರು ಕಾಮಗಾರಿಗೆ ಚಾಲನೆ ನೀಡಲಾಗುವುದು. ಸದ್ಯ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಕಿಪ್ಬಿ(ಕೇರಳ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಫಂಡ್)ಗೆ ಕಾಮಗಾರಿ ಜವಾಬ್ದಾರಿ ನೀಡಲಾಗಿದೆ. ರಸ್ತೆ ಹದಗೆಟ್ಟಿರುವ ಕಾರಣ ಖಾಸಗಿ ಬಸ್ ಸೇವೆ ಮೊಟಕುಗೊಳಿಸಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ವಿಷಯ ಸಂಗ್ರಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಮಹೇಶ್, ಸಹಾಯಕ ಅಭಿಯಂತರರು, ಬದಿಯಡ್ಕ ವಲಯ ಲೋಕೋಪಯೋಗಿ ಇಲಾಖೆ.*

- Advertisement -

Stay connected

278,504FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....