More

    ಸೀರೆ ಉಡಿಸ್ಬೇಕಾ? 2 ಲಕ್ಷ ಪೇ ಮಾಡಿ!

    ಮುಂಬೈ: ಮೇಕಪ್​​, ಹೇರ್​ಸ್ಟೈಲ್​ ಮಾಡುವುದರ ಜತೆಗೆ ಸೀರೆಯನ್ನು ಉಡಿಸಲು ಬ್ಯೂಟಿಶಿಯನ್​ಗಳು ಹಣ ತೆಗೆದುಕೊಳ್ಳುತ್ತಾರೆ. ನೀವು ಎಂದಾದರೂ ಸೀರೆ ಉಡಿಸೋಕೆ ಅಂತಾನೇ ಚಾರ್ಜ್​​ ಮಾಡಿರುವುದನ್ನು ಕೇಳಿದ್ದೀರಾ? ಈ ಸುದ್ದಿ ಓದಿ…

    ಡಾಲಿ ಜೈನ್‌, ಈಕೆ ಓರ್ವ ಮೇಕ್‌ಓವರ್‌ ಸ್ಟೈಲಿಸ್ಟ್.‌ ಸೆಲೆಬ್ರಿಟಿಗಳ ಮದುವೆ, ಇತ್ಯಾದಿ ಕಾರ್ಯಕ್ರಮಗಳಲ್ಲಿ ಸೀರೆಯುಡಿಸುವ ಸ್ಪೇಷಲಿಸ್ಟ್‌. ಡಾಲಿ ಅವರಿಗೆ ಏನಿಲ್ಲ ಅಂದರೂ 300ಕ್ಕೂ ಅಧಿಕ ರೀತಿಯಲ್ಲಿ ಸೀರೆ ಉಡಿಸುತ್ತಾರೆ. ಸ್ಟಾರ್​ ನಟ-ನಟಿಯರ ಯಾವುದೇ ಕಾರ್ಯಕ್ರಮವಿದ್ದರೂ ಇವರ ಹಾಜರಿ ಇದ್ದೇ ಇರುತ್ತದೆ.

    ಇದನ್ನೂ ಓದಿ: VIDEO | ಜೀವಂತ ನವಿಲಿಗೆ ಚಿತ್ರಹಿಂಸೆ; ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು

    ಸೀರೆ ಉಡಿಸುವುದರಲ್ಲಿ ಪಳಗಿದ ಡಾಲಿ ಜೈನ್‌, ಅದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ಒಂದು ಸೀರೆ ಅಥವಾ ಬೇರೆ ಉಡುಗೆಯನ್ನು ಸೈಲ್‌ ಮಾಡಲು 35 ಸಾವಿರದಿಂದ 2 ಲಕ್ಷದ ವರೆಗೆ ಡಾಲಿ ಚಾರ್ಜ್‌ ಮಾಡುತ್ತಾರಂತೆ.

    ದೀಪಿಕಾ ಪಡುಕೋಣೆ, ಆಲಿಯಾ ಭಟ್‌, ಕಿಯಾರಾ ಅಡ್ವಾಣಿ, ಕತ್ರಿಕಾ ಕೈಫ್‌ ಮದುವೆಯಲ್ಲಿ ಇವರ ಕೈ ಚಳಕದಲ್ಲಿಯೇ ವಧು- ವರರ ಉಡುಪು ಕಂಗೊಳಿಸುತ್ತಿರುತ್ತದೆ.

    ಲಿಪ್ ಕಿಸ್​ಗೆ ಇದ್ಯಂತೆ 4500 ವರ್ಷಗಳ ಇತಿಹಾಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts