ರಾಯಚೂರು: ( Daali Dhananjaya ) ಮದುವೆ ಅನೌನ್ಸ್ ಮಾಡಿದ ಬಳಿಕ ರಾಯಚೂರಿನ ಮಂತ್ರಾಲಯಕ್ಕೆ ಭೇಟಿ ನೀಡಿದ ನಟ ಡಾಲಿ ಧನಂಜಯ್, ರಾಯರ ದರ್ಶನ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಬೆಳಗ್ಗೆನೆ ಅಲ್ಲಿ ರಾಯರ ದರ್ಶನ ಪಡೆದಿದ್ದಾರೆ. ತಮ್ಮ ಝೀಬ್ರಾ ಚಿತ್ರದ ಪ್ರಚಾರದ ಹಿನ್ನೆಲೆಯಲ್ಲಿಯೇ ಡಾಲಿ ಇಲ್ಲಿಗೆ ಬಂದಿದ್ದಾರೆ. ಹಾಗೆ ಬಂದಾಗ್ಲೆ ಡಾಲಿ ಇಲ್ಲಿ ರಾಯರ ದರ್ಶನ ಪಡೆದುಕೊಂಡಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ನಟ, ಉತ್ತರ ಕರ್ನಾಟಕ ಜನ ತೋರಿಸುವ ಪ್ರೀತಿ ರಫ್ ಆ್ಯಂಡ್ ಟಫ್ ಆದ್ರೂ ಅಗಾಧವಾದದ್ದು. ಖುಷಿಯಾಗುತ್ತೆ ರಾಯಚೂರಿಗೆ ಮತ್ತೆ ಮತ್ತೆ ಬರುತ್ತೇನೆ ಎಂದರು. ಝಿಬ್ರಾ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗುತ್ತೆ ಎಲ್ಲರೂ ನೋಡಿ. ಜನ ಸಿಕ್ಕಸಿಕ್ಕಲಿ ಮದುವೆ ಯಾವಾಗ ಅಂತ ಕೇಳ್ತಿದ್ರು. ಅದಕ್ಕೆ ಅನೌನ್ಸ್ ಮಾಡಿದ್ದೀನಿ ಎಲ್ಲರನ್ನೂ ಕರಿತೀನಿ. ಎಲ್ಲರೂ ಮದುವೆಗೆ ಬರಬೇಕು ಎಂದರು.
ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಮುಂದಿನ ವರ್ಷವೇ ನಡೆಯುತ್ತಿವೆ. ಫೆಬ್ರವರಿ-16 ರಂದು ಪ್ಲಾನ್ ಆಗಿದೆ. ಮೈಸೂರಿನಲ್ಲಿಯೇ ಈ ಜೋಡಿಯ ವಿವಾಹ ನೆರವೇರುತ್ತಿವೆ. ಒಟ್ಟಾರೆ, ಡಾಲಿ ತಮ್ಮ ಮದುವೆ ತಯಾರಿ ಮಾಡಿಕೊಳ್ತಿದ್ದಾರೆ. ಜೊತೆಗೆ ತಮ್ಮ ಚಿತ್ರಗಳ ಕೆಲಸದಲ್ಲೂ ಬ್ಯುಸಿ ಇದ್ದಾರೆ.
7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ರೆ ದೇಹ, ಮನಸ್ಸಿನ ಮೇಲೆ ಪರಿಣಾಮ! ಸಂಶೋಧನೆಯಿಂದ ಬಹಿರಂಗ.. Sleeping