ಆನಂದಪುರ: ಡೊಳ್ಳು ಕುಣಿತ ಕಲೆ ಬಗೆಗಿನ ಆಸಕ್ತಿ ಪ್ರಸ್ತುತ ಕ್ಷೀಣಿಸುತ್ತಿದೆ. ಯುವಕರು ಈ ಗಂಡುಕಲೆಯನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ತಿಳಿಸಿದರು.
ದಾಸಕೊಪ್ಪದಲ್ಲಿ ಪುನೀತ್ ರಾಜ್‌ಕುಮಾರ್ ಜನ್ಮದಿನ ನಿಮಿತ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಡೊಳ್ಳು ಕುಣಿತ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡೊಳ್ಳು ಕುಣಿತ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾದ ಕಲೆ. ಕಲಾವಿದರು ಇದರಲ್ಲಿ ತನ್ಮಯದಿಂದ ಬಾರಿಸುತ್ತ ನರ್ತಿಸುತ್ತಾರೆ. ವಿವಿಧ ಮಾಧ್ಯಮಗಳ ಪ್ರಭಾವ, ಕ್ರಿಕೆಟ್, ಮೊಬೈಲ್ ಗೇಮ್‌ಗಳ ಗೀಳಿನಿಂದ ಜಾನಪದ ಕಲೆಗಳಿಂದ ಯುವಕರು ವಿಮುಖರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಮಾತನಾಡಿ, ಬಳ್ಳಾರಿ, ಬೆಳಗಾವಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಹುಟ್ಟಿಕೊಂಡಿದ್ದ ಡೊಳ್ಳು ಕುಣಿತ ಕಲೆ ಮಲೆನಾಡಿನಲ್ಲಿ ಅತ್ಯಂತ ಜನಪ್ರಿಯವಾಯಿತು. ಮನಸ್ಸನ್ನು ಸೂರೆಗೊಳಿಸುವ ಅದ್ಭುತ ಕಲೆ ಇದು. ಭವಿಷ್ಯದಲ್ಲಿ ಇಂತಹ ಸ್ಪರ್ಧೆಗಳು ಇನ್ನಷ್ಟು ನಡೆಯುವ ಅಗತ್ಯವಿದೆ ಎಂದರು.
ಆನಂದಪುರ ಗ್ರಾಪಂ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ರೂಪಾ, ಹೊಸೂರು ಗ್ರಾಪಂ ಸದಸ್ಯರಾದ ಚೌಡಪ್ಪ, ಶರತ್ ನಾಗಪ್ಪ, ಸಾಗರದ ನವಚೇತನ ಟ್ರಸ್ಟ್ ಅಧ್ಯಕ್ಷ ಕೆ.ಪ್ರಶಾಂತ, ಬಗರ್‌ಹುಕುಂ ಸಮಿತಿ ಸದಸ್ಯ ರವಿಕುಮಾರ್, ಪುನೀತ್ ಅಭಿಮಾನಿ ಬಳಗದ ಅಧ್ಯಕ್ಷ ಜಯಪ್ರಕಾಶ, ಪದಾಧಿಕಾರಿಗಳಾದ ನಾಗರಾಜ್, ವಿನಯ್, ರಾಜು, ಪ್ರಶಾಂತ ಕೋವಿ, ಸತೀಶ್, ರಾಘವೇಂದ್ರ ಇದ್ದರು.
ಡೊಳ್ಳು ಕುಣಿತಕ್ಕೆ ಸಿಗಲಿ ಪ್ರಾಶಸ್ತ್ಯ

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping
sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…
ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water
coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…
ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife
Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…