ಚನ್ನರಾಯಪಟ್ಟಣದಲ್ಲಿ ಯೋಗ ಜಾಥಾ


ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಪ್ರತಿದಿನ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಸಮತೋಲನ ಹೊಂದಿ, ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ ಎಂದು ಪುರಸಭೆ ಸದಸ್ಯ ಸಿ.ಎನ್.ಶಶಿಧರ್ ಹೇಳಿದರು.
ಪಟ್ಟಣದಲ್ಲಿ ಶಾಲಿನಿ ವಿದ್ಯಾಸಂಸ್ಥೆ ಹಾಗೂ ವಿವೇಕಾನಂದ ಯೋಗ ಶಾಲೆಯಿಂದ ಸಾರ್ವಜನಿಕರಲ್ಲಿ ಯೋಗ ಕುರಿತು ಅರಿವು ಮೂಡಿಸುವ ಸಲುವಾಗಿ ಗುರುವಾರ ಹಮ್ಮಿಕೊಂಡಿದ್ದ ಯೋಗ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಬದುಕಿನ ಜಂಜಾಟಗಳ ನಡುವೆ ಯೋಗಕ್ಕಾಗಿ ಪ್ರತಿದಿನದ ಒಂದು ತಾಸನ್ನು ಮೀಸಲಿಟ್ಟರೆ ಮಾತ್ರ ಮಾತ್ರೆ-ಔಷಧ ರಹಿತದ ಜೀವನ ನಮ್ಮದಾಗಿಸಿಕೊಳ್ಳಬಹುದು. ರಾಸಾಯನಿಕಯುಕ್ತ ಆಹಾರಗಳ ಸೇವನೆ ಹಾಗೂ ಒತ್ತಡದ ಬದುಕಿನಿಂದ ನಾವು ಅಲ್ಪಾಯುಷಿ ಗಳಾಗಿದ್ದೇವೆ ಎಂದರು.
ಎಷ್ಟೇ ಕಾರ್ಯಗಳ ಒತ್ತಡವಿದ್ದರೂ ಪ್ರತಿದಿನ ಒಂದು ತಾಸು ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಮತೋಲನ ಹೊಂದಿ ಆರೋಗ್ಯವನ್ನು ಸುಸ್ಥಿರವಾಗಿ ಹೊಂದಲು ಸಾಧ್ಯವಿದೆ ಎಂದರು. ಶಾಲಿನಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಿ.ಎನ್.ಅಶೋಕ್ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಕಾಶ್‌ಜೈನ್, ನವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಪಟೇಲ್ ಮಂಜುನಾಥ್, ಸಾಮಾ ಜಿಕ ಹೋರಾಟಗಾರ ಪುಟ್ಟಣ್ಣ, ಯೋಗ ಒಕ್ಕೂಟದ ಕಾರ್ಯದರ್ಶಿ ಸಿ.ಎಸ್.ಮನೋಹರ್, ಪ್ರಕಾಶ್, ಲ.ನಾ.ಗುಪ್ತ ಹಾಜರಿದ್ದರು.

Leave a Reply

Your email address will not be published. Required fields are marked *