ನಿಷ್ಠೆಯಿಂದ ಮಾಡುವೆ ಗುರುವಿನ ಕಾರ್ಯಕ್ರಮ

Doing faithfully is Guru's program

ತೇರದಾಳ: ಒಗ್ಗಟ್ಟಿನಿಂದ ಮಾಡಿದ ಕಾರ್ಯಗಳು ಯಶಸ್ವಿಯಾಗಲೇಬೇಕು. ಒಗ್ಗಟ್ಟಿನಲ್ಲಿ ತೃಪ್ತಿ-ಸಮಾಧಾನವಿರುತ್ತದೆ. ದೇವಸ್ಥಾನದ ಲೋಕಾರ್ಪಣೆ ನಿಮಿತ್ತ ಬಸವ ಪುರಾಣದಂತ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ತೇರದಾಳ ಇತಿಹಾಸದಲ್ಲಿ ಮತ್ತೊಂದು ದಾಖಲೆ ಸೇರಲಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಪಟ್ಟಣದಲ್ಲಿ ನ.11 ರಂದು ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ದೇವಸ್ಥಾನ ಲೋಕಾರ್ಪಣೆಗೊಳ್ಳುವ ಹಿನ್ನೆಲೆ ಅಲ್ಲಮಪ್ರಭುದೇವರ ಕಲ್ಯಾಣ ಮಂಟಪದಲ್ಲಿ ಮಠಾಧೀಶರ ಸಮ್ಮುಖದಲ್ಲಿ ಭಾನುವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ತಿಂಗಳ ಪರ್ಯಂತ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಎಲ್ಲರೂ ತನು, ಮನ, ಧನದಿಂದ ಪಾಲ್ಗೊಳ್ಳಬೇಕು. ನನಗೆ ಹೇಳಿದ ಕಾರ್ಯವನ್ನು ನಿಷ್ಠೆಯಿಂದ ಮಾಡುವೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಬೆಳಗಾವಿ ಜಿಲ್ಲೆ ಹಂದಿಗುಂದ- ಆಡಿ ಮಠದ ಶಿವಾನಂದ ಶ್ರೀಗಳು, ಶೇಗುಣಿಸಿ ವಿರಕ್ತಮಠದ ಡಾ. ಮಹಾಂತಪ್ರಭು ಶ್ರೀಗಳು, ಕುರುಹಿನಶೆಟ್ಟಿ ಸಮಾಜದ ಜಗದ್ಗುರು ಶಿವಶಂಕರ ಶಿವಾಚಾರ್ಯ, ಚಿಮ್ಮಡದ ಪ್ರಭು ಶ್ರೀ, ಹಳಿಂಗಳಿ ಕಮರಿಮಠದ ಶಿವಾನಂದ ಶ್ರೀಗಳು, ತೇರದಾಳ ಹಿರೇಮಠದ ಗಂಗಾಧರ ದೇವರು, ಜಮಖಂಡಿ ಕೊಣ್ಣೂರಿನ ಹೊರಗಿನಮಠದ ಡಾ. ವಿಶ್ವಪ್ರಭು ಶ್ರೀ, ಜಮಖಂಡಿ ಶಾಸಕ, ನಾಡೋಜ ಜಗದೀಶ ಗುಡಗುಂಟಿಮಠ, ಶಾಸಕ ಸಿದ್ದು ಸವದಿ, ಅರ್ಚಕರ ಸಮಿತಿ ಅಧ್ಯಕ್ಷ ಗುಹೇಶ್ವರ ಪುರಾಣಿಕಮಠ, ಅರ್ಚಕ ಪರಯ್ಯ ಮೇಲಿನಮನಿ ಮತ್ತಿತರರು ಅಲ್ಲಮಪ್ರಭುದೇವರ ಭಾವಚಿತ್ರಕೆ ಪುಷ್ಪಾರ್ಚನೆ ಮಾಡಿದರು. ಭಿತ್ತಿಪತ್ರ ಮತ್ತು ಕರಪತ್ರಗಳ ಬೃಹತ್ ಪ್ರತಿಯನ್ನು ಜಯಘೋಷಗಳೊಂದಿಗೆ ಬಿಡುಗಡೆಗೊಳಿಸಲಾಯಿತು.

ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಜಮಖಂಡಿ ಶಾಸಕ ನಾಡೋಜ ಜಗದೀಶ ಗುಡಗುಂಟಿಮಠ ಮಾತನಾಡಿ, ಹಂದಿಗುಂದ, ಶೇಗುಣಸಿ, ಚಿಮ್ಮಡ , ಓಲೇಮಠ, ಹಳಿಂಗಳಿ ಶ್ರೀಗಳು, ಗಂಗಾಧರ ದೇವರು ಸೇರಿ ಪೂಜ್ಯರ ಗೌರವಾಧ್ಯಕ್ಷತೆಯಲ್ಲಿ ಶಾಸಕರದ್ವಯರು, ಅರ್ಚಕರ ಸಮಿತಿ ಅಧ್ಯಕ್ಷ, ಪ್ರಸಾದ ಸಮಿತಿ ಅಧ್ಯಕ್ಷರು, ಎಲ್ಲ ಸಮಾಜಗಳ ಮುಖಂಡರು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರನ್ನೊಳಗೊಂಡಂತೆ ಕಾರ್ಯಕ್ರಮದ ಕಾರ್ಯಕಾರಿ, ಸ್ವಾಗತ ಸಮಿತಿ, ವೇದಿಕೆ ಸಮಿತಿ, ಅನ್ನಪ್ರಸಾದ ಸಮಿತಿಗಳನ್ನು ರಚಿಸಲಾಗುವುದು. ತಮ್ಮೆಲ್ಲರ ಸಲಹೆ-ಸೂಚನೆಗಳಿಗೆ ಮುಕ್ತ ಅವಕಾಶ ಇದೆ ಎಂದು ತಿಳಿಸಿದರು.

ಬಳಿಕ ಎಲ್ಲ ಶ್ರೀಗಳು ಆಶೀರ್ವಚನ ನೀಡಿ, ಬಳ್ಳಿಗಾವಿಯಿಂದ ಪ್ರಭುಜ್ಯೋತಿಯ ಆಗಮನ, ಬಸವ ಪುರಾಣ, ಭವ್ಯ ವಚನೋತ್ಸವ, ಸರ್ವಧರ್ಮ ಸಮ್ಮೇಳನ, ಮಹಿಳಾ ಸಮಾವೇಶ, ಸೈನಿಕ ಸಮಾವೇಶ, ರೈತ ಸಮಾವೇಶ, ಯುವಜನೋತ್ಸವದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಇದ್ದರು.

Share This Article

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…

ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…