ಭದ್ರತಾ ಪಡೆಯ ಸಿಬ್ಬಂದಿ ವಿರುದ್ಧ ಅಮೆರಿಕ ಪ್ರಜೆ ಬೇಸರ: ಅಂಗವಿಕಲೆ ಎಂದರೂ ಎದ್ದು ನಿಲ್ಲಲು ಒತ್ತಾಯಿಸಿದರು ಎಂದು ದೂರು

Latest News

ಗವಿಶ್ರೀಗಳ ಸದ್ಭಾವನಾ ಪಾದಯಾತ್ರೆ, ಸ್ವಚ್ಛತೆಗೆ ಭಕ್ತರ ಹೆಚ್ಚಿನ ಆದ್ಯತೆ

ಕಾರಟಗಿ: ಹತ್ತು ದಿನಗಳ ಸದ್ಭಾವನಾ ಪಾದಯಾತ್ರೆ, ಆಧ್ಯಾತ್ಮಿಕ ಪ್ರವಚನ ಕೈಗೊಂಡಿರುವ ಕೊಪ್ಪಳದ ಗವಿಶ್ರೀ ಆಗಮನದ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳ ಬೀದಿ ಸಿಂಗಾರಗೊಳ್ಳುತ್ತಿದ್ದು, ಜನ...

ಆರ್ಥಿಕ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಕಾರಣ – ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಡಾ.ಶೇಖರಗೌಡ ಮಾಲಿಪಾಟೀಲ್ ಶ್ಲಾಘನೆ

ತಾವರಗೇರಾ: ರೈತರ ಭಾಗವಹಿಸುವಿಕೆ, ಆರ್ಥಿಕ ಅಭಿವೃದ್ಧಿ ಜತೆಗೆ ಕೃಷಿಯಲ್ಲಿ ಯಶಸ್ಸು ಪಡೆಯುವಲ್ಲಿ ಸಹಕಾರ ಕ್ಷೇತ್ರ ಕಾರಣವಾಗಿದೆ ಎಂದು ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ...

ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಗುಂಪುಗಾರಿಕೆಗೆ ಬೇಸತ್ತು ಬಿಜೆಪಿ ಸೇರಿದೆ- ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್

ರಾಯಚೂರು: ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಗುಂಪುಗಾರಿಕೆ, ಹಿರಿತನಕ್ಕೆ ಸಿಗದ ಬೆಲೆ ಮತ್ತು ಹೈಕಮಾಂಡ್ ಧೋರಣೆಯಿಂದ ಬೇಸರವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ವಿನಾ, ಸಮ್ಮಿಶ್ರ...

ಶತಮಾನದಷ್ಟು ಹಳೆಯ ಚರ್ಚ್​ ಬೆಂಕಿಗೆ ಆಹುತಿ; ಜ್ವಾಲೆ ಕಾಣಿಸುತ್ತಲೇ ಒಳಗೆ ಹೋದ ವೃದ್ಧ ದಂಪತಿ ಸಾವು..ಬೆಂಕಿ ನೋಡಿ ಕೂಡ ಅವರು ಒಳಹೋಗಿದ್ದೇಕೆ ಗೊತ್ತಾ?

ಶಿಲ್ಲಾಂಗ್​: ಶತಮಾನದಷ್ಟು ಹಳೆಯ ಚರ್ಚ್​ ಬೆಂಕಿಗೆ ಆಹುತಿಯಾಗಿ, ವೃದ್ಧ ದಂಪತಿ ಸಜೀವ ದಹನಗೊಂಡ ದುರ್ಘಟನೆ ಮೇಘಾಲಯದ ಶಿಲ್ಲಾಂಗ್​ನಲ್ಲಿ ಇಂದು ಮುಂಜಾನೆ ನಡೆದಿದೆ. ಶಿಲ್ಲಾಂಗ್​ನ ಕ್ವಾಲಪಟ್ಟಿ ಪ್ರದೇಶದಲ್ಲಿ 1902ರಲ್ಲಿ...

ಕಾರ್ಯಕರ್ತರ ಭಾವನೆ ಅರಿತು ಸಂಸದ ಸಂಗಣ್ಣ ಹೇಳಿಕೆ ನೀಡಲಿ- ಬಿಜೆಪಿ ಎಸ್ಟಿ ಮೋರ್ಚಾ ತಾಲೂಕು ಅಧ್ಯಕ್ಷ ಆರ್.ಸಿದ್ದನಗೌಡ ತುರ್ವಿಹಾಳ

ಸಿಂಧನೂರು: ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತರಿದ್ದು, ಪಕ್ಷದ ಗೆಲುವಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಆರ್.ಬಸನಗೌಡರು...

ನವದೆಹಲಿ: ಅಮೆರಿಕದ ವಿಕಲಾಂಗ ಪ್ರಜೆಯೊಬ್ಬಳು ದೆಹಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಿರುದ್ಧ ಬೇಸರ ವ್ಯಕ್ತಪಡಿಸಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮುಖ್ಯಸ್ಥರಿಗೆ ಇ-ಮೇಲ್​ ಮೂಲಕ ದೂರು ನೀಡಿದ್ದಾರೆ.

2006ರಲ್ಲಿ ಬೆನ್ನುಹುರಿ ಸಮಸ್ಯೆಗೆ ತುತ್ತಾದ ದಿನದಿಂದ ನಿಂತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವ್ಹೀಲ್​ಚೇರ್​ ಆಶ್ರಯ ಪಡೆದಿದ್ದೇನೆ ಎಂದು ಹೇಳಿದರು ಭದ್ರತಾ ಸಿಬ್ಬಂದಿ ತಪಾಸಣೆಗಾಗಿ ನಿಲ್ಲುವಂತೆ ಹೇಳಿದ್ದಲ್ಲದೆ, ನಾಟಕವಾಡುತ್ತಿದ್ದೇನೆಂದು ಅಮಾನವೀಯವಾಗಿ ನಡೆದುಕೊಂಡರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಮೆರಿಕ ಮೂಲದ ವಿಕಲಾಂಗೆ ಕಾರ್ಯಕರ್ತೆಯಾಗಿರುವ ವೈರಲಿ ಮೋದಿ(28) ದೆಹಲಿಯಿಂದ ಮುಂಬೈಗೆ ಪ್ರಯಾಣ ಬೆಳೆಸುವಾಗ ಈ ಘಟನೆ ನಡೆದಿದೆ.

ಈ ಬಗ್ಗೆ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿರುವ ವೈರಲಿ ಮೋದಿ, ನಾನು ವಿಕಲಾಂಗೆ ಆಗಿರುವುದರಿಂದ ನಾನು ವೈಯಕ್ತಿಕವಾಗಿ ವ್ಹೀಲ್​ ಚೇರ್​ ಅನ್ನು ನನ್ನ ಜತೆಯಲ್ಲಿ ಕೊಂಡೊಯ್ಯುತ್ತೇನೆ. ಈಗಾಗಲೇ ವ್ಹೀಲ್​ಚೇರ್​ ಅನ್ನು ತಪಾಸಣೆ ಮಾಡಲಾಗಿದೆ. ವಿಮಾನದಲ್ಲಿ ನನ್ನನ್ನು ಸೀಟಿನಲ್ಲಿ ಕೂರಿಸಲು ಓರ್ವ ಸಹಾಯಕನನ್ನು ನಾನು ನೇಮಿಸಿದ್ದೇನೆ. ಭದ್ರತಾ ತಪಾಸಣೆ ವಿಭಾಗಕ್ಕೆ ನಾವು ತೆರಳಿದಾಗ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಸಿಬ್ಬಂದಿಯಿಂದ ನಾನು ಕೆಟ್ಟ ಅನುಭವವನ್ನು ಎದುರಿಸಬೇಕಾಯಿತು ಎಂದು ಸಿಎಸ್​ಐಎಫ್​ ಮುಖ್ಯಸ್ಥರಿಗೆ ಬರೆದಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನನ್ನನ್ನು ನಿಲ್ಲುವಂತೆ ಮಹಿಳಾ ಸಿಬ್ಬಂದಿ ಒತ್ತಾಯ ಮಾಡಿದರು. ನಿಲ್ಲಲು ಸಾಧ್ಯವಾಗುವುದಿಲ್ಲ ಎಂದು ನಾನು ಮತ್ತು ನನ್ನ ಸಹಾಯಕ ಸಾಕಷ್ಟು ಬಾರಿ ಮನವಿ ಮಾಡಿದರೂ ಕಿವಿಗೊಡಲಿಲ್ಲ. ವ್ಹೀಲ್​ ಚೇರ್​ ಬಳಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣಿಸಿದ್ದೇನೆ ಎಂದು ಸಾಬೀತುಪಡಿಸುವ ನನ್ನ ಪಾಸ್‌ಪೋರ್ಟ್ ಅನ್ನು ತೋರಿಸಲು ಮುಂದಾದೆ. ಆದರೆ, ಆಕೆ ಹಿರಿಯ ಅಧಿಕಾರಿಗೆ ಕರೆ ಮಾಡಿ, ನಾನು ನಾಟಕವಾಡುತ್ತಿದ್ದೇನೆ ಎಂದು ಹೇಳಿದರು ಎಂದು ಆರೋಪಿಸಿದ್ದಾರೆ.

ನಾನು ಮತ್ತೆ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ. ಆದರೆ, ನನ್ನತ್ತ ನೋಡಿ ಕೂಗಾಡಿದಳು. ಅವರ ಹೆಸರು ಏನೆಂದು ತಿಳಿಯುವ ಪ್ರಯತ್ನ ಮಾಡಿದಾದರೂ ಹೆಸರಿನ ಪಟ್ಟಿಯನ್ನು ನೋಡಲು ಸಾಧ್ಯವಾಗಲಿಲ್ಲ. ಕೊನೆಗೆ ಹಿರಿಯ ಅಧಿಕಾರಿ ಬಂದು ಕೈಯಿಂದ ಪರಿಶೀಲನೆ ನಡೆಸಿ ನನಗೆ ತೆರಳಲು ಅನುಮತಿ ನೀಡಿದರು ಎಂದು ಹೇಳಿಕೊಂಡಿದ್ದಾರೆ.

ಘಟನೆ ಬಗ್ಗೆ ಸಿಐಎಸ್​ಎಫ್​ ಮುಖ್ಯಸ್ಥರು ಕೂಡು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವೈರಲಿ ಮೋದಿ ತಿಳಿಸಿದ್ದಾರೆ.

ದೆಹಲಿಯಲ್ಲಿರುವ ಸಿಐಎಸ್​ಎಫ್​ ಮುಖ್ಯಸ್ಥರು ಕರೆ ಮಾಡಿ ವಿಷಾದ ವ್ಯಕ್ತಪಡಿಸಿದರು. ಅಲ್ಲದೆ, ದೆಹಲಿಗೆ ಬಂದಾಗ ಭೇಟಿಯಾಗುವಂತೆ ಹೇಳಿದರು. ವಿಮಾನ ನಿಲ್ದಾಣಕ್ಕೆ ಬಂದಾಗ ಪ್ರಯಾಣಿಕರ ಜತೆ ಸೌಮ್ಯವಾಗಿ ವರ್ತಿಸುವಂತೆ ತಿಳಿಹೇಳುವುದಾಗಿ ಭರವಸೆ ನೀಡಿದರು ಎಂದು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಮೋದಿ ಬರೆದುಕೊಂಡಿದ್ದಾರೆ.

ಕಳೆದ ವರ್ಷವೂ ಭಾರತಕ್ಕೆ ಬಂದಿದ್ದ ಮೋದಿ, ಮುಂಬೈ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ನನ್ನನ್ನು ವ್ಹೀಲ್​ ಚೇರ್​ನಿಂದ ಎತ್ತಿಳಿಸಿದ್ದರು ಎಂಬ ಆರೋಪ ಮಾಡಿದ್ದರು. ಆದರೆ, ಆರೋಪವನ್ನು ಕೇಂದ್ರ ಪಡೆ ತಿರಸ್ಕರಿಸಿತ್ತು. (ಏಜೆನ್ಸೀಸ್​)

- Advertisement -

Stay connected

278,517FansLike
570FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....