ಕಾಲು ಕಳೆದುಕೊಂಡ ಒಡೆಯನಿಗೆ ನೆರವಾಗುತ್ತಿದೆ ಈ ಶ್ವಾನ

>

ನವದೆಹಲಿ: ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಒಂದು ಹೊತ್ತಿನ ಊಟ ಹಾಕಿದರೆ ಸಾಕು ಸಲುಹಿದ ಒಡೆಯನ ಕಷ್ಟಕ್ಕೆ ಮಿಡಿಯುವ ಮೃದು ಮನಸ್ಸು ಶ್ವಾನನದ್ದು. ಮಾನವೀಯತೆ ಪುಸ್ತಕಕ್ಕೆ ಸೀಮಿತವಾಗುತ್ತಿರುವ ಕಾಲದಲ್ಲಿ ನಾಯಿಯನ್ನು ನೋಡಿ ಮನುಷ್ಯ ಕಲಿಯಬೇಕಾದದ್ದು ಬೇಕಾದಷ್ಟಿದೆ.

ಹೌದು, ನಾಯಿಯ ಪ್ರಾಮಾಣಿಕತೆಗೆ ಸಾಟಿಯೇ ಇಲ್ಲ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಕಾಲು ಸ್ವಾಧೀನ ಕಳೆದುಕೊಂಡ ಮನೆಯ ಒಡೆಯನನ್ನು ವೀಲ್​ಚೇರ್​ ಮೇಲೆ ಕೂರಿಸಿಕೊಂಡು ತಳ್ಳುತ್ತಾ ಸಾಗುತ್ತಿರುವ ದೃಶ್ಯ ನೋಡುಗರ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುವಂತೆ ಮಾಡುತ್ತದೆ.

ಫಿಲಿಫೈನ್ಸ್​ ದೇಶದ ಬೀದಿಯೊಂದರಲ್ಲಿ ಈ ದೃಶ್ಯವನ್ನು ಮಿಸಿಸ್​ ಫೈತ್​ ಎಲ್​ ರೆವಿಲ್ಲಾ ಎಂಬ ಎಂಬಿಎ ವಿದ್ಯಾರ್ಥಿ ಮೊಬೈಲ್​​ನಲ್ಲಿ ಸೆರೆಹಿಡಿದು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾಳೆ. ಈಗಾಗಲೇ ಲಕ್ಷಾಂತರ ಜನರು ಈ ವಿಡಿಯೋವನ್ನು ನೋಡಿದ್ದು, ಮೆಚ್ಚುಗೆಗಳ ಸುರಿಮಳೆಗೈದಿದ್ದಾರೆ.

ನಾಯಿಯ ಒಡೆಯ ಡಾನಿಲೊ ಅಲಾರ್ಕೊನ್​(46) ಎಂಬಾತ ಒಂದು ವರ್ಷದ ಹಿಂದೆ ಬೈಕ್​ ಅಪಘಾತಕ್ಕೀಡಾಗಿ ಬೆನ್ನುಮೂಳೆಯ ನೋವಿನಿಂದ ಬಳಲುತ್ತಿದ್ದು, ಘಟನಾ ನಂತರ ಎಲ್ಲಿಗೂ ಓಡಾಡದ ಸ್ಥಿತಿಯಲ್ಲಿದ್ದಾರೆ. ಆತನ ನಾಯಿ ಡಿಗಾಂಗ್​ ಹುಟ್ಟಿನಿಂದಲೂ ಆತನ ಜತೆಯಲ್ಲಿಯೇ ಇದೆ. (ಏಜೆನ್ಸೀಸ್​)

Heartwarming scene of a dog’s unconditional love towards its master. Just this ordinary afternoon, we felt blessed to have witnessed this extra ordinary sight of an amazing creature helping its master maneuver his wheelchair along seminary drive. I mean, I thought it only happens in TV shows, this very scenario. I’m out of words to describe my emotions right now. May the good Lord will bless them both. P.S.I’m holding my baby who’s sleeping in my arms that’s why I didn’t get a good shot✌🏻

Misis Faith L Revilla ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಜೂನ್ 30, 2018

Naka tail kami ke kuya Danilo medyo malayo kasi baka matakot si Digong (dog)“For licensing/commercial usage, please contact [email protected]

Misis Faith L Revilla ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಜುಲೈ 11, 2018

Nagpagupit na si Kuya Danilo☺️

Misis Faith L Revilla ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಜುಲೈ 11, 2018

Picture picture😊

Misis Faith L Revilla ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜುಲೈ 12, 2018