ದೇಶದಲ್ಲೇ ಮೊದಲ ನಾಯಿಗಳ ಪಾರ್ಕ್​ ಸಿದ್ಧ… ಶ್ವಾನಗಳಿಗೆ ತರಬೇತಿ, ವ್ಯಾಯಾಮಕ್ಕೆ ಅನುಕೂಲ

ಹೈದರಾಬಾದ್​: ದೇಶದಲ್ಲೇ ಮೊದಲ ಬಾರಿಗೆ ಹೈದರಾಬಾದ್​ನಲ್ಲಿ ನಾಯಿಗಳಿಗಾಗಿ ಒಂದು ವಿಶೇಷ ಪಾರ್ಕ್​ ಸಿದ್ಧವಾಗಿದೆ.
ಹೈದರಾಬಾದ್​ ಪುರಸಭೆಯಿಂದ ಸುಮಾರು 1.3 ಎಕರೆ ಪ್ರದೇಶದಲ್ಲಿ, 1.1 ಕೋಟಿ ರೂ.ವೆಚ್ಚದಲ್ಲಿ ಪಾರ್ಕ್​ ನಿರ್ಮಿಸಲಾಗಿದ್ದು ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿದೆ.

ತ್ಯಾಜ್ಯಗಳನ್ನು ಚೆಲ್ಲುವ ಸ್ಥಳವನ್ನು 1.1 ಕೋಟಿ ರೂ.ವೆಚ್ಚದಲ್ಲಿ ನಾಯಿಗಳ ಪಾರ್ಕ್​ಆಗಿ ಬದಲಿಸಲಾಗಿದೆ. ಇದು ದೇಶದಲ್ಲೇ ಮೊದಲು. ಉದ್ಘಾಟನೆ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ ಎಂದು ಪುರಸಭೆ ಪಶ್ಚಿಮ ವಲಯದ ಆಯಕ್ತರು ತಿಳಿಸಿದ್ದಾರೆ.

ಈ ಪಾರ್ಕ್​ನಲ್ಲಿ ನಾಯಿಗಳ ತರಬೇತಿ, ವ್ಯಾಯಾಮಕ್ಕೆ ಅಗತ್ಯವಿರುವ ಸಲಕರಣೆಗಳನ್ನೂ ಜೋಡಿಸಲಾಗಿದೆ. ನಾಯಿಗಳಿಗೆ ಕೊಳ, ಎರಡು ಹುಲ್ಲುಹಾಸುಗಳು, ಆಂಫಿಥಿಯೇಟರ್​, ಸಣ್ಣ ಹಾಗೂ ದೊಡ್ಡ ನಾಯಿಗಳಿಗೆ ಪ್ರತ್ಯೇಕ ಆವರಣಗಳನ್ನು ಸಿದ್ಧಗೊಳಿಸಲಾಗಿದೆ. ಇಂಡಿಯಾದ ಕೆನ್ನೆಲ್​ ಆಫ್​ ಕ್ಲಬ್​ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಕಳೆದ ಒಂದು ವರ್ಷದಿಂದ ಪಾರ್ಕ್​ ನಿರ್ಮಾಣ ಕಾರ್ಯ ಮಾಡಲಾಗಿತ್ತು.