More

  ಪ್ರಸಿದ್ಧ ಘಾಟಿ ಸುಬ್ರಮಣ್ಯ ದನಗಳ ಜಾತ್ರೆ ತೆರವುಗೊಳಿಸಿದ ಜಿಲ್ಲಾಡಳಿತ

  ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ದ ಘಾಟಿ ದನಗಳ ಜಾತ್ರೆ ಸೇರಿದ್ದ ಜಾನುವಾರಗಳನ್ನು ಈಗ ಜಿಲ್ಲಾಡಳಿತ ತೆರವುಗೊಳಿಸಿದೆ. ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ದ ಘಾಟಿಯಲ್ಲಿ ದನಗಳ ಜಾತ್ರೆಗೆ ಎಂದು ರೈತರು ಸೇರಿದ್ದರು.

  ಸದ್ಯಕ್ಕೆ ಜನವರಿ 30ರ ವರೆಗೆ ಜಾತ್ರೆ‌ ಮಾಡದಂತೆ ಜಿಲ್ಲಾಡಳಿತ ಆದೇಶ ಮಾಡಿದೆ. ಎಲ್ಲಕಡೆಯೂ ಕಾಲುಬಾಯಿ ರೋಗ ವ್ಯಾಪಕವಾಗಿ ಹರಡಿರುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಧನಗಳ ಜಾತ್ರೆಗೆ ನಿಷೇಧ ಹೇರಲಾಗಿತ್ತು. ಕಳೆದ ತಿಂಗಳಲ್ಲೇ ಘಾಟಿಯಲ್ಲಿ ದನಗಳ ಜಾತ್ರೆ ಮಾಡಬೇಕಿತ್ತು. ಆದರೆ ನಿಷೇಧದ ಹಿನ್ನಲೆ ಹಾಗೂ ಘಾಟಿ ರಥೋತ್ಸವದ ಹಿನ್ನಲೆ ರೈತರಿಗೆ‌ ಜಾತ್ರೆಗೆ ಅವಕಾಶ ನೀಡಿರಲಿಲ್ಲ,

  ಇದೀಗ ಸ್ವಯಂಪ್ರೇರಿತರಾಗಿ ರೈತರು ದನಗಳ ಜಾತ್ರೆ ನಡೆಸಲು‌ ಟೆಂಟ್​ಗಳನ್ನು ನಿರ್ಮಿಸಿದ್ದರು. ಈ ದನಗಳ ಜಾತ್ರೆಗೆ ಆಂಧ್ರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ದನಗಳು ಆಗಮಿಸಿದ್ದವು. ಆದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಜಾತ್ರೆಗೆ ಬಂದಿದ್ದ ರೈತರನ್ನ ಸ್ಥಳದಿಂದ ಖಾಲಿ ಮಾಡಿಸಿದ್ದಾರೆ.

  ಜಿಲ್ಲಾಡಳಿತ ಹಾಗೂ ಪೊಲೀಸ್​ ಅಧಿಕಾರಿಗಳ ಈ ಕ್ರಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ತಮ್ಮ ಸಂಪ್ರದಾಯವನ್ನು ಪಾಲಿಸಲು ಬಿಡುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

  See also  ಉತ್ತಮ ಚಿಂತನೆಯಿಂದ ಸತ್ಪಲ ಪ್ರಾಪ್ತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts