ದೊಡವಾಡ: ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ದೊಡವಾಡ: ಗ್ರಾಮ ಪಂಚಾಯಿತಿ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಕ್ಕುಬಾಯಿ ಕಾಳಿ ಹಾಗೂ ಉಪಾಧ್ಯಕ್ಷರಾಗಿ ಗಂಗಪ್ಪ ಈರಪ್ಪ ಕಂಬಾರ ಅವಿರೋಧ ಆಯ್ಕೆಯಾಗಿದ್ದಾರೆ.

ಜಿಪಂ ಸದಸ್ಯ ಶಂಕರ ಮಾಡಲಗಿ ಹಾಗೂ ತಾಪಂ ಸದಸ್ಯ ಸಂಗಯ್ಯ ದಾಬಿಮಠ ಅವರ ನೇತೃತ್ವದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಮಹೇಶ ಸಿ.ಉಣಿ ಹಾಗೂ ಸಾಹಾಯಕ ಅಧಿಕಾರಿಯಾಗಿ ದೊಡವಾಡ ಪಿಡಿಒ ಎಸ್.ಐ.ದಾನಪ್ಪನವರ ಆಯ್ಕೆಯನ್ನು ಘೋಷಿಸಿದರು.

ಈ ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಒಟ್ಟು 24 ಸದಸ್ಯರ ಪೈಕಿ 21 ಸದಸ್ಯರು ಹಾಜರಿದ್ದರು. ಅದರಲ್ಲಿ ಜೆಡಿಎಸ್ ಬೆಂಬಲಿತ 18 ಸದಸ್ಯರು ಇದ್ದರು. ಊರಿನ ಪ್ರಮುಖರಾದ ಮುದಕಪ್ಪ ತುಪ್ಪದ, ಮಾದೇವಪ್ಪ ಹತ್ತಿಕಟಗಿ, ಮುದಕಪ್ಪ ಮಾಡಲಗಿ, ಅಜ್ಜಪ್ಪ ಪಟಾತ, ಭೀಮರಾವ್ ವನಹಳ್ಳಿ, ಹಾಗೂ ಗ್ರಾಮಸ್ಥರು ಮತ್ತು ಜಿಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

Leave a Reply

Your email address will not be published. Required fields are marked *