ಔಷಧೀಯ ಸಸ್ಯಗಳ ಸಂರಕ್ಷಣೆಗೆ ದಾಖಲೀಕರಣ ಅಗತ್ಯ: ಕುಲಪತಿ ಡಾ.ಎಂ.ಆರ್.ಗಂಗಾಧರ್

blank

ಮೈಸೂರು: ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಅವುಗಳ ಬಗೆ ತಿಳಿವಳಿಕೆ ಮೂಡಿಸಲು ದಾಖಲೀಕರಣ ಅಗತ್ಯ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಆರ್.ಗಂಗಾಧರ್ ಅಭಿಪ್ರಾಯಪಟ್ಟರು.
ನಗರದ ಶಾರದಾವಿಲಾಸ ಫಾರ್ಮಸಿ ಕಾಲೇಜಿನ ಪ್ರೊ. ಚಿನ್ನಸ್ವಾಮಿ ಶೆಟ್ಟಿ ಸಮ್ಮೇಳನ ಸಭಾಂಗಣದಲ್ಲಿ ಜಿಜ್ಞಾಸ ಕರ್ನಾಟಕ ಹಾಗೂ ಫಾರ್ಮವಿಷನ್ ಸಂಸ್ಥೆೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅನ್ವೇಷಣಾ-ಆಯುರ್ವೇದಿಕ ಗಿಡಮೂಲಿಕೆಯ ಅಭಿವೃದ್ಧಿಯಲ್ಲಿ ಹರ್ಬಲ್ ಮೋನೋಗ್ರಾಫ್ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹಲವಾರು ಶತಮಾನಗಳಿಂದಲೂ ನೈಸರ್ಗಿಕವಾಗಿ ದೊರೆಯುವ ಗಿಡ-ಮೂಲಿಕೆಗಳಿಂದ ಔಷಧ ತಯಾರಿಸಲಾಗುತ್ತಿದೆ. ಆಯುರ್ವೇದ, ಯುನಾನಿ ಮುಂತಾದ ಬೇರೆ-ಬೇರೆ ಪದ್ಧತಿ ಇರಬಹುದು, ಅವುಗಳಲ್ಲಿ ಬಳಕೆ ಮಾಡುತ್ತಿರುವುದು ಔಷಧೀಯ ಸಸ್ಯಗಳನ್ನೇ. ಈಗ ಅವುಗಳ ತಯಾರಿಕೆ, ಪ್ರಮಾಣ ಕುರಿತ ಮಾಹಿತಿ ದಾಖಲಿಸುವ ಹರ್ಬಲ್ ಮೋನೋಗ್ರಾಫ್ ವ್ಯವಸ್ಥೆೆ ಬಹಳ ಅನುಕೂಲಕರವಾಗಿದೆ ಎಂದು ಹೇಳಿದರು.
ಗಿಡಮೂಲಿಕೆಗಳ ಕುರಿತು ಮೋನೋಗ್ರಾಫ್‌ನಲ್ಲಿ ದಾಖಲು ಮಾಡಿದರೆ, ಮುಂದಿನ ಪೀಳಿಗೆಗೆ ಇದೊಂದು ಮಹತ್ವದ ಸಂಪತ್ತಾಗುತ್ತದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತದೆ. ಯಾವ-ಯಾವ ಸ್ಥಳದಲ್ಲಿ ಯಾವ ಗಿಡಮೂಲಿಕೆ ದೊರೆಯುತ್ತದೆ. ಅದರ ಮಹತ್ವ, ಅವುಗಳ ಔಷಧೀಯ ಗುಣ, ಯಾವ ಕಾಯಿಲೆಗೆ ಉಪಯೋಗಿಸಬಹುದು ಎನ್ನುವ ವಿವರಗಳು ಲಭ್ಯವಾಗುವುದರಿಂದ, ಮುಂದಿನ ತಲೆಮಾರಿಗೂ ಈ ಪದ್ಧತಿಯನ್ನು ದಾಟಿಸಬಹುದು ಎಂದು ಆಶಯ ವ್ಯಕ್ತಪಡಿಸಿದರು.
ಹಳ್ಳಿಗಾಡಿನಲ್ಲಿ ಅಕ್ಷರ ತಿಳಿಯದ ಅನೇಕರು ಔಷಧ ಕೊಡುತ್ತಿದ್ದರು. ಆದರೆ, ಬಳಕೆಯ ವಿಧಾನ, ಎಷ್ಟು ಪ್ರಮಾಣದಲ್ಲಿ ಮಿಶ್ರಣ ಮಾಡಬೇಕು ಎನ್ನುವ ಅಂಶಗಳನ್ನು ಅವರು ಯಾರು ದಾಖಲೀಕರಣ ಮಾಡಲು ಹೋಗಲಿಲ್ಲ. ಕೇವಲ ಬಾಯಿಂದ ಬಾಯಿಗೆ ಹಾಗೂ ಮಾಡುತ್ತಿದ್ದ ವಿಧಾನವನ್ನು ಮತ್ತೊಬ್ಬರು ನೋಡಿ, ಕಲಿತುಕೊಂಡು ಮುಂದುವರಿಸಿದರೇ ವಿನಾ ಲಿಖಿತ ರೂಪದಲ್ಲಿ ದಾಖಲು ಮಾಡಿಲ್ಲ ಎಂದರು.
ಆದ್ದರಿಂದ ಇಂತಹ ಸಮಸ್ಯೆೆಗೆ ಪರಿಹಾರವಾಗಿ ಮೋನೋಗ್ರಾಫ್ ಪದ್ಧತಿಯು ರೂಢಿಗೆ ಬಂದಿದೆ. ಇದರಿಂದ ಔಷಧ ತಯಾರಿಕೆ, ಪ್ರಮಾಣ ಎಲ್ಲವನ್ನೂ ದಾಖಲೀಕರಣ ಮಾಡಲಾಗುವುದು ಎಂದು ಹೇಳಿದರು.
ಅಮೆರಿಕ, ಇಂಗ್ಲೆೆಂಡ್ ಸೇರಿದಂತೆ ಮುಂದುವರಿದ ದೇಶಗಳಲ್ಲೂ ಬೇರೆ-ಬೇರೆ ಮಾನದಂಡಗಳು, ವಿಭಿನ್ನವಾಗಿ ಗಿಡಮೂಲಿಕೆಗಳ ಮೋನೋಗ್ರಾಫ್ ದಾಖಲೀಕರಣ ಮಾಡಿದ್ದಾರೆ. ವಿಧಾನಗಳು ಬೇರೆಯಾದರೂ ಅವುಗಳ ಆಶಯ ಮಾತ್ರ ಒಂದೇ ಆಗಿದೆ. ಗಿಡಮೂಲಿಕ ಔಷಧಗಳು ಗುಣಮಟ್ಟದಿಂದ ಕೂಡಿರಬೇಕು. ಅವುಗಳಲ್ಲಿ ಸ್ಪಷ್ಟತೆ-ನಿಖರತೆ ಇರಬೇಕು ಎನ್ನುವ ಆಶಯವಿರುತ್ತದೆ ಎಂದರು.
ಆಧುನಿಕ ಜೀವನದ ಒತ್ತಡವನ್ನು ನಿರ್ವಹಣೆ ಮಾಡಲು ಗಿಡಮೂಲಿಕೆಗಳ ಔಷಧದ ಪಾತ್ರ ಬಹಳ ಮುಖ್ಯವಾಗಿರುವುದಲ್ಲದೆ ತುರ್ತು ಕೂಡ ಆಗಿದೆ. ಆಧುನಿಕ ಮಾದರಿಯಲ್ಲಿ ಮಾಡುತ್ತಿರುವ ಹೀಲಿಂಗ್, ಮಸಾಜ್ ಮುಂತಾದ ಥೆರೆಪಿಗಳಿಗೂ ಗಿಡಮೂಲಿಕೆಗಳು ಬೇಕಾಗಿವೆ ಎಂದು ಹೇಳಿದರು.
ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಕ ಡಾ.ಎಸ್. ಆನಂದ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಆಯುಷ್ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಗಜಾನನ ಹೆಗಡೆ, ಶಾರದಾ ವಿಲಾಸ ಶಿಕ್ಷಣ ಸಂಸ್ಥೆೆಗಳ ಗೌರವ ಕಾರ್ಯದರ್ಶಿ ಆರ್.ನರಸಿಂಹ, ಶಾರದಾ ವಿಲಾಸ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ಹನುಮಂತಚಾರ್ ಜೋಷಿ, ಜಿಜ್ಞಾಸ ಆಯುಷ್ ಸಂಸ್ಥೆೆಯ ರಾಷ್ಟ್ರೀಯ ಸಹ ಸಂಯೋಜಕ ಡಾ. ಡಿ.ತ್ರಿಶಲ್ ರಾವ್, ಫಾರ್ಮವಿಷನ್ ಸಂಸ್ಥೆೆಯ ಡಾ.ಸಿ.ಎಸ್.ಚರಣ್ ಇತರರು ಇದ್ದರು.

Share This Article

ರೊಟ್ಟಿ, ಚಪಾತಿಗೆ ತುಪ್ಪ ಹಚ್ಚಿ ತಿನ್ನುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರಬಹುದು ಎಚ್ಚರ! Health Tips

Health Tips: ಚಪಾತಿ ಎಲ್ಲರಿಗೂ ಅಚ್ಚುಮೆಚ್ಚಿನ ಆಹಾರ. ಪಲ್ಯ, ಸಾಗು, ಜಾಮ್‌, ತುಪ್ಪ ಹೀಗೆ ಎಲ್ಲದರ…

ಯಾರಾದರೂ ನಿಮ್ಮ ಮುಂದೆ ಹಠಾತ್​ ಕುಸಿದುಬಿದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Suddenly Collapsed

Suddenly Collapsed : ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರು ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು…