ಸಿನಿಮಾ

ಸಾಕ್ಷೃಚಿತ್ರ, ಕೃತಿಗಳ ಲೋಕಾರ್ಪಣೆ 28ರಂದು

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಡಾ. ಎಸ್.ಆರ್. ರಾಮನಗೌಡರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ಡಾ. ಎಸ್.ಆರ್. ರಾಮನಗೌಡರ ಎಜ್ಯುಕೇಶನ್ ಮತ್ತು ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಆಶ್ರಯದಲ್ಲಿ ಮೇ 28ರಂದು ಇಲ್ಲಿನ ದೊಡ್ಡನಾಯಕನಕೊಪ್ಪದ ಬಿ.ಡಿ. ಪಾಟೀಲ ಕನ್ವೆನ್ಶನ್ ಹಾಲ್‌ನಲ್ಲಿ ಡಾ. ಎಸ್.ಆರ್. ರಾಮನಗೌಡರ ರಚಿಸಿದ ಹಾಗೂ ಅವರ ಕುರಿತು ರಚಿಸಿದ ಗ್ರಂಥಗಳ ಲೋಕಾರ್ಪಣೆ ಮತ್ತು ಸಾಕ್ಷೃ ಚಿತ್ರ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಆಯೋಜಕ ಸಂಗನಗೌಡ ರಾಮನಗೌಡರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರಾಣಸಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿ ಗ್ರಂಥಗಳ ಲೋಕಾರ್ಪಣೆ ಮಾಡುವರು. ಸದ್ಗುರುವಾಣಿ ಕೃತಿ ಕುರಿತು ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಆತ್ಮಜ್ಞಾನಿ ಶ್ರೀ ಸದ್ಗುರು ಸಮರ್ಥ ಔಜೀಕರ ಮಹಾರಾಜರು ಸಂಪುಟ 1,2,3 ಗ್ರಂಥಗಳ ಕುರಿತು ಹಿರಿಯ ಸಾಹಿತಿ ಮೃತ್ಯುಂಜಯ ಸ್ವಾಮಿಗಳು ಹಿರೇಮಠ, ಶ್ರೀ ಸದ್ಗುರು ಸಮರ್ಥ ಔಜೀಕರ ಮಹಾರಾಜರ ಜೀವನದರ್ಶನ ಮತ್ತು ಮರಾಠಿ ಭಾಷೆಯ ಶ್ರೀ ಲಕ್ಷ್ಮಣ ಚರಿತ ಮಾನಸದ ಕನ್ನಡ ಅನುವಾದಿತ ಕೃತಿ ಕುರಿತು ಪ್ರೊ. ಕೆ.ಎಸ್. ಕೌಜಲಗಿ ಮಾತನಾಡುವರು ಎಂದರು.
ಇದಲ್ಲದೆ ಡಾ. ಎಸ್.ಆರ್. ರಾಮನಗೌಡರ ಕುರಿತು ಬೆಳಗಾವಿಯ ಚಲನಚಿತ್ರ ನಿರ್ದೇಶಕ ಉಮೇಶ ಬಡಿಗೇರ ನಿರ್ದೇಶನದ ಸಾಕ್ಷೃಚಿತ್ರ, ಸಂತ ವೈದ್ಯ ಹಾಗೂ ಸಾಹಿತಿ, ಸಂಸಾರಿ ವಿರಕ್ತ ಡಾ.ಎಸ್.ಆರ್ ರಾಮನಗೌಡರ ಎಂಬ ಕೃತಿಗಳು ಬಿಡುಗಡೆ ಮಾಡಲಾಗುವುದು. ಅತಿಥಿಗಳಾಗಿ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಆಗಮಿಸುವರು. ಶ್ರೀ ಗಿರೀಶಾನಂದ ಮಹಾರಾಜರು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದ ಅಂತ್ಯದಲ್ಲಿ ಸಂತ ವೈದ್ಯ ಸಾಕ್ಷೃಚಿತ್ರ ಪ್ರದರ್ಶಿಸಲಾಗುವುದು ಎಂದರು.
ಡಾ.ಬಾಳಪ ಚಿನಗುಡಿ, ಬಸಯ್ಯ ಶಿರೋಳ, ಬಸವರಾಜ ಕೌಜಲಗಿ, ಗುರನಗೌಡ ರಾಮನಗೌಡರ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Latest Posts

ಲೈಫ್‌ಸ್ಟೈಲ್