25.7 C
Bangalore
Sunday, December 15, 2019

ಅಪರೂಪದ ಹಾರುವ ಓತಿ ಸಾಕ್ಷ್ಯಚಿತ್ರ

Latest News

ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ

ಉಡುಪಿ: ತುಳು ಭಾಷಿಗ ತುಳು ಶಿವಳ್ಳಿ ಬ್ರಾಹ್ಮಣರು ಮಾತೃಭಾಷೆ ಮರೆಯುತ್ತಿದ್ದಾರೆ. ಅದು ಸಲ್ಲದು. ನಮ್ಮ ಸಂಸ್ಕೃತಿ-ಸಂಸ್ಕಾರಗಳ ಉಳಿವಿಗಾಗಿ ಶ್ರಮಿಸುವುದು ಗಾಯತ್ರಿ ಮಂತ್ರವನ್ನು ನಿತ್ಯವೂ...

ಕ್ರಿಕೆಟ್ ಪಂದ್ಯಾವಳಿ, ಡಿಎಆರ್ ಮೈದಾನದಲ್ಲಿ ಲಾಠಿಗೆ ಮಣಿದ ಲೇಖನಿ

ಬಳ್ಳಾರಿ: ಪೊಲೀಸ್ ವಾರ್ಷಿಕ ಕ್ರೀಡಾಕೂಟ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ಭಾನುವಾರ ಪೊಲೀಸರು ಮತ್ತು ಪತ್ರಕರ್ತರ ಮಧ್ಯೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ...

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಉಹಾಪೋಹ – ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ರಾಯಚೂರು: ಇನ್ನೆರಡು ಉಪ ಮುಖ್ಯಮಂತ್ರಿ ಹುದ್ದೆ ಸೃಜಿಸಲಾಗುತ್ತಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಮುಂದಿನ ಸಚಿವ ಸಂಪುಟದ ವಿಸ್ತರಣೆ, ಬದಲಾವಣೆಯನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು...

ಮೊಬೈಲ್ ಹಾಳು ಮಾಡಿದ್ದಕ್ಕೆ ಸೋದರ ಮಾವನೇ ಬಾಲಕಿಗೆ ಚಾಕು ಇರಿದು ಹತ್ಯೆ

ಶಿವಮೊಗ್ಗ: ಮೊಬೈಲ್ ವಿಚಾರದಲ್ಲಿ ಭಾನುವಾರ ಸೋದರ ಮಾವನೇ ಬಾಲಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗಾಡಿಕೊಪ್ಪದಲ್ಲಿ ನಡೆದಿದೆ.5 ವರ್ಷದ ರಂಜನಿ ಹತ್ಯೆಯಾದ...

ಮಸ್ಕಿ ಕ್ಷೇತ್ರಕ್ಕೆ ಇನ್ನೆರಡು ತಿಂಗಳಲ್ಲಿ ಉಪಚುನಾವಣೆ ಸಾಧ್ಯತೆ – ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್

ಮಸ್ಕಿ: ಬಿಜೆಪಿ ಸೇರಿದ ಮೇಲೆ ಸಿಎಂ ಬಿ.ಎಸ್.ಯಡಿಯೂರಪ್ಪ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ಕೊಡಲು ಒಪ್ಪಿದ್ದಾರೆ. ಈಗಾಗಲೇ 50 ಕೋಟಿ ರೂ....

ರಾಜೇಂದ್ರ ಶಿಂಗನಮನೆ ಶಿರಸಿ

ಪಶ್ಚಿಮಘಟ್ಟದಲ್ಲಿ ಇಂದಿಗೂ ನಿಗೂಢ ಮತ್ತು ಅಪರೂಪವಾಗಿರುವ ಹಾರುವ ಓತಿ (ಫ್ಲೈಯಿಂಗ್ ಲಿಝಾರ್ಡ್, ಫ್ಲೈಯಿಂಗ್ ಡ್ರ್ಯಾಗನ್) ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಶಿರಸಿಯ ವನ್ಯಜೀವಿ ಛಾಯಾಗ್ರಾಹಕರೊಬ್ಬರು ಸಾಕ್ಷ್ಯಚಿತ್ರ ನಿರ್ವಿುಸಿ ಗಮನ ಸೆಳೆದಿದ್ದಾರೆ.

ಇಲ್ಲಿನ ವನ್ಯಜೀವಿ ಪ್ರೇಮಿ ಪ್ರದೀಪ ಅವರು ಶಿರಸಿಯ ಜಡ್ಡಿನಗದ್ದೆ ನಿವಾಸಿ. ಬೆಂಗಳೂರಿನ ಕ್ರೖೆಸ್ಟ್ ಕಾಲೇಜ್​ನಲ್ಲಿ ಬಯೋಟೆಕ್ನಾಲಜಿ ಪದವಿ ಪಡೆದಿದ್ದು, ವೈಲ್ಡ್​ಲೈಫ್ ಚಟುವಟಿಕೆ, ಪರಿಸರ ಅಧ್ಯಯನ ಮಾಡಿಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣೆ ಮತ್ತು ಮಹತ್ವ ತಿಳಿಸಲು ಕಾರ್ಯನಿರ್ವಹಿಸುತ್ತಿರುವ ರೌಂಡ್​ಗ್ಲಾಸ್ ಸಸ್ಟೇನ್ ಎಂಬ ಆನ್​ಲೈನ್ ಫ್ಲಾಟ್​ಫಾಮರ್್​ಗೆ ಪ್ರದೀಪ ಹೆಗಡೆ ಸಾಕ್ಷೃಚಿತ್ರ ನಿರ್ವಿುಸಿದ್ದಾರೆ. ಪ್ರದೀಪ ಹೆಗಡೆ ಅವರು 3 ನಿಮಿಷ ಅವಧಿಯ ಹಾರುವ ಓತಿಯ ಸಾಕ್ಷ್ಯ ಚಿತ್ರವನ್ನು ಆಗುಂಬೆ ಮಳೆಕಾಡು ಸಂಶೋಧನ ಕೇಂದ್ರದಲ್ಲಿ ನಿರ್ವಿುಸಿದ್ದಾರೆ. ಹಾರುವ ಓತಿಯ ಚಲನವಲನ, ಜೀವನ ಕ್ರಮವನ್ನು 10 ದಿನಗಳ ಕಾಲ ಆತ್ಯಾಧುನಿಕ ಕ್ಯಾಮರಾ ಟೆಲಿಲೆನ್ಸ್ ಬಳಸಿ ಸೆರೆ ಹಿಡಿದ್ದಾರೆ. ‘ದಿ ಫ್ಲೈಯಿಂಗ್ ಡ್ರ್ಯಾಗನ್ಸ್ ಆಫ್ ಸೌತ್ ಇಂಡಿಯಾ’ ಹೆಸರಿನಲ್ಲಿ ಯೂ ಟ್ಯೂಬ್​ನಲ್ಲಿ ಸಾಕ್ಷ್ಯ ಚಿತ್ರವನ್ನು ಅಪ್​ಲೋಡ್ ಮಾಡಲಾಗಿದೆ.

ಜನರಿಗೆ ಇದರ ಪರಿಚಯ ಕಡಿಮೆ: ಹೆಚ್ಚಾಗಿ ಕಣ್ಣಿಗೆ ಕಾಣಿಸದ ಕಾರಣ ಜನರಿಗೆ ಇದರ ಪರಿಚಯ ಕಡಿಮೆ ಎಂದೇ ಹೇಳಬೇಕು. ಬೂದು, ಮಣ್ಣು, ಮರದ ಬಣ್ಣದಲ್ಲಿ ಈ ಜೀವಿ ಇರುತ್ತದೆ. ಈ ಓತಿ ನೆಲಕ್ಕೆ ಇಳಿಯದೆ, ಮರದಿಂದ ಮರಕ್ಕೆ ಹಾರುತ್ತಿರುತ್ತದೆ. ಎರಡು ಬದಿಗಳಲ್ಲಿ ಬಾವಲಿಯಂತೆ ರೆಕ್ಕೆಯನ್ನು ಹೊಂದಿದೆ. ರೆಕ್ಕೆ ಬಿಚ್ಚಿ ಹಾರುವಾಗ ಸೂರ್ಯನ ಬೆಳಕಿಗೆ ಹಳದಿ ಬಣ್ಣದಲ್ಲಿ ರೆಕ್ಕೆ ಗೋಚರವಾಗುತ್ತದೆ. ಇದು ಮರದಿಂದ ಮರಕ್ಕೆ ಅತ್ಯಂತ ವೇಗದಲ್ಲಿ ಹಾರುತ್ತದೆ. 100 ಮೀಟರ್​ವರೆಗೂ ಹಾರುವ ಸಾಮರ್ಥ್ಯ ಹೊಂದಿದೆ. ಗಂಡು ಓತಿಗಳಿಗೆ ಗಂಟಲು ಭಾಗದಲ್ಲಿ ಹಳದಿ ಬಣ್ಣದ ರೆಕ್ಕೆ ಮಾದರಿಯ ಅಂಗವಿದೆ. ಇದನ್ನು ಡ್ಯೂಲಾಕ್ ಎನ್ನಲಾಗುತ್ತದೆ. ಅದನ್ನು ಬಿಚ್ಚುವ, ಮುಚ್ಚುವ ಮೂಲಕ ಹೆಣ್ಣುಗಳನ್ನು ಆಕರ್ಷಿಸಿ ಮಿಲನ ನಡೆಸುತ್ತದೆ. ಅಡಕೆ, ತೆಂಗಿನ ಮರದಲ್ಲಿ ಕೀಟಗಳನ್ನು ತಿನ್ನುವ ಮೂಲಕ ರೈತರಿಗೆ ನೆರವಾಗುತ್ತವೆ. ಈ ಓತಿಗಳನ್ನು ಪಕ್ಷಿ ಮತ್ತು ಹಾವುಗಳು ಆಹಾರಕ್ಕಾಗಿ ಬೇಟೆಯಾಡುತ್ತವೆ. ಪರಿಸರ ಸಮತೋಲನದಲ್ಲಿ ಇದರ ಪಾತ್ರ ವಿಶಿಷ್ಟವಾಗಿದೆ.

ವನ್ಯಜೀವಿ ಸಂಪತ್ತನ್ನು ವಿಶ್ವಾದ್ಯಂತ ಮುನ್ನೆಲೆಗೆ ತರುವ ಉದ್ದೇಶದಿಂದ ರಾಜ್ಯ ಅರಣ್ಯ ಇಲಾಖೆ ಸಹಯೋಗದಲ್ಲಿ ಉತ್ಸಾಹಿ ವನ್ಯಜೀವಿ ಆಸಕ್ತ ಯುವಕರು ರೂಪಿಸಿದ ವೈಲ್ಡ್ ಕರ್ನಾಟಕ ಕಿರುಚಿತ್ರದಲ್ಲಿ ಪ್ರದೀಪ ಅವರ 15 ನಿಮಿಷ ಅವಧಿಯ ಕಾಳಿಂಗ ಸರ್ಪ ಕುರಿತ ಸಾಕ್ಷ್ಯ ಚಿತ್ರವಿದೆ. ಈ ಸಾಕ್ಷ್ಯತ್ರ ಅನಿಮಲ್ ಪ್ಲಾನೆಟ್ ಚಾನೆಲ್​ನಲ್ಲಿ ಪ್ರಸಾರವಾಗಿದೆ. ಇವರು ಹಿಮಾಚಲ ಪ್ರದೇಶದ ಹಿಮ ಚಿರತೆ ಬಗ್ಗೆಯೂ ಸಾಕ್ಷ್ಯ ಚಿತ್ರ ಮಾಡಿದ್ದಾರೆ. ಹಗಲೂರಾತ್ರಿ ಕಾಡಿನಲ್ಲಿ ಅಲೆಯುತ್ತ ಹಲವು ಪ್ರಾಣಿ, ಪಕ್ಷಿಗಳ ಸುಂದರ ಛಾಯಾಚಿತ್ರಗಳನ್ನು ಪ್ರದೀಪ ಸೆರೆ ಹಿಡಿದಿದ್ದಾರೆ.

ಹಾರುವ ಓತಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವುದು ಸುಲಭದ ಮಾತಲ್ಲ. ಇದಕ್ಕೆ ಶ್ರದ್ಧೆ ಮತ್ತು ತುಂಬಾ ತಾಳ್ಮೆ ಬೇಕು. ಅತಿ ವಿರಳವಾಗಿರುವ ಈ ಜೀವಿಯನ್ನು ಕ್ಯಾಮರಾ ಮೂಲಕ ಸೆರೆ ಹಿಡಿದು, ಇದರ ಸಂಪೂರ್ಣ ಪರಿಚಯ ಮಾಡುವ ಪ್ರಯತ್ನ ಮಾಡಿದ್ದೇನೆ.

| ಪ್ರದೀಪ ಹೆಗಡೆ, ವನ್ಯಜೀವಿ ಛಾಯಾಗ್ರಾಹಕ

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...