20.5 C
Bangalore
Sunday, December 15, 2019

ಇಂದು ಖಾಸಗಿ ವೈದ್ಯರ ಮುಷ್ಕರ

Latest News

ಅಡುಗೆಗೆ ಗುಣಮಟ್ಟದ ಪದಾರ್ಥ ಬಳಸಿ

ಕೊಪ್ಪ: ಅಡುಗೆ ಮಾಡುವಾಗ ಸ್ವಚ್ಛತೆಗೆ ಗಮನ ಹರಿಸಬೇಕು. ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸಿ. ಹೆಚ್ಚು ಜವಾಬ್ದಾರಿಯಿಂದ ಅಡುಗೆ ಮಾಡಬೇಕು ಎಂದು ಅಕ್ಷರ...

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ರಾಮಾಯಣ, ಮಹಾಭಾರತ, ಭಾಗವತಗಳೇ ಮೂಲಾಧಾರ: ಶ್ರೀ ರಾಘವೇಶ್ವರ ಸ್ವಾಮೀಜಿ

ಬೆಂಗಳೂರು: ರಾಮಾಯಣ ಮಹಾಕಾವ್ಯ ಕಲ್ಪನೆಯಲ್ಲ, ಅದು ಇತಿಹಾಸ. ರಾಮಾಯಣ, ಮಹಾಭಾರತ ಹಾಗೂ ಭಾಗವತ ನಮ್ಮ ಭರತ ಸಂಸ್ಕೃತಿಯ ಮೂಲಾಧಾರ. ಈ ಮೂರನ್ನು ಮೂಲವಾಗಿಟ್ಟುಕೊಂಡು ವಿಷ್ಣುಗುಪ್ತ ವಿಶ್ವವಿದ್ಯಾಪೀಠ...

ರೇವಣ್ಣರಿಂದ ಕಲಿಯುವುದು ಮುಗಿದಿದೆ

ಹಾಸನ ಜಿಲ್ಲೆಯನ್ನಷ್ಟೇ ನೋಡಿಕೊಳ್ಳಲಿ ಶಾಸಕ ಕೆ.ಸಿ.ನಾರಾಯಣಗೌಡ ವಾಗ್ದಾಳಿ ಕೆ.ಆರ್.ಪೇಟೆ: ಮಾಜಿ ಸಚಿವ ಎಚ್.ಡಿ.ರೇವಣ್ಣ ನಮ್ಮ ಜಿಲ್ಲೆ, ತಾಲೂಕು ನೋಡುವ ಅವಶ್ಯಕತೆ ಇಲ್ಲ. ಹಾಸನ ಜಿಲ್ಲೆಯನ್ನಷ್ಟೇ...

ಜೆಡಿಎಸ್‌ಗೆ ನಾರಾಯಣಗೌಡ ಯಾವ ಲೆಕ್ಕ!

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿರುಗೇಟು ಪಾಂಡವಪುರ: ಮಾಜಿ ಪ್ರಧಾನಿ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಮತ್ತವರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿ ಎಚ್ಚರಿಕೆ ನೀಡಿದವರೆಲ್ಲ ಮಣ್ಣಲ್ಲಿ ಮಣ್ಣಾಗಿ...

ಪಾನಮತ್ತ ಚಾಲಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಪೊಲೀಸರ ಅಮಾನತು

ಬೆಂಗಳೂರು: ಪಾನಮತ್ತ ಚಾಲಕರಿಂದ ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡುತ್ತಿದ್ದ ಅಶೋಕ್ ನಗರ ಸಂಚಾರ ಠಾಣೆಯ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಜಂಟಿ ಪೊಲೀಸ್ ಆಯುಕ್ತ...

ಮಂಗಳೂರು/ಉಡುಪಿ:  ಪಶ್ಚಿಮ ಬಂಗಾಲದಲ್ಲಿ ಕರ್ತವ್ಯನಿರತ ಕಿರಿಯ ವೈದ್ಯರ ಮೇಲೆ ಹಲ್ಲೆ ಖಂಡಿಸಿ, ಭಾರತೀಯ ವೈದ್ಯಕೀಯ ಸಂಘ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜೂನ್ 17ರಂದು ಬೆಳಗ್ಗೆ 6 ರಿಂದ ಜೂನ್ 18ರ ಬೆಳಗ್ಗೆ 6 ಗಂಟೆವರೆಗೆ ದ.ಕ. ಹಾಗೂ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಹೊರ ರೋಗಿ ವಿಭಾಗ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ವಿಭಾಗ ಎಂದಿನಂತೆ ಕಾರ್ಯನಿರ್ವಹಿಸಲಿದೆ.

ಮುಷ್ಕರದ ಬಗ್ಗೆ ಹಲವು ಆಸ್ಪತ್ರೆಗಳಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದ್ದು, ಭಾನುವಾರ ಒಪಿಡಿಗೆ ವಾರದ ರಜೆ ಹಾಗೂ ಸೋಮವಾರ ಪ್ರತಿಭಟನೆ ಹಿನ್ನೆಲೆಯಲ್ಲಿ ಸತತ 2 ದಿನ ಹೊರರೋಗಿ ವಿಭಾಗ ಸ್ಥಗಿತಗೊಂಡಂತಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲೂ ತುರ್ತು ವಿಭಾಗ ಕಾರ್ಯನಿರ್ವಹಿಸುವುದರಿಂದ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಹೊರೆಯಾಗದು. ಒಪಿಡಿ ವಿಭಾಗಕ್ಕೆ ಆಗಮಿಸುವ ರೋಗಿಗಳು ಮರುದಿನ ಆಗಮಿಸಿದರೂ ಸಮಸ್ಯೆಯಾಗದು ಎಂಬುದು ಕೆಲ ವೈದ್ಯರ ಅಭಿಪ್ರಾಯ.
ಉಡುಪಿಯಲ್ಲಿ 20ರಷ್ಟು ಹೈಟೆಕ್, ನರ್ಸಿಂಗ್ ಹೋಂಗಳಿದ್ದು, 100 ಕ್ಲಿನಿಕ್‌ಗಳು ಹೊರರೋಗಿ ವಿಭಾಗ ಸೇವೆ ನೀಡುವುದಿಲ್ಲ. ಅಪಘಾತ ಮತ್ತು ತರ್ತು ಸೇವೆ ಎಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಕ್ಲಿನಿಕ್‌ಗಳಲ್ಲಿ ಲಭ್ಯವಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಅಡಚಣೆ ಆಗದು
ವೈದ್ಯರು, ಶುಶ್ರೂಷಕರು ಎಂದಿನಂತೆ ಕಾರ್ಯನಿರ್ವಹಿಸಲಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ಅಡಚಣೆಯಾಗದು. ಯಾವುದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ರೋಗಿಗಳು ಭೇಟಿ ಮಾಡಬಹುದು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದ್ದಾರೆ. ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿಯೂ ರಜೆ ಇರುವ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಸರ್ಕಾರದ ಆದೇಶದಂತೆ ಆಸ್ಪತ್ರೆ ಕಾರ್ಯನಿರ್ವಹಿಸಲಿದ್ದು, ಸಾಕಷ್ಟು ಔಷಧ ದಾಸ್ತಾನಿದೆ ಎಂದು ವೆನ್‌ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಹೇಳಿದ್ದಾರೆ.

ಇಂದು ರಾತ್ರಿ ಉಡುಪಿಯಲ್ಲಿ ಮೊಂಬತ್ತಿ ಮೆರವಣಿಗೆ
ವೈದ್ಯರ ಮೇಲೆ ಹಲ್ಲೆ ಖಂಡಿಸಿ ಜೂನ್17ರಂದು ರಾತ್ರಿ 7:30ಕ್ಕೆ ಭಾರತೀಯ ವೈದ್ಯಕೀಯ ಸಂಘ ಉಡುಪಿ, ಭಾರತೀ ದಂತ ವೈದ್ಯಕೀಯ ಸಂಘ ಉಡುಪಿ, ಕೆಎಂಸಿ ವತಿಯಿಂದ ಮಣಿಪಾಲ ಟೈಗರ್ ಸರ್ಕಲ್‌ನಲ್ಲಿ ಮೊಂಬತ್ತಿ ಮೆರವಣಿಗೆ ನಡೆಸಲಾಗುವುದು ಎಂದು ಐಎಂಎ ಕರಾವಳಿ ಅಧ್ಯಕ್ಷ ಡಾ.ಪಿ.ಎಸ್ ಗುರುಮೂರ್ತಿ ಭಟ್ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ವೈದ್ಯರು, ಸಿಬ್ಬಂದಿ ಹಾಜರಾಗುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಪರಿಸ್ಥಿತಿ ಎದುರಿಸಲು ಸೋಮವಾರ ಎಲ್ಲ ಸಿಬ್ಬಂದಿಯ ರಜೆಯನ್ನು ಹಿಂಪಡೆಯಲಾಗಿದೆ. ಎಲ್ಲರೂ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ತಾಲೂಕು ಆಸ್ಪತ್ರೆ, ಪ್ರಾಥಮಿಕ ಕೇಂದ್ರ, ಜಿಲ್ಲಾಸ್ಪತ್ರೆಗಳಲ್ಲಿ ವೈದ್ಯರು ಸೇವೆಗೆ ಲಭ್ಯರಿರುತ್ತಾರೆ.
– ಡಾ.ಮಧುಸೂದನ ನಾಯಕ್, ಜಿಲ್ಲಾಸರ್ಜನ್, ಜಿಲ್ಲಾಸ್ಪತ್ರೆ ಉಡುಪಿ

Stay connected

278,756FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...