ವೈದ್ಯರು ಹಣ ಗಳಿಕೆಗೆ ಆಸೆ ಪಡಬಾರದು

ಘಟಪ್ರಭಾ: ವೈದ್ಯರಾದವರು ಎಂದೂ ಹಣಗಳಿಕೆಗೆ ಆಸೆ ಪಡಬಾರದು. ತಮ್ಮ ಕರ್ತವ್ಯವನ್ನು ಅತಿ ಶ್ರದ್ಧೆ ಹಾಗೂ ಪ್ರಮಾಣಿಕತೆಯಿಂದ ಮಾಡಿದರೆ ಹಣ ತಾನಾಗಿಯೆ ಬರುತ್ತದೆ ಎಂದು ಹುಬ್ಬಳ್ಳಿಯ ಖ್ಯಾತ ನರರೋಗ ತಜ್ಞ ಡಾ. ಸುರೇಶ ಎನ್.ದುಗ್ಗಾಣಿ ಹೇಳಿದ್ದಾರೆ.

ಅವರು ಸೋಮವಾರ ಸಂಜೆ ಘಟಪ್ರಭಾ ಮೃತ್ಯುಂಜಯ ಸಾಂಸ್ಕೃತಿಕ ಭವನದಲ್ಲಿ ಜೈಂಟ್ಸ್ ಗ್ರೂಪ್ ಆಫ್ ಘಟಪ್ರಭಾ ವತಿಯಿಂದ ಏರ್ಪಡಿಸಿದ್ದ ವಿಶ್ವ ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಹಿರಿಯ ವೈದ್ಯ ಡಾ. ವಿಲಾಸ ನಾಯಕವಾಡಿ ಮಾತನಾಡಿ, ವೈದ್ಯರು ರೋಗಿಗಳ ಬಗ್ಗೆ ಆಸಡ್ಡೆ ಮಾಡಿದರೆ ತಮ್ಮ ವೃತ್ತಿಗೆ ದ್ರೋಹ ಮಾಡಿದಂತೆ. ಸಿದ್ದೇಶ್ವರ ಶ್ರೀಗಳು ಹೇಳಿದ ಹಾಗೆ ಬಡವನಾದರೂ ಅವನು ಕೊಟ್ಟ ಅಲ್ಪ ಹಣಕ್ಕೆ ಪ್ರಾಮಾಣಿಕವಾಗಿ ಸೇವೆ ನೀಡಬೇಕು. ಆಗ ವೈದ್ಯ ವೃತ್ತಿಗೆ ಗೌರವ ಎಂದು ಅವರು ಹೇಳಿದರು.

ಸ್ಥಳೀಯ ವೈದ್ಯರಾದ ಡಾ. ನಾಭಿರಾಜ ಪೂಜಾರ, ಡಾ. ಪ್ರಶಾಂತ ಬಬಲಾದಿ, ಪತ್ರಕರ್ತ ಸುಭಾಸ ಗಾಯಕವಾಡ ಅವರನ್ನು ಸನ್ಮಾನಿಸಲಾಯಿತು.

ಜೈಂಟ್ಸ್ ಗ್ರೂಪ್ ಅಧ್ಯಕ್ಷ ಜಿ.ಎಸ್.ಕರ್ಪೂರಮಠ ಅಧ್ಯಕ್ಷತೆ ವಹಿಸಿದ್ದರು. ಭೆಂಡವಾಡ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿ, ಜೈಂಟ್ಸ್ ೆಡರೇಶನ್ ಸದಸ್ಯ ಎಲ್.ಬಿ.ದೊಡ್ಡಮನಿ ಮಾತನಾಡಿದರು. ಜೈಂಟ್ಸ್ ಆಡಳಿತ ನಿರ್ದೇಶಕರಾದ ಸಿ.ಬಿ. ಮಠಪತಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಉಮಾ ದೊಡ್ಡಮನಿ ನಿರೂಪಿಸಿ, ವಂದಿಸಿದರು.