ನರೇಗಲ್ಲ: ಪುರಾಣದಲ್ಲಿ ನಾವು ಧನ್ವಂತರಿ ಬಗ್ಗೆ ಓದಿದ್ದೇವೆ, ಕೇಳಿ ತಿಳಿದಿದ್ದೇವೆ. ಅವರಲ್ಲಿ ಎಂತಹ ರೋಗವನ್ನಾದರೂ ಶಮನ ಮಾಡುವ ಶಕ್ತಿ ಇತ್ತೆಂಬುದನ್ನು ಅರಿತಿದ್ದೇವೆ. ಆದರೆ, ಈಗಿನ ವೈದ್ಯರು ಕಲಿಯುಗದ ಧನ್ವಂತರಿಗಳಾಗಿದ್ದು ನಮ್ಮೆಲ್ಲರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ ಎಂದು ಹಾಲಕೆರೆ ಶ್ರೀಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಅನ್ನದಾನೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಶ್ರೀ ಅನ್ನದಾನೇಶ್ವರ ಆಸ್ಪತ್ರೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ನಮ್ಮ ಸಂಸ್ಥೆಯಲ್ಲಿ ಸುಮಾರು ಎರಡರಿಂದ ಎರಡೂವರೆ ಸಾವಿರ ವಿದ್ಯಾರ್ಥಿಗಳು ಸಂಸ್ಥೆಯ ವಸತಿ ನಿಲಯದಲ್ಲಿದ್ದು ಓದುತ್ತಿದ್ದಾರೆ. ಮಕ್ಕಳಿಗೆ ಅನಾರೋಗ್ಯ ಕಾಡಿದರೆ ಅವರನ್ನು ನರೇಗಲ್ಲಿಗೆ ಕರೆದುಕೊಂಡು ಹೋಗಬೇಕಾಗಿತ್ತು. ಈಗ ಸಂಸ್ಥೆಯ ಆವರಣದಲ್ಲಿಯೇ ಆಸ್ಪತ್ರೆ ಉದ್ಘಾಟಿಸಿರುವುದು ಸಂತಸದ ಸಂಗತಿ ಎಂದರು.
ಡಾ. ಕೆ.ಬಿ. ಧನ್ನೂರ, ಡಾ. ಜಿ.ಕೆ. ಕಾಳೆ, ಡಾ. ಶಿವಯ್ಯ ರೋಣದ, ರವೀಂದ್ರನಾಥ ದೊಡ್ಡಮೇಟಿ, ಎನ್. ಆರ್. ಗೌಡರ, ಬಿ. ಎಫ್. ಚೇಗರೆಡ್ಡಿ, ವಿ.ಬಿ. ಸೋಮನಕಟ್ಟಿಮಠ, ಬಿ.ಜಿ. ವೀರಾಪೂರ, ಎಂ. ಎಸ್. ದಢೇಸೂರಮಠ, ವೈ. ಸಿ. ಪಾಟೀಲ, ಅನಸೂಯಾ ಪಾಟೀಲ, ಬಂಡಿಹಾಳ, ಎಂ. ಬಿ. ಸಜ್ಜನ. ಎಂ. ವಿ. ವೀರಾಪೂರ, ಸಂಗಮೇಶ ಹೂಲಗೇರಿ ಇತರರಿದ್ದರು.