500 ರೂಪಾಯಿಗೆ ಲಸಿಕೆ ಮಾರಿ ಸಿಕ್ಕಿಬಿದ್ದ ವೈದ್ಯೆ; ಕೋವಿಡ್​ ವ್ಯಾಕ್ಸಿನ್ ಅಕ್ರಮವಾಗಿ ಮಾರುತ್ತಿದ್ದ ಇಬ್ಬರ ಬಂಧನ

blank

ಬೆಂಗಳೂರು: ಕರೊನಾ ಲಸಿಕೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಹೋಗಿ ವೈದ್ಯೆಯೊಬ್ಬರು ರೆಡ್ ಹ್ಯಾಂಡೆಡ್​ ಆಗಿ ಸಿಕ್ಕಿಬಿದ್ದಿದ್ದು, ಆಕೆಯನ್ನೂ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಪುಷ್ಪಿತಾ (25) ಹಾಗೂ ಈಕೆಗೆ ಸಹಕರಿಸುತ್ತಿದ್ದ ಪ್ರೇಮಾ (34) ಬಂಧಿತರು.

ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಪುಷ್ಪಿತಾ, ಪ್ರೇಮಾ ಏ. 23ರಿಂದ ಈ ದಂಧೆಯಲ್ಲಿ ತೊಡಗಿದ್ದು, ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಪಿಎಚ್​ಸಿಗೆ ಬರುತ್ತಿದ್ದ ಲಸಿಕೆಯನ್ನು ಕದ್ದು ಪ್ರೇಮಾ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸುತ್ತಿದ್ದ ಪುಷ್ಪಿತಾ, ಬಳಿಕ ಅದನ್ನು ಒಂದಕ್ಕೆ 500 ರೂಪಾಯಿ ಪಡೆದು ಹಾಕಿಸುತ್ತಿದ್ದರು.

500 ರೂಪಾಯಿಗೆ ಲಸಿಕೆ ಮಾರಿ ಸಿಕ್ಕಿಬಿದ್ದ ವೈದ್ಯೆ; ಕೋವಿಡ್​ ವ್ಯಾಕ್ಸಿನ್ ಅಕ್ರಮವಾಗಿ ಮಾರುತ್ತಿದ್ದ ಇಬ್ಬರ ಬಂಧನ
ಪ್ರೇಮಾ

ಕರೊನಾ ಲಸಿಕೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಪಡೆದ ಅನ್ನಪೂರ್ಣೇಶ್ವರಿನಗರ ಪೊಲೀಸರು ಲಸಿಕೆ ಪಡೆಯುವ ನೆಪದಲ್ಲಿ ಪ್ರೇಮಾ ಮನೆಗೆ ತೆರಳಿ ರೆಡ್​ ಹ್ಯಾಂಡೆಡ್​ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಅನ್ನಪೂರ್ಣೇಶ್ವರಿನಗರ ಪೊಲೀಸ್​ ಇನ್​ಸ್ಪೆಕ್ಟರ್​ ಲೋಹಿತ್ ಲಸಿಕೆ ಪಡೆಯುವ ನೆಪದಲ್ಲಿ ತೆರಳಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳಿಂದ ಒಂದು ವ್ಯಾಕ್ಸಿನ್ ಕ್ಯಾರಿಯರ್, ಬಳಸಿದ ಹಾಗೂ ಬಳಸದ ಸಿರಿಂಜ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article

ಹೋಳಿ ಆಡಿದ ನಂತರ ನಿಮ್ಮ ಚರ್ಮ ಒಣಗಿದೆಯೇ? ಈ ಮನೆಮದ್ದುಗಳು ನಿಮಗಾಗಿ.. Holi Skin Care

ಬೆಂಗಳೂರು: ( Holi Skin Care ) ಹೋಳಿ ಹಬ್ಬವು ಸಂತೋಷದಿಂದ ತುಂಬಿರುತ್ತದೆ. ಈ ದಿನ…

ನಿದ್ರೆ ಕಡಿಮೆಯಾದ್ರೆ ಈ ಎಲ್ಲಾ ಸಮಸ್ಯೆಗಳು ಕಾಡುತ್ತವೆ ! Sleep

Sleep: ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಎಷ್ಟು ಮುಖ್ಯ ಎಂದು ನಿಮಗೆ…

ಅತಿಯಾಗಿ ತಿನ್ನುವುದರಿಂದ ಬೊಜ್ಜು ಹೆಚ್ಚಾಗುವುದಿಲ್ಲ; ಈ ಕಾರಣಗಳೇ ಅದಕ್ಕೆ ಮೂಲ ಕಾರಣ | Health Tips

ಬೊಜ್ಜು ವೇಗವಾಗಿ ಬೆಳೆಯುತ್ತಿರುವ ಸಮಸ್ಯೆಯಾಗಿದ್ದು ಇದು ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ…