Summer Clothes: ಬೇಸಿಗೆಯಲ್ಲಿ ಸುಡುವ ಬಿಸಿಲು ಮತ್ತು ಬೆವರಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಆಹಾರ ಕ್ರಮವನ್ನು ಬದಲಿಸಿಕೊಳ್ಳುತ್ತೇವೆ. ಹೀಗೆ ಸರಿಯಾದ ಬಟ್ಟೆಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ.
ಬೇಸಿಗೆಯಲ್ಲಿ, ನೀವು ಹಗುರವಾದ, ಬೆವರು ಹೀರುವ ಬಟ್ಟೆಗಳನ್ನು ಧರಿಸಬೇಕು. ಈ ಬಟ್ಟೆಗಳು ನಿಮ್ಮನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ತೀವ್ರವಾದ ಶಾಖದಲ್ಲೂ ನಿಮ್ಮನ್ನು ತಂಪಾಗಿಡುತ್ತದೆ. ಈ ಬೇಸಿಗೆಯಲ್ಲಿ ನೀವು ಶೈಲಿ ಮತ್ತು ಸೌಕರ್ಯ ಎರಡನ್ನೂ ಕಾಪಾಡಿಕೊಳ್ಳಲು ಬಯಸಿದರೆ, ಧರಿಸಲು ಉತ್ತಮವಾದ ಬಟ್ಟೆಗಳು ಯಾವವು ಎಂಬುದನ್ನು ನೋಡೋಣ.
ಕಾಟನ್, ಲೆನಿನ್ ಅಥವಾ ಜರ್ಸಿಯಿಂದ ಮಾಡಿದ ಬಟ್ಟೆಗಳು ಸಮ್ಮರ್‌ಗೆ ಸೂಕ್ತ. ಈ ಬಟ್ಟೆಗಳು ಗಾಳಿಯಾಡಲು ಮತ್ತು ನಿಮಗೆ ಕಡಿಮೆ ಬೆವರುವಂತೆ ಮಾಡುತ್ತದೆ. ಆದ್ದರಿಂದ ಬೇಸಿಗೆಯಲ್ಲೂ ನೀವು ಕೂಲ್ ಆಗಿರಲು ಬಯಸಿದ್ರೆ ಕಾಟನ್, ಲೆನಿನ್ ಅಥವಾ ಜೆರ್ಸಿಯಿಂದ ಮಾಡಿದ ಟೀಶರ್ಟ್‌ಳನ್ನು ಧರಿಸಿ.
ಬೇಸಿಗೆಯಲ್ಲಿ ಯಾವಾಗಲೂ ಶಾರ್ಟ್ ಸ್ಲೀವ್ ಅಥವಾ ತೋಳುಗಳಿಲ್ಲದ ಬಟ್ಟೆಗಳನ್ನು ಧರಿಸಿ. ಈ ಶೈಲಿಯ ಬಟ್ಟೆಗಳು ನಿಮ್ಮ ಚರ್ಮವನ್ನು ತೇವಾಂಶದಲ್ಲಿ ಉಸಿರಾಡಲು ಅವಕಾಶ ಮಾಡಿಕೊಡುತ್ತವೆ.
ನೀವು ಆಫೀಸ್‌ಗೆ ಹೋಗುವವರಾಗಿದ್ದರೆ ಸಣ್ಣ ತೋಳಿನ ಕಾಲರ್ ಬಟನ್-ಡೌನ್ ಬಟ್ಟೆ ಧರಿಸಿ. ಗೆಟ್ ಟುಗೆದರ್‌ಗೆ ಅಥವಾ ಹೊರಗೆ ಹೋಗುತ್ತಿದ್ದರೆ ಸ್ಲೀವ್ ಲೆಸ್ ಡ್ರೆಸ್ ಅಥವಾ ಕಂಫರ್ಟೆಬಲ್ ಆಗಿರುವ ಟೀಶರ್ಟ್ ಧರಿಸಿ.
ಬೇಸಿಗೆಯಲ್ಲಿ ಹತ್ತಿ ಬಟ್ಟೆಗಳನ್ನು ಅತ್ಯಂತ ಜನಪ್ರಿಯ ಮತ್ತು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಇದು ಹಗುರ ಮತ್ತು ಆರಾಮದಾಯಕವಾಗಿದೆ. ಹತ್ತಿಯು ಬೆವರನ್ನು ಬೇಗನೆ ಹೀರಿಕೊಂಡು ದೇಹವನ್ನು ತಂಪಾಗಿಡುತ್ತದೆ. ಇದು ಹಲವು ಬಣ್ಣಗಳು ಮತ್ತು ವಿನ್ಯಾಸಗಳಲ್ಲಿ ಲಭ್ಯವಿದೆ. ಆದ್ದರಿಂದ ಇವುಗಳನ್ನು ಬೇಸಿಗೆಯಲ್ಲಿ ಯಾವುದೇ ಸಂದರ್ಭದಲ್ಲಿ ಧರಿಸಬಹುದು.
ಬೇಸಿಗೆ ಕಾಲಕ್ಕೆ ಲೆನಿನ್ ಕೂಡ ಉತ್ತಮ ಆಯ್ಕೆಯಾಗಿದೆ. ಇದರ ಆಕಾರವು ದೇಹದ ಶಾಖವನ್ನು ಹೊರಹೋಗಲು ಅನುವು ಮಾಡಿಕೊಡುತ್ತದೆ. ಇದು ಬೆವರು ಹೀರಿಕೊಳ್ಳುವಲ್ಲಿಯೂ ಬಹಳಷ್ಟು ಸಹಾಯ ಮಾಡುತ್ತದೆ. ಬೇಗನೆ ಒಣಗುತ್ತದೆ. ಲಿನಿನ್ ಒಂದು ಉತ್ತಮ ಬಟ್ಟೆ, ವಿಶೇಷವಾಗಿ ಕಚೇರಿಗೆ ಹೋಗುವವರಿಗೆ. ಏಕೆಂದರೆ ಇದು ಶೈಲಿ ಮತ್ತು ಸೌಕರ್ಯದ ಪರಿಪೂರ್ಣ ಸಮತೋಲನವನ್ನು ನೀಡುತ್ತದೆ.
ಕ್ರೇಪ್ ಒಂದು ಹಗುರವಾದ, ಮೃದುವಾದ ಬಟ್ಟೆಯಾಗಿದೆ. ಬಟ್ಟೆಗಳನ್ನು ತಯಾರಿಸಲು ಇದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಅದರ ನೋಟ ತುಂಬಾ ಆಕರ್ಷಕವಾಗಿದೆ. ಇದು ಸ್ಯಾಟಿನ್ ನಷ್ಟು ಹೊಳೆಯುತ್ತಿಲ್ಲವಾದರೂ, ಅದರ ವಿನ್ಯಾಸವು ಬೇಸಿಗೆಯಲ್ಲಿ ಪರಿಪೂರ್ಣ ಆಯ್ಕೆಯಾಗಿದೆ.
ಬೇಸಿಗೆಯಲ್ಲಿ ಆರಾಮದಾಯಕ, ಹಗುರವಾದ ಬಟ್ಟೆಗಳನ್ನು ಧರಿಸುವುದು ಮುಖ್ಯ. ಇದರಿಂದ ನೀವು ದಿನವಿಡೀ ತಾಜಾ ಮತ್ತು ತಂಪಾಗಿರುತ್ತೀರಿ. ಬೇಸಿಗೆಯಲ್ಲಿ ಸ್ಟೈಲಿಶ್ ಮತ್ತು ಆರಾಮದಾಯಕವಾಗಿರಲು ಈ ಬೇಸಿಗೆಯಲ್ಲಿ ಈ ಉಡುಪನ್ನು ನಿಮ್ಮ ವಾರ್ಡ್ರೋಬ್‌ಗೆ ಖಂಡಿತ ಸೇರಿಸಿ.