Clothes Donate: ನಾವು ಬಳಸಿದ ಬಟ್ಟೆಗಳನ್ನು ಇತರರಿಗೆ ನೀಡುವುದು ಒಳ್ಳೆಯದು ಆದರೆ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಅವಶ್ಯಕ ಎಂದು ಹೇಳಲಾಗುತ್ತದೆ. ಇತರರಿಗೆ ಸಹಾಯ ಮಾಡುವುದು ತುಂಬಾ ಒಳ್ಳೆಯ ಗುಣ ಎನ್ನುತ್ತಾರೆ.
ಮನೆಗೆ ಬರುವ ಭಿಕ್ಷುಕರಿಗೆ ಮತ್ತು ಕೆಲವು ಬಡವರಿಗೆ ಹಣ, ಬಟ್ಟೆ ಮುಂತಾದ ವಸ್ತುಗಳನ್ನು ಕೊಡುತ್ತೇವೆ. ಕೆಲವರು ತಾವು ಬಳಸಿದ ಬಟ್ಟೆಗಳನ್ನು ತಮಗೆ ಹೊಂದಿಕೆಯಾಗದ ಬಟ್ಟೆ ಎಂಬಿತ್ಯಾದಿ ಕಾರಣಗಳಿಂದ ಬೇರೆಯವರಿಗೆ ನೀಡುತ್ತಾರೆ. ನಾವು ಈ ರೀತಿ ಇತರರಿಗೆ ವಸ್ತ್ರಗಳನ್ನು ದಾನ ಮಾಡಿದರೆ ಏನಾಗುತ್ತದೆ ಎಂದು ಈಗ ತಿಳಿಯೋಣ.
ಬಳಸಿದ ಬಟ್ಟೆಗಳನ್ನು ದಾನ ಮಾಡುವಲ್ಲಿ ನಾವು ಜಾಗರೂಕರಾಗಿರಬೇಕು. ಹರಿದ ಅಥವಾ ಬಣ್ಣಬಣ್ಣದ ಕಳಪೆ ಬಟ್ಟೆಗಳನ್ನು ದಾನ ಮಾಡಿದರೆ ಪುಣ್ಯ ಬರುವುದಿಲ್ಲ ಆದರೆ ಪಾಪ ಬರುತ್ತದೆ ಎಂದು ಹೇಳಲಾಗುತ್ತದೆ. ಹರಿದ ಬಟ್ಟೆಗಳನ್ನು ದಾನ ಮಾಡದಿರುವುದು ಉತ್ತಮ ಎನ್ನಲಾಗಿದೆ.
ವಸ್ತ್ರದಾನ ಮಾಡಬೇಕೆಂದು ಅನಿಸಿದರೆ ಒಳ್ಳೆಯ ವಸ್ತ್ರಗಳನ್ನು ದಾನ ಮಾಡುವುದು ಉತ್ತಮ. ಇಲ್ಲವಾದರೆ ಹೊಸದನ್ನು ಖರೀದಿಸಿ ದಾನ ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ ಎನ್ನುತ್ತಾರೆ.
ಬಳಸಿದ ಬಟ್ಟೆಗಳು ಹರಿದು ಹೋಗದೆ ಸುಸ್ಥಿತಿಯಲ್ಲಿದ್ದರೆ ಇತರರಿಗೆ ದಾನ ಮಾಡುವುದು ಉತ್ತಮ ಎನ್ನುತ್ತಾರೆ. ನಾವು ವಸ್ತ್ರಗಳನ್ನು ನೀಡಿದಾಗ, ಸ್ವೀಕರಿಸುವವರು ಹೆಚ್ಚು ತೃಪ್ತರಾಗುತ್ತಾರೆ, ನಮಗೆ ಹೆಚ್ಚು ಪುಣ್ಯ ಸಿಗುತ್ತದೆ.
ಸೋಮವಾರ ಬಿಳಿ ವಸ್ತ್ರ, ಮಂಗಳವಾರ ಕೆಂಪು ವಸ್ತ್ರ, ಬುಧವಾರ ಹಸಿರು ಅಥವಾ ನೀಲಿ ವಸ್ತ್ರ, ಶನಿವಾರ ಕಪ್ಪು ವಸ್ತ್ರಗಳನ್ನು ದಾನ ಮಾಡಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಲಾಗುತ್ತದೆ.
ಎಂದೋ ಧರಿಸಿದ ಬಟ್ಟೆಯನ್ನು ಹಾಗೆಯೇ ಎತ್ತಿಟ್ಟಿರುತ್ತೀರಿ. ಮನೆಗೆ ಭಿಕ್ಷುಕರು ಬಂದಾಗ ಅಥವಾ ಮನೆ ಸ್ವಚ್ಛಗೊಳಿಸುವ ವೇಳೆ ಇದನ್ನು ತೆಗೆದು, ಬೇರೆಯವರಿಗೆ ದಾನ ಮಾಡ್ತೀರಿ. ಹೀಗೆ ಮಾಡಿದಲ್ಲಿ ದಾನದ ಫಲ ನಿಮಗೆ ಸಿಗೋದಿಲ್ಲ. ಇದ್ರಿಂದ ನಷ್ಟವೇ ಹೆಚ್ಚು. ಯಾವುದೇ ಹಳೆ ಬಟ್ಟೆಯನ್ನು ದಾನ ಮಾಡುವ ಮೊದಲು ನೀವು, ಆ ಬಟ್ಟೆಯನ್ನು ಸ್ವಚ್ಛಗೊಳಿಸಿ ನೀಡಬೇಕು.
ನೀವು ಬಟ್ಟೆಯನ್ನು ಕ್ಲೀನ್ ಮಾಡದೆ ಹಾಗೆಯೇ ದಾನ ಮಾಡಿದ್ರೆ ನಿಮ್ಮ ಬಟ್ಟೆಯನ್ನು ಧರಿಸಿದ ವ್ಯಕ್ತಿಯ ದೇಹದ ಜೊತೆ ನಿಮ್ಮ ಪ್ರಭೆ ಸಂಪರ್ಕಕ್ಕೆ ಬರುತ್ತದೆ. ಅದ್ರಿಂದ ಅವರ ದೌರ್ಭಾಗ್ಯ ನಿಮಗೆ ಅಂಟಿಕೊಳ್ಳುತ್ತದೆ. ಇದಲ್ಲದೆ ಶುಕ್ರ ನಿಮ್ಮ ಜಾತಕದಲ್ಲಿ ಒಳ್ಳೆ ಸ್ಥಾನದಲ್ಲಿರುವಾಗ ನೀವು ಹಳೆ ಬಟ್ಟೆಯನ್ನು ದಾನ ಮಾಡಿದ್ರೆ ನಿಮ್ಮ ಅದೃಷ್ಟ ಕೆಟ್ಟಂತೆ ಎನ್ನಲಾಗುತ್ತದೆ.
ಗಮನಿಸಿ : ಇಲ್ಲಿರುವ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲ ಹಾಕಿ ನೀಡಲಾಗಿದೆ. ಇದು ಮಾಹಿತಿಯ ಉದ್ದೇಶಕ್ಕಾಗಿ ಮಾತ್ರವಾಗಿದೆ.
‘ರಾಮ ಶಾಮ ಭಾಮ’ ಖ್ಯಾತಿಯ ನಟಿ Urvashi ಮಗಳನ್ನು ನೋಡಿದ್ದೀರಾ? ಅಮ್ಮನನ್ನೂ ಮೀರಿಸುವ ಸುಂದ್ರಿ