Sleep:ಇಂದಿನ ಕಾಲದ ಜನರ ಜೀವನ ಶೈಲಿಯಲ್ಲಿ ಹಲವು ಬದಲಾವಣೆಯಾಗಿವೆ. ಈ ಬದಲಾವಣೆಯಲ್ಲಿ ಒಂದು ರಾತ್ರಿ ಬೇಗ ಮಲಗುವುದು ಮತ್ತು ಒಂದು ರಾತ್ರಿ ಲೇಟಾಗಿ ಮಲಗುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ, ಪ್ರತಿ ದಿನ ಲೇಟಾಗಿ ಮಲಗುವುದರಿಂದ ಅನೇಕ ರೋಗಗಳಿಗೆ ಆಹ್ವಾನ ನೀಡಲಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿದಿನಾ ರಾತ್ರಿ 11 ಗಂಟೆ ಮೇಲೆ ಮಲಗುವುದರಿಂದ ಏನೆಲ್ಲಾ ಪರಿಣಾಮಗಳು ಬೀಳುತ್ತೆ ಎನ್ನುವುದನ್ನು ತಜ್ಞರು ಹೇಳಿದ್ದಾರೆ ನೋಡೋಣ..
ಇದನ್ನೂ ಓದಿ:ಡಿಜಿಪಿ ಅಥವಾ ಸೇನಾ ಜನರಲ್ ಯಾರು ಪವರ್ಫುಲ್?; ಯಾವ ಹುದ್ದೆಗೆ ಅಧಿಕ ಸಂಬಳ ಗೊತ್ತೆ! | DGP Army General
ಪ್ರತಿದಿನ ರಾತ್ರಿ 11 ಗಂಟೆಗೆ ಮಲಗುವುದರಿಂದ ನಿಮ್ಮ ಆರೋಗ್ಯ ಮತ್ತು ಜೀವನ ಶೈಲಿಯ ಮೇಲೆ ನಕರಾತ್ಮಕ ಪರಿಣಾಮಗಳು ಬಿಳಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ನಿದ್ರೆಯು ದೇಹ ಚೇತರಿಸಿಕೊಳ್ಳಲು ಅನವು ಮಾಡಿಕೊಡುತ್ತದೆ. ನಿದ್ದೆಯೂ ಮಾನಸಿಕ ಆರೋಗ್ಯಕ್ಕೆ ಕೂಡ ನೇರ ಸಂಬಂಧವಿದೆ. ಹೀಗಾಗಿ, ತಡವಾಗಿ ಮಲಗುವ ಅಭ್ಯಾಸವು ಕ್ರಮೇಣ ದೇಹದ ಕಾರ್ಯನಿರ್ವಾಹಿಸುವ ವಿಧಾನದ ಮೇಲೆ ಪರಿಣಾಮ ಬೀರುತ್ತದೆ. ನೀವು ರಾತ್ರಿ 11 ಗಂಟೆಗೆ ಮಲಗುವುದು ದೊಡ್ಡ ಸಮಸ್ಯೆಯಲ್ಲ. ಆದರೆ, ಇದು ದಿನ ನಿತ್ಯ ಅಭ್ಯಾಸವಾದ್ರೆ ಕ್ರಮೇಣ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ.
ಇದನ್ನೂ ಓದಿ:ರೈತ ಮುಖಂಡ ಶಾಂತಕುಮಾರ್ ಮಣಿಪಾಲ್ ಆಸ್ಪತ್ರೆಗೆ ದಾಖಲು|Farmer leader
ಹೀಗಾಗಿ, ದೇಹಕ್ಕೆ 7-8 ತಾಸು ನಿದ್ದೆಯ ಅವಶ್ಯಕತೆ ಇದೆ. ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ರೆ ದಿನವಿಡೀ ಅಲಸ್ಯ ಅನುಭವಿಸುತ್ತೀರಿ. ಅಲ್ಲದೆ, ಆರೋಗ್ಯದ ಮೇಲೆ ಕಟ್ಟ ಪರಿಣಾಮವಾಗಲಿದೆ. ಈ ನಿಟ್ಟಿನಲ್ಲಿ, ಆಯುರ್ವೇದ ತಜ್ಞರು ಪ್ರತಿದಿನ ರಾತ್ರಿ 11 ಗಂಟೆಯ ನಂತರ ನಿದ್ರೆ ಮಾಡದಿರುವುದು ನಮ್ಮ ದೇಹಕ್ಕೆ ತುಂಬಾ ಹಾನಿಕಾರಕ ಮತ್ತು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಎಚ್ಚರಿಸುತ್ತಾರೆ. ತಡರಾತ್ರಿ ಮಲಗುವುದರಿಂದ ನಿದ್ರೆಯ ಗುಣಮಟ್ಟ ಹಾಳಾಗುವುದಲ್ಲದೆ, ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:ನಿಮ್ಮ ಒರಿಜಿನಲ್ Aadhaar ಹೊರ ತರಲು ಭಯವೇ?; ಚಿಂತೆ ಬಿಡಿ ಉಚಿತವಾಗಿ ವರ್ಚುವಲ್ ಆಧಾರ್ ಡೌನ್ಲೋಡ್ ಮಾಡಿ: ಹೇಗೆಂಬುದು ಇಲ್ಲಿದೆ ನೋಡಿ..
ತಜ್ಞರು ಹೇಳೊದೇನು ..?
ರಾತ್ರಿ 11 ಗಂಟೆಯ ನಂತರ ನೀವು ಮಲಗಿದರೆ ನಿಮ್ಮ ದೇಹ ತೊಂದರೆಗೊಳಗಾಗುತ್ತದೆ. ನಿಮಗೆ ದೀರ್ಘ ವಿಶ್ರಾಂತಿಯ ನಿದ್ರೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಇದರಿಂದಾಗಿ, ನೀವು ಬೆಳಿಗ್ಗೆ ಎದ್ದಾಗ ದಣಿವು ಮತ್ತು ಆಲಸ್ಯವನ್ನು ಅನುಭವಿಸುತ್ತೀರಿ. ಇದರೊಂದಿಗೆ, ತಡವಾಗಿ ಮಲಗುವುದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮೆದುಳು ಸರಿಯಾದ ಸಮಯಕ್ಕೆ ವಿಶ್ರಾಂತಿ ಪಡೆಯದ ಕಾರಣ ತಡರಾತ್ರಿಯವರೆಗೆ ಎಚ್ಚರವಾಗಿರುವುದು ಒತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತದೆ. ಇದು ಮನಸ್ಥಿತಿಯಲ್ಲಿ ಬದಲಾವಣೆಗಳು, ಕಿರಿಕಿರಿ ಮತ್ತು ಏಕಾಗ್ರತೆಯ ಕೊರತೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.(ಏಜೆನ್ಸೀಸ್)
ಡಿಜಿಪಿ ಅಥವಾ ಸೇನಾ ಜನರಲ್ ಯಾರು ಪವರ್ಫುಲ್?; ಯಾವ ಹುದ್ದೆಗೆ ಅಧಿಕ ಸಂಬಳ ಗೊತ್ತೆ! | DGP Army General