Neem Leaves Benefits: ಬೇವಿನ ಮರದ ಪ್ರತಿಯೊಂದು ಭಾಗವು ನಮಗೆ ತುಂಬಾ ಉಪಯುಕ್ತವಾಗಿದೆ. ಬೇವಿನ ಔಷಧೀಯ ಗುಣಗಳು ಅಷ್ಟೆ ಅಲ್ಲ. ಆಯುರ್ವೇದ ತಜ್ಞರು ಹೇಳುವಂತೆ ಬೇವಿನ ಸೊಪ್ಪಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. ಬೇವಿನ ಬೀಜಗಳು, ಎಲೆಗಳು, ಹೂವುಗಳು ಮತ್ತು ತೊಗಟೆಯಿಂದ ಅನೇಕ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸಬಹುದು. ಚಳಿಗಾಲದಲ್ಲಿ ವಿಶೇಷವಾಗಿ ಬೇವಿನ ಎಲೆಗಳನ್ನು ಬಳಸುವುದರಿಂದ ಆಗುವ ಪ್ರಯೋಜನಗಳನ್ನು ಇಲ್ಲಿ ತಿಳಿಯೋಣ.
ಒಂದು ಪಾತ್ರೆಯಲ್ಲಿ ಬೇವಿನ ಎಲೆ ನೀರಿನಲ್ಲಿ ಕುದಿಸಿ ಮತ್ತು ಆ ನೀರಿಗೆ ಸ್ವಲ್ಪ ಅರಿಶಿನ, ಉಪ್ಪು, ಜೀರಿಗೆ, ಧನಿಯಾ ಪುಡಿ ಮತ್ತು ಶುಂಠಿ ಸೇರಿಸಿ ಚೆನ್ನಾಗಿ ಕುದಿಸಿ. ಆ ನಂತರ ನೀರನ್ನು ಸೋಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಅಥವಾ ಸಕ್ಕರೆ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ಶೀತ ತಕ್ಷಣ ಕಡಿಮೆಯಾಗುತ್ತದೆ.
ಬೇವಿನ ಎಲೆಯನ್ನು ನುಣ್ಣಗೆ ರುಬ್ಬಿಕೊಂಡು ಮಿಶ್ರಣವನ್ನು ಹಣೆಗೆ ಹಚ್ಚಿಕೊಳ್ಳಿ. ಹೀಗೆ ಒಂದು ಗಂಟೆ ಇಟ್ಟು ತೊಳೆದರೆ ತಲೆನೋವು ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಬೇವಿನ ಸೊಪ್ಪಿನ ಕಷಾಯ ಮಾಡಿ ತೆಗೆದುಕೊಳ್ಳಬಹುದು.
ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಮನೆಯಲ್ಲಿ ಚಿಮುಕಿಸಿ. ಹೀಗೆ ಮಾಡಿದರೆ ಸೊಳ್ಳೆಗಳು ಬರುವುದಿಲ್ಲ. ಅದೇ ರೀತಿ ಸೊಳ್ಳೆಗಳು ಕಚ್ಚಿದಾಗ ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ.
ಬೇವಿನ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಅದರ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಫೇಸ್ ಪ್ಯಾಕ್ ರೀತಿಯಲ್ಲಿ ಮುಖಕ್ಕೆ ಹಚ್ಚಿದರೆ ಮುಖದ ಚರ್ಮ ಕಾಂತಿಯುತವಾಗುತ್ತದೆ.