Captaincy:ಇಂಡಿಯನ್ ಪ್ರೀಮಿಯರ್ ಲೀಗ್ 2025ರ 18 ಆವೃತ್ತಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಹೊಸ ಕ್ಯಾಪ್ಟನ್ ಆಗಿ ರಜತ್ ಪಾಟೀದಾರ್ ಅವರನ್ನ ಇದೀಗ ನೇಮಕ ಮಾಡಲಾಗಿದೆ. ಇಲ್ಲಿಯವರೆಗೂ RCB ಯಲ್ಲಿ ಯಾವ ಆಟಗಾರರ ನಾಯಕತ್ವದಡಿಯಲ್ಲಿ ವಿರಾಟ್ ಕೊಹ್ಲಿ ಆಡಿದ್ದಾರೆ ಎಂದಬುವುದು ನೋಡೋಣ..
ರಾಹುಲ್ ಡ್ರಾವಿಡ್: ಟೀಮ್ ಇಂಡಿಯಾದ ದಂತಕತೆ ಮಾಜಿ ಆಟಗಾರ ಕನ್ನಡಿಗ ರಾಹುಲ್ ಡ್ರಾವಿಡ್ RCB ತಂಡದ ಮೊದಲ ನಾಯಕರಾಗಿದ್ದರು. ವಾಲ್ಸ್(ಅಡ್ಡಗೋಡೆ) ನೇತೃತ್ವದಡಿಯಲ್ಲಿ ಕೊಹ್ಲಿ ಆಡಿದ್ದಾರೆ.
ಕೇವಿನ್ ಪೀಟರ್ಸನ್: ಇಂಗ್ಲೆಂಡ್ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಆರ್‌ಸಿಬಿ ಎರಡನೇ ನಾಯಕರಾಗಿದ್ದರು. ಕೇವಿನ್ ಆರ್ಸಿಬಿಯ 6 ಪಂದ್ಯಗಳಿಗೆ ಮಾತ್ರ ಕ್ಯಾಪ್ಟನ್ ಆಗಿದ್ದರು. ಇವರ ನಾಯಕತ್ವದಲ್ಲಿ ವಿರಾಟ್ ಬ್ಯಾಟ್ ಬೀಸಿದ್ದಾರೆ.
ಅನಿಲ್ ಕುಂಬ್ಳೆ: ಟೀಮ್ ಇಂಡಿಯಾದ ಮಾಜಿ ಲೆಜಂಡರಿ ಸ್ಪೀನ್ನರ್ ಅನಿಲ್ ಕುಂಬ್ಳೆ ವಿರಾಟ್ಗೆ ಮೂರನೇ ನಾಯರಾಗಿದ್ದರು.
ಡೇನಿಯಲ್ ವೆಟ್ಟೋರಿ: ನ್ಯೂಜಿಲೆಂಡ್‌ನ ಮಾಜಿ ಅನುಭವಿ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿಗೆ ನಾಲ್ಕನೇ ನಾಯಕರಾದರು.
ಫಾಫ್ ಡು ಪ್ಲೆಸಿಸ್: ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ 2021ರಲ್ಲಿ ಆರ್‌ಸಿಬಿ ತಂಡದ ನಾಯಕರಾದರು. 2021ರ ನಂತರ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಈ ಮೂಲಕ ಫಾಫ್ ಡು ಪ್ಲೆಸಿಸ್ ಆರ್‌ಸಿಬಿಯಲ್ಲಿ ಕೊಹ್ಲಿಗೆ ಐದನೇ ನಾಯಕರಾದರು.(ಏಜೆನ್ಸೀಸ್)
ಚಾಂಪಿಯನ್ಸ್ ಟ್ರೋಫಿಗೆ ಅಚ್ಚರಿ ಬಹುಮಾನ ಘೋಷಿಸಿದ ICC: ಗೆದ್ದ ತಂಡಕ್ಕೆ ಸಿಗಲಿದೆ ಬಂಪರ್!