ಸಮಾಜ ಸದಾ ಸ್ಮರಿಸುವಂಥ ಕೆಲಸ ಮಾಡಿ

blank

ಸೊರಬ: ಮನುಷ್ಯ ಹುಟ್ಟಿದ ಹಾಗೂ ಕಟ್ಟಿದ ಮನೆ ಬಿಟ್ಟು ಇಹಲೋಕ ತ್ಯಜಿಸುವ ಮುನ್ನ ಮಧ್ಯದಲ್ಲಿ ಬದುಕು ಗಟ್ಟಿಗೊಳ್ಳುವಂಥ ಕಾರ್ಯಗಳನ್ನು ಮಾಡಿದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ ಎಂದು ಜಡೆ ಸಂಸ್ಥಾನ ಹಾಗೂ ಸೊರಬ ಮುರುಘಾ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುಘಾ ಮಠದಲ್ಲಿ ಶುಕ್ರವಾರ ಶೀಗೆ ಹುಣ್ಣಿಮೆ ಪ್ರಯುಕ್ತ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪರಂಪರೆಯಲ್ಲಿ ಪುರಾಣ ಪ್ರವಚನಗಳಿಗೆ ತುಂಬ ಮಹತ್ವವಿದೆ. ಮಾನವ ತನ್ನ ಬದುಕಿನಲ್ಲಿ ಗಟ್ಟಿಯಾದ ಕಾರ್ಯವನ್ನು ಸಮಾಜಕ್ಕೆ ನೀಡಿದಾಗ ಅದಕ್ಕೆ ಅರ್ಥ ಬರುತ್ತದೆ. ಉತ್ತಮ ಸಂಸ್ಕಾರ, ಆಚಾರ, ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು ಎಂದರು.
ಭೂಮಿ ತಾಯಿಯ ಬಯಕೆಗಳನ್ನು ಈಡೇರೆಸುವ ನಿಮಿತ್ತವಾಗಿ ಆಚರಿಸುವ ಭೂಮಿ ಹುಣ್ಣಿಮೆ ಹಬ್ಬ ಮಹತ್ವವನ್ನು ಹೊಂದಿದೆ. ಭೂಮಿ ತಾಯಿಗೆ ತನ್ನದೇ ಆದ ಪಾವಿತ್ರ್ಯತೆ ಇದ್ದು, ಮಾನವನಿಗೆ ಉಪಕಾರ ಮಾಡುತ್ತ ಬಂದಿದೆ. ಆದರೆ ಮನುಷ್ಯನ ದುರಾಸೆಯಿಂದ ಅಹಿತಕರ ಘಟನೆಗಳು ನಡೆಯುತ್ತಿವೆ. ಭೂಮಿಯಲ್ಲಿ ನದಿಗಳು ಸೇರಿ ಅಪಾರ ಪ್ರಮಾಣದ ಪ್ರಾಕೃತಿಕ ಸಂಪತ್ತು ಇದೆ. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಾನವ ಸಮಾಜ ಮುಂದಾಗಬೇಕು ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಗೌಡ ಮಾತನಾಡಿ, ಭೂಮಿ ಮತ್ತು ರೈತನಿಗೆ ಅವಿನಾಭಾವ ಸಂಬಂಧವಿದೆ. ರೈತ ಕಾಯಕದಲ್ಲೇ ಶ್ರೇಷ್ಠನಾಗಿದ್ದಾನೆ. ಅವನ ಗೌರವಕ್ಕೆ ಧಕ್ಕೆ ಬಾರದಂತೆ ಸಮಾಜ ನಡೆದುಕೊಳ್ಳಬೇಕು. ರೈತರು ಬೆಳೆದ ಆಹಾರ ದೇವರು ನೀಡಿದ ಪ್ರಸಾದಕ್ಕೆ ಸಮಾನ ಎಂದು ಅಭಿಪ್ರಾಯಪಟ್ಟರು.
ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ ಮಾತನಾಡಿ, ಸಕಲ ಜೀವರಾಶಿಗಳಿಗೆ ಪರಮಾತ್ಮನ ಆಶೀರ್ವಾದವಿದೆ. ದೈವ ಇಚ್ಛೆಯಂತೆ ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತವೆ. ಪ್ರಕೃತಿಯನ್ನು ಬಿಟ್ಟು ಮಾನವ ಜೀವಿ ಬದುಕಲು ಸಾಧ್ಯವಿಲ್ಲ. ಅಂತಹ ಪ್ರಾಕೃತಿಕ ಸಂಪತ್ತನ್ನು ಎಲ್ಲರೂ ರಕ್ಷಿಸಬೇಕಾಗಿದೆ ಎಂದರು.
ಮಠದ ಕಾರ್ಯದರ್ಶಿ ಡಿ. ಶಿವಯೋಗಿ, ಸುಶೀಲಮ್ಮ, ಲಿಂಗರಾಜ್ ಇತರರಿದ್ದರು.

Share This Article

ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…

ಟಾಯ್ಲೆಟ್​​ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್​ ವಿಧಾನ | Tips

ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…

ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips

ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…